ಸುದ್ದಿಗಳು

ಏನು ?ಈ ಕಾರಣಕ್ಕೆ ಸಮಂತಾ ದೇವರಿಗೆ ಪೂಜೆ ಮಾಡಲ್ವಂತೆ!!

ಆಂಧ್ರ,ಜು.25: ಸಮಂತಾ ಟಾಲಿವುಡ್ ಹಾಗೂ ಕಾಲಿವುಡ್ ನ ಬ್ಯೂಟಿ ಕ್ವೀನ್.  ಈಗ ಆಕೆ ಕನ್ನಡದ ಯೂ ಟರ್ನ್ ಚಿತ್ರ ರಿಮೇಕ್ ನಲ್ಲಿ ಕೂಡ ನಟಿಸಲಿದ್ದಾಳೆ. ಅಷ್ಟೇ ಅಲ್ಲದೆ ತನ್ನ ಪತಿಯೊಂದಿಗೆ ನಾಲ್ಕನೇ ಬಾರಿ ಹಾಗೂ ಮದುವೆಯಾದ ನಂತರ ಮೊದಲನೇ ಬಾರಿ ಬಣ್ಣ ಹಚ್ಚಲಿದ್ದಾರೆ. ಎನ್ ಸಿ 17 ಎಂಬ ಶೀರ್ಷಿಕೆಯನ್ನು ಇಟ್ಟಿದ್ದಾರೆ ಹಾಗೂ ಈ ಚಿತ್ರವನ್ನು ಶಿವ ನಿರ್ವಂ ನಿರ್ದೇಶಿಸಲಿದ್ದಾರೆ. ಈ ಚಿತ್ರದ ಮುಹೂರ್ತವು ಹೈದರ್ಬಾದ್ ನಲ್ಲಿ ನಡೆಯಿತು ಆದರೆ ಇಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಅದೇನಪ್ಪಾ ಅಂದರೆ ಅರ್ಚಕರು ಸಮಂತಾಗೆ ತೆಂಗಿನಕಾಯಿ ಒಡೆಯಲು ಕೊಟ್ಟರು. ಆದರೆ ಪಾಪ ನಮ್ಮ ಸಮಂತಾಗೆ ಅದೆಷ್ಟು ಬಾರಿ ತೆಂಗಿನಕಾಯಿ ಒಡೆಯಲು ಪ್ರಯತ್ನಿಸಿದಳೋ ಗೊತ್ತಿಲ್ಲ, ಅದು ಎರಡು ಭಾಗ ಆಗಲೇ ಇಲ್ಲ. ಸಮಂತಾಳ ಪರದಾಟ ಅಲ್ಲಿ ಎಲ್ಲರಿಗೂ ನಗೆ ತರಿಸುವಂತೆ ಮಾಡಿದೆ. ಸಮಂತಾಳ ಈ ಪರದಾಟ ನೋಡಿ ಪಾಪ ಕೊನೆಗೆ ಆ  ದೇವರೇ ಬರಬೇಕಾಯಿತು ಅನ್ಸುತ್ತೆ.

ಈ ವಿಷಯವನ್ನು ಸಮಂತಾ ಜಾಲಾತಾಣಗಳಲ್ಲಿ ಹಂಚಿಕೊಂಡಿದ್ದಾಳೆ..  “ಇದು ನನ್ನ ಜೀವನದ ಒಂದು ಕಥೆ. ಇದೇ ಕಾರಣಕ್ಕೆ ನನಗೆ ಸಿನಿಮಾ ಮುಹೂರ್ತಕ್ಕೆ ಹೋಗಲು ಇಷ್ಟವಿಲ್ಲ” ಎಂದು ಬರೆದುಕೊಂಡಿದ್ದಾರೆ.. ಈ ಬ್ಯೂಟಿ ಶಿವ ಕಾರ್ತಿಕೇಯನ್ ಜೊತೆಯಾಗಿ “ಸೀಮರಾಜ” ಚಿತ್ರದಲ್ಲಿ ಹಾಗೂ ವಿಜಯ್ ಜೊತೆ  “ಸೂಪರ್ ಡಿಲಕ್ಸ್” ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ..

Tags