ಸುದ್ದಿಗಳು

ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಪ್ರಚಂಡ ಕುಳ್ಳ’ ದ್ವಾರಕೀಶ್

ಕರ್ನಾಟಕದ ಕುಳ್ಳ ದ್ವಾರಕೀಶ್ ರವರಿಗೆ ಇಂದು ಜನ್ಮದಿನದ ಸಂಭ್ರಮ. ಒಬ್ಬ ನಟನಾಗಿ ಮಾತ್ರವಲ್ಲದೇ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಆಗಸ್ಟ್ 19 1942ರಂದು ಜನಸಿದ ಇವರು ಸಿ.ಪಿ.ಸಿ ಪಾಲಿಟೆಕ್ನಿಕ್ ನಿಂದ ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಕನ್ನಡದ ಜನಪ್ರಿಯ ನಟರಾದ ವಿಷ್ಣುವರ್ಧನ್ ರವರ ಆತ್ಮೀಯ ಸ್ನೇಹಿತರಾಗಿರುವ ದ್ವಾರಕೀಶ್ ರವರು ಕರ್ನಾಟಕದ ಪ್ರಚಂಡ ಕುಳ್ಳ ಎಂದರೆ ಜನಪ್ರಿಯರು. ‘ಜನ್ಮ ರಹಸ್ಯ’, ‘ಮಂಕುತಿಮ್ಮ’, ‘ಪೆದ್ದಗೆದ್ದ’, ‘ಕಿಟ್ಟು-ಪುಟ್ಟು’, ‘ಸಿಂಗಾಪುರದಲ್ಲಿ ರಾಜಾಕುಳ್ಳ’, ‘ಮನೆಮನೆಕಥೆ’, ‘ಆಪ್ತಮಿತ್ರ’, ‘ಪ್ರಚಂಡ ಕುಳ್ಳ’.. ಹೀಗೆ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ..Image result for dwarakishದ್ವಾರಕೀಶ್ ರವರು ಪೋಷಕ ಪಾತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ‘ವಿಷ್ಣುವರ್ಧನ’, ‘ಚಾರುಲತ’, ‘ಆಟಗಾರ’, ‘ಚೌಕ’, ‘ಅಮ್ಮ ಐ ಲವ್ ಯು’ ಚಿತ್ರಗಳ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿದ್ದಾರೆ. ಇಂತಹ ಬಹುಮುಖ ಪ್ರತಿಭೆ ದ್ವಾರಕೀಶ್ ರವರು ನೂರು ಕಾಲ ಸದಾ ಸಂತೋಷದಿಂದ ಇರಲಿ ಎಂದು ಬಾಲ್ಕನಿ ನ್ಯೂಸ್ ಹಾರೈಸುತ್ತದೆ.Image result for dwarakish

ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿದ್ದಕ್ಕೆ ದ್ವಾರಕೀಶ್ ಹಿಂಗಂದ್ರು ನೋಡಿ!!

#dwarakish #dwarakishmovies #dwarakishhits #dwarakishfamily #dwarakishson #dwarakishproduction

Tags