ಸುದ್ದಿಗಳು

ತೆರೆಕಾಣಲಿರೋ ಸ್ಯಾಂಡಲ್ವುಡ್ ನ ತಾರೆಗಳ ಚಿತ್ರ ಯಾವುದು ಗೊತ್ತಾ?

ಸ್ಯಾಂಡಲ್ವುಡ್ ನ ಸ್ಟಾರ್ ನಟರ ಚಿತ್ರಗಳು

ಸ್ಯಾಂಡಲ್ವುಡ್ ಸ್ಟಾರ್ ನಟರ ಚಿತ್ರಗಳು ಯಾವಾಗ ತೆರೆಗೆ ಬರುತ್ತವೆ ಎಂದು ಸಿನಿ ಪ್ರೇಕ್ಷಕ ಕಾಯುತ್ತಲೇ ಇರುತ್ತಾನೆ.

ಬೆಂಗಳೂರು,ಆ.29: ಸ್ಯಾಂಡಲ್‌ವುಡ್‌ ನಲ್ಲಿ ವಾರಕ್ಕೆ ಏಳೆಂಟು ಚಿತ್ರಗಳು ಬಿಡುಗಡೆಯಾಗುತ್ತಿವೆ, ಅದರಲ್ಲಿ ಕೆಲವು ಚಿತ್ರಗಳು ಯಶಸ್ವಿಯಾದರೆ ಇನ್ನೂ ಕೆಲ ಚಿತ್ರಗಳು ಹೇಳೋಕೆ ಹೆಸರಿಲ್ಲದಂತೆ ಹೋಗಿರುತ್ತೆ. ಸದ್ಯ ಗಾಂಧಿನಗರದ ಸಿನಿ ಪ್ರೇಕ್ಷಕರ ಚಿತ್ತ ಸ್ಟಾರ್ ಚಿತ್ರಗಳತ್ತ. ಹಾಗಾದರೆ ಈ ವರ್ಷ ದೊಡ್ಡ ದೊಡ್ಡ ಸ್ಟಾರ್ ಚಿತ್ರಗಳು ತೆರೆಗೆ ಬರಲು ಸಜ್ಜಾಗಿರೋ ಚಿತ್ರಗಳು ಯಾವವು ? ಯಾವೆಲ್ಲ ಚಿತ್ರಗಳು ಈ ವರ್ಷ ತೆರೆಕಾಣಲು ಸಜ್ಜಾಗಿವೆ ಅನ್ನೋದನ್ನ ನೋಡೋಣ ಈ ಸ್ಟೋರಿಯಲ್ಲಿ.

ಹೌದು…. ಪ್ರತೀ ಶುಕ್ರವಾರ ಬಂದರೆ ಸಾಕು ಏಳೆಂಟು ಚಿತ್ರಗಳು ಚಿತ್ರಮಂದಿರದಲ್ಲಿ ರಾರಾಜಿಸುತ್ತಿರುತ್ತವೆ. ಇದರಲ್ಲಿ ತೆರೆಕಂಡು ಕೆಲವು ಚಿತ್ರಗಳು ಭರವಸೆ ಮೂಡಿಸಿದರೆ ಇನ್ನು ಕೆಲವು ಚಿತ್ರಗಳು ಹೆಸರೇ ಹೇಳದಂತೆ ಹೊಗಿರುತ್ತವೆ. ಇವುಗಳ ಮಧ್ಯದಲ್ಲಿ ಸ್ಯಾಂಡಲ್‌ವುಡ್‌ ನ ಸ್ಟಾರ್ ನಟರ ಚಿತ್ರಗಳು ಯಾವಾಗ ತೆರೆಗೆ ಬರುತ್ತವೆ ಎಂದು ಸಿನಿ ಪ್ರೇಕ್ಷಕ ಕಾಯುತ್ತಲೇ ಇರುತ್ತಾನೆ. ಈ ವರ್ಷ ಚಿತ್ರಿಕರಣವನ್ನೆಲ್ಲ ಮುಗಿಸಿ ತೆರೆಗೆ ಬರಲು ಸಜ್ಜಾಗಿರೋ ಚಿತ್ರಗಳು ಸಾಕಷ್ಟಿವೆ.

ಬಿಡುಗಡೆಗೆ ಸಿದ್ದ..

ಜೋಗಿ ಪ್ರೇಮ್ ನಿರ್ದೇಶನ ಮಾಡಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ಕಿಚ್ಚ ಸುದೀಪ್ ನಟಿಸಿರುವ ‘ದಿ ವಿಲನ್’ ಚಿತ್ರ ಸದ್ಯ ಚಿತ್ರಿಕರಣವನ್ನೆಲ್ಲ ಮುಗಿಸಿ ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದ ಟೀಸರ್ ಮತ್ತು ಹಾಡುಗಳಿಂದಲೇ ಪ್ರೇಕ್ಷಕರ ಗಮನವನ್ನು ಸೆಳೆದಿದ್ದು ಚಿತ್ರ ಪ್ರೇಮಿಗಳು ಕೂಡಾ ಈ ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ, ಇದೇ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಚಿತ್ರವನ್ನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಚಿತ್ರತಂಡ, ಕಾರಣಾಂತರಗಳಿಂದ ಮುಂದೆ ಹೋಗಿದೆ, ಇನ್ನೇನು ಸದ್ಯದಲ್ಲೇ ತೆರೆಗೆ ಬರಲು ತಯಾರಾಗ್ತಿದೆ.

‘ಕುರುಕ್ಷೇತ್ರ’

ಇನ್ನೂ ಚಾಲೇಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ  ಬಹು ನೀರಿಕ್ಷೆಯ ಚಿತ್ರ ‘ಕುರುಕ್ಷೇತ್ರ’, ಈ ಚಿತ್ರ ಕೂಡಾ ಚಿತ್ರಿಕರಣ ಮುಗಿಸಿದೆ, ನಾಗಣ್ಣ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ದರ್ಶನ್, ನಿಖಿಲ್ ಕುಮಾರ, ರವಿಚಂದ್ರನ್, ಅರ್ಜುನ್ ಸರ್ಜಾ,ರವಿಶಂಕರ್, ಸಾಯಿಕುಮಾರ್, ಹೀಗೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ, ಈ ಚಿತ್ರವು ಕೂಡಾ ಇದೇ ವರ್ಷದಲ್ಲಿ ಬಿಡುಗಡೆಯಾಗಲಿದ್ದು ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. ಆದಷ್ಟು ಬೇಗನೇ ಎಲ್ಲ ಕೆಲಸಗಳನ್ನ ಮುಗಿಸಿದ ನಂತ್ರ ದರ್ಶನ್ ಅವರ ಕುರುಕ್ಷೆತ್ರ ಬಿಡುಗಡೆಯಾಗಲಿ.

Related image

‘ನಟ ಸಾರ್ವಭೌಮ’

ಈ ವರ್ಷದಲ್ಲಿ ಪವರ್ ಸ್ಟಾರ್ ಪುನಿತ್ ರಾಜ್ಕುಮಾರ್ ಅವರ ಚಿತ್ರ ಕೂಡಾ ತೆರೆಗೆ ಬರಲು ತಯಾರಾಗುತ್ತಿದೆ. ಅದುವೆ ‘ನಟಸಾರ್ವಭೌಮ, ಪವನ್ ವಡೆಯರ್ ಕಥೆ ಚಿತ್ರಕಥೆ ಬರೆದು ನಿರ್ದೆಶನ ಮಾಡಿರೋ ‘ನಟಸಾರ್ವಭೌಮ’ ಪುನಿತ್ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿದೆ, ಈ ವರ್ಷದಲ್ಲಿ ಪವರ್ ಸ್ಟಾರ್ ಚಿತ್ರ ಕೂಡಾ ಬಿಡುಗಡೆಯಾಗಲಿದೆ.

Image result for natasarvabouma

ಕೆಜಿಎಫ್

ರಾಕಿಂಗ್ ಸ್ಟಾರ್ ಯಶ್ ಚಿತ್ರಕ್ಕೆ ದಿನಗಣನೆ ಶುರುವಾಗಿದೆ, ಸುಮಾರು ಎರಡು ವರ್ಷದಿಂದ ಯಾವ ಚಿತ್ರವನ್ನೂ ಒಪ್ಪಿಕೊಳ್ಳದೆ ಸಂಪೂರ್ಣ ಸಮಯವನ್ನ ‘ಕೆಜಿಎಫ್’ ಚಿತ್ರಕ್ಕಾಗಿ ಮೀಸಲಿಟ್ಟಿದ್ದ ನಟ ಯಶ್, ಕೆಜಿಎಫ್ ಚಿತ್ರದ ಚಿತ್ರೀಕರಣವನ್ನೆಲ್ಲ ಮುಗಿಸಿ ‘ಮೈ ನೇಮ್ ಈಸ್ ಕಿರಾತಕ’ದಲ್ಲಿ ಬ್ಯುಸಿಯಾಗಿದ್ದಾರೆ, ಐದು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆಗೆ ಬರಲಿರೋ ಕೆಜಿಎಫ್ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

Image result for kgf

 ಅವನೇ ಶ್ರೀಮನ್ನಾರಾಯಣ’

ಉಳಿದಂತೆ ಕಿರಿಕ್ ಪಾರ್ಟಿ ಚಿತ್ರದ ನಂತ್ರ ಯಾವ ಚಿತ್ರವನ್ನೂ ತೆರೆಗೆ ತಂದಿರದ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಕೂಡಾ ಸಖತ್ ಸದ್ದು ಮಾಡ್ತಿದ್ದು ಸಚಿನ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡ್ತಿದ್ದಾರೆ, ಈ ಚಿತ್ರ ಕೂಡಾ ಬಹುತೇಕ ಡಿಸೆಂಬರ್‌ ನಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದೆ.

Image result for avane srimannarayana

ಈ ಎಲ್ಲ ದೊಡ್ಡ ದೊಡ್ಡ ಸ್ಟಾರ್ ನಟರ ದೊಡ್ಡ ದೊಡ್ಡ ಪ್ರಾಜೆಕ್ಟ್ ಇದೇ ವರ್ಷದಲ್ಲಿ ತೆರೆಗೆ ಬರಲು ನಾ ಮುಂದು ತಾ ಮುಂದು ಅಂತಾ ಭರ್ಜರಿಯಾಗಿ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ತೊಡಗಿವೆ, ಎಲ್ಲ ಚಿತ್ರಗಳಲ್ಲಿ ಯಾವ ಯಾವ ಸ್ಟಾರ್ ನಟನ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿವೆ ಅಂತಾ ಕಾದು ನೋಡಬೇಕು.

 

Tags