ಸುದ್ದಿಗಳು

ಮತ್ತೆ ಒಂದಾದ ‘ನಾತಿಚರಾಮಿ’ ಜೋಡಿ

‘ನಾನು ಅವನಲ್ಲಾ ಅವಳು’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟ ಸಂಚಾರಿ ವಿಜಯ್ ಇದೀಗ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಇವರ ನಟನೆಯ ‘ಮೇಲೊಬ್ಬ ಮಾಯಾವಿ’ ರಿಲೀಸ್ ಗೆ ರೆಡಿಯಿದೆ. ಇದೇ ವೇಳೆ ಅವರು ‘ನಾತಿಚರಾಮಿ’ ತಂಡದವರನ್ನು ಸೇರಿಕೊಂಡಿದ್ದಾರೆ.

ಹೌದು, ಸಂಚಾರಿ ವಿಜಯ್ ಇದೀಗ ‘ಆ್ಯಕ್ಟ್ 1978’ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನು ಮಂಸೋರೆ ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ ಹಿಂದೆ ‘ಹರಿವು’ ಮತ್ತು ‘ನಾತಿಚರಾಮಿ’ ಚಿತ್ರಗಳನ್ನು ನಿರ್ದೇಶಿಸಿದ್ದರು. ಈ ಚಿತ್ರಗಳಿಗೆ ವಿಜಯ್ ರವರೇ ನಾಯಕನಟರಾಗಿದ್ದರು. ಇದೀಗ ಮೂರನೇಯ ಬಾರಿಗೆ ನಟ-ನಿರ್ದೇಶಕರ ಜೋಡಿ ಒಂದಾಗಿದೆ.

‘ಆ್ಯಕ್ಟ್ 1978’ ಈ ಚಿತ್ರವು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಯಜ್ಞಾ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಅಚ್ಚುತ್ ಕುಮಾರ್, ಬಿ. ಸುರೇಶ್, ರಘು ಶಿವಮೊಗ್ಗ, ಕಿರಣ್ ನಾಯಕ್ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ.

ನಾನು ಮದುವೆಯಾಗುವ ಹುಡುಗ ಹೀಗಿರಬೇಕು: ನಟಿ ಮೇಘನಾ ಗಾಂವ್ಕರ್

#SanchaariVijay #SanchaariVijayMovies #Nathicharami #Act1978 #kannadaSuddigalu

Tags