ಸುದ್ದಿಗಳು

‘ತಿರುಮಲ’ದಲ್ಲಿ ಅಭಿಮಾನಿಗಳಿಗೆ ಅಚ್ಚರಿ ಮೂಡುಸಿದ ಸಮಂತಾ!!

ತಿರುಮಲ,ಆ.08: ನಟಿ ಸಮಂತಾ ಟಾಲಿವುಡ್ನ ಚಿತ್ರರಂಗದಲ್ಲಿ ಅತೀ ಉತ್ತುಂಗದಲ್ಲಿರುವ ನಟಿ. ಆಕೆಯ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ.  ಹೀಗಿರುವಾಗ ತಮ್ಮ ಬಿಡುವಿನ ಸಮಯದಲ್ಲಿ ಸಮಂತಾ ಮೊನ್ನೆಯಷ್ಟೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿ ದೇವರ ದರ್ಶನ ಪಡೆದಿದ್ದರು. ಸಮಂತಾ ತಿಪ್ಪನ ಬಳಿಗೆ ಇದೇ ಮೊದಲು ಹೋಗುವುದಲ್ಲ.. ಈ ಹಿಂದೆ ಸಾಕಷ್ಟು ಬಾರಿ ತಿರುಪತಿಗೆ ಭೇಟಿ ನೀಡಿದ್ದಾರೆ. ಆದರೆ, ಹಿಂದೆಲ್ಲದಹೊಂತ ಈ ಬಾರಿ ಸಮಂತಾ ನೀಡಿದ ಭೇಟಿ ವಿಶೇಷವಾಗಿತ್ತು ಯಾಕೆ ಅಂತ ಕೇಳುತ್ತೀರಾ? ಮುಂದೆ ಓದಿ….

ಈ ಸಲ ಸಮಂತಾ ತನ್ನ ಸ್ನೇಹಿತೆ ರಮ್ಯಾ ಸುಬ್ರಹ್ಮಣ್ಯನ್ ಜತೆ ತಿರುಪತಿಯಲ್ಲಿರುವ 3500 ಮೆಟ್ಟಿಲುಗಳನ್ನು ಎರಡೂವರೆ ತಾಸಿನಲ್ಲಿ ಏರುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಜನ ಸಾಮಾನ್ಯರಂತೆ ಎಲ್ಲರೊಂದಿಗೆ ಅತೀ ಉತ್ಸಾಹದಿಂದ ಮೆಟ್ಟಿಲುಗಳನ್ನೇರಿ ಸ್ವಾಮಿಯ ದರ್ಶನ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಇದು ಸಮಂತಾ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದೆ. ಇದರ ಜತೆಗೆ ಸಮಂತಾ ದೈಹಿಕವಾಗಿ ಎಷ್ಟು ಫಿಟ್ ​ಇದ್ದಾರೆ ಎಂದು ತೋರಿಸಿದ್ದಾರೆ.

ಸ್ಟಾರ್ ನಟರಾದ ಮಾತ್ರಕ್ಕೆ ತಾನು ದೊಡ್ಡ ಜನ ಎಂಬ ಅಹಂ ಇರಬೇಕೆಂದಿಲ್ಲ , ಜನ ಸಾಮಾನ್ಯರಲ್ಲಿ ತಾವೂ ಒಬ್ಬರಾಗಬಹುದು ಎಂಬುದಕ್ಕೆ ಸಮಂತಾ ಉತ್ತಮ ಉದಾಹರಣೆ ಏನಂತೀರಾ?

Tags