ಸುದ್ದಿಗಳು

ದಶಕದ ಸಂಭ್ರಮದಲ್ಲಿ ಕನ್ನಡದ ದೀಪಿಕಾ ಪಡುಕೋಣೆ

‘ರಾವಣ’ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ನಟಿ ಸಂಚಿತಾ ಪಡುಕೋಣೆ. ವಿಶೇಷವೆಂದರೆ ಇವರ ಹೆಸರಲ್ಲಿ ಪಡುಕೋಣೆ ಇರುವುದರಿಂದ ಇವರನ್ನು ಕನ್ನಡದ ದೀಪಿಕಾ ಪಡುಕೋಣೆ ಎಂದು ಕರೆಯಲಾಗುತ್ತಿದೆ.

ವಿಶೇಷವೆಂದರೆ ಸಂಚಿತಾ ಬಣ್ಣದ ಲೋಕ ಪ್ರವೇಶಿಸಿ ದಶಕಗಳಾಗಿವೆ. ಸದ್ಯ ಈ ವರ್ಷವನ್ನು ‘ಗಡಿನಾಡು’ ಚಿತ್ರದ ಮೂಲಕ ಸಿನಿಖಾತೆ ತೆರೆಯುತ್ತಿದ್ದು, ಈ ಬಳಿಕ ಇವರು ನಟಿಸಿರುವ ‘ಮುತ್ತುಕುಮಾರ’ ಸಹ ತೆರೆಗೆ ಬರಲಿದೆ.

‘ಏನೇ ಬಂದರೂ ತಾಳ್ಮೆಯಿಂದ ಇರಬೇಕು, ಎಲ್ಲದಕ್ಕೂ ಸಮಯ ಬರಬೇಕು, ಅಲ್ಲಿಯವರೆಗೂ ಪ್ರಯತ್ನ ಜಾರಿಯಲ್ಲಿರಬೇಕು. ಈ ಹತ್ತು ವರ್ಷಗಳ ವೃತ್ತಿಜೀವನದಲ್ಲಿ ಏಳು-ಬೀಳು ಎರಡನ್ನೂ ಕಂಡಿದ್ದೇನೆ. ಆದರೆ ನಾನು ಅಂದುಕೊಂಡಷ್ಟರ ಮಟ್ಟಿಗೆ ಯಶಸ್ಸು ಸಿಕ್ಕಿಲ್ಲ. ಕೆಲವೊಮ್ಮೆ ತುಂಬ ಬೇಸರವಾಗುತ್ತದೆ. ಹಾಗಂತ ಪ್ರಯತ್ನ ಬಿಡಬಾರದು’ ಎನ್ನುವ ಸಂಚಿತಾ, ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಚಿತ್ರರಂಗ ಪ್ರವೇಶಿಸಿ ಇಂದು ಭರವಸೆಯ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಸದ್ಯ ಇವರು ರವಿಚಂದ್ರನ್ ಜೊತೆಗೆ ‘ರವಿಬೋಪಣ್ಣ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸುಲ್ತಾನ್ ಸಂಭ್ರಮ: ಹುಟ್ಟುಹಬ್ಬದ ವಿಚಾರದಲ್ಲಿ ಸಂದೇಶ ನೀಡಿದ ಚಾಲೆಂಜಿಂಗ್ ಸ್ಟಾರ್

#SanchitaPadukone #SanchitaPadukoneMovies #RaviBopanna #KannadaSuddigalu

Tags