ಸುದ್ದಿಗಳು

ಇದೆಂಥಾ..ವೃತ್ತಿ ಪರತೆ..?!? …ತಾಯಿಯಾಗುವ ಆಸೆ…ಸಮಂತಾಗೆ!, …ಒಲ್ಲೆಯೆಂದ ತಂದೆ!!

ನಾನು ತಾಯಿ ಆಗುವುದಕ್ಕೆ ರೆಡಿ.., ಹಾಗೆಂದ ಮಾತ್ರಕ್ಕೆ ನನ್ನ ಗಂಡ ತಯಾರಿಲ್ಲವೇ…!?!

ಹೈದರಾಬಾದ್,ಸೆ.12: ಟಾಲಿವುಡ್ ಮುದ್ದಾದ ಜೋಡಿ ಯಾರು ಅಂತ ಕೇಳಿದರೆ ಸಮಂತಾ ಹಾಗೂ ನಾಗಚೈತನ್ಯ ನೆನಪಿಗೆ ಬರುತ್ತಾರೆ. ಚೈತನ್ಯ ಮತ್ತು ಸಮಂತಾ ಮಧ್ಯೆ ಪ್ರೀತಿ ಉಂಟಾಗಿ ಕೊನೆಗೂ ಮದುವೆಯಾಗಿ ಮದುವೆಯಾಗಿ ಒಂದು ವರ್ಷ ಆಗುತ್ತಿದೆ. ಸಮಂತಾಳಿಗೆ ಈಗ ಒಂದು ಬಯಕೆ ಬಂದಂತಿದೆ. ಅದೇನಪ್ಪಾ ಅಂದರೆ ಈಗ ನನಗೆ ಮಗು ಬೇಕೆಂದು ಅನಿಸುತ್ತಿದೆ ಎಂದು ಸಮಂತಾ ತಾಯಿಯಾಗುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಮಾತನ್ನು ಸಮಂತಾ ಹೇಳಿದ್ದಾರೆ. ನಾನು ತಾಯಿ ಆಗುವುದಕ್ಕೆ ತಯಾರಿದ್ದೇನೆ ಆದರೆ ಅದು ಈಗ ಆಗುವುದಿಲ್ಲ ಎಂದು ಹೇಳಿದ್ದರು. ನಂತರ ನನಗೆ ಮಕ್ಕಳು ಬೇಕೆಂದು ಅನಿಸುತ್ತಿದೆ, ಆದರೆ ನಾಗಚೈತನ್ಯ ತಯಾರಿಲ್ಲ ಎಂಬ ಕಾರಣವನ್ನು ಕೂಡ ತಿಳಿಸಿದ್ದರು.

Image result for samantha naga chaitanya

ಆದಷ್ಟು ಬೇಗ ಸಿಹಿ ಸುದ್ದಿ

ನನಗೆ ತಾಯಿ ಆಗುವ ಆಸೆ ಇದ್ದರೂ ನಾಗಚೈತನ್ಯ ಅವರ ಆಲೋಚನೆಯೇ ಬೇರೆಯೇ ಇದೆ. ಸದ್ಯಕ್ಕೆ ನಾವು ಮಕ್ಕಳು ಬೇಡವೆಂದು ನಿರ್ಧಾರ ಮಾಡಿಕೊಂಡಿದ್ದೇವೆ. ಈ ವಿಷಯದಲ್ಲಿ ನಾನು ನಾಗಚೈತನ್ಯ ಮೇಲೆ ಒತ್ತಡ ಹೇರುವುದು ಸರಿ ಅಲ್ಲ. ಅವರು ಯಾವಾಗ ರೆಡಿ ಎಂದು ಹೇಳುತ್ತಾರೋ ಆಗಲೇ ನಾನು ಕೂಡ ತಯಾರಾಗುತ್ತೇನೆ ಎಂದರು. ಆದರೆ ಸಮಂತಾ ಆದಷ್ಟೂ ಬೇಗ ಸಿಹಿ ಸುದ್ದಿ ನೀಡುತ್ತೇವೆ ಎಂದು ಅಭಿಮಾನಿಗಳಿಗೆ ಸುಳಿವು ನೀಡಿದ್ದಾರೆ.

 

Tags