ಸುದ್ದಿಗಳು

ಸ್ಯಾಂಡಲ್ ವುಡ್ ತಾರೆಯರ ಮನೆಯಲ್ಲಿ ಮುದ್ದು ಲಕ್ಷ್ಮಿಯರು!!

ಶ್ರಾವಣದ ಎರಡನೆಯ ಶುಕ್ರವಾರ, ಅಥವಾ ಹುಣ್ಣಿಮೆಯ ಹಿಂದೆ ಬೀಳುವ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಈ ವ್ರತವನ್ನು ಮೈಸೂರು-ಕರ್ನಾಟಕದ ಪ್ರಾಂತಗಳಲ್ಲಿ ಮಾತ್ರ ಹೆಚ್ಚಾಗಿ ಆಚರಿಸಲಾಗುತ್ತದೆ.

ಇನ್ನು ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳಿಗಂತೂ ಇದು ಬಹಳ ವಿಶೇಷ. ಅದರಲ್ಲೂ ಈ ಬಾರಿ ಕೆಲ ನಟಿಮಣಿಯರು ತಮ್ಮ ಮುದ್ದು ಪುಟ್ಟ ಲಕ್ಷ್ಮಿಯೊಂದಿಗೆ ಆಚರಿಸಿಕೊಂಡಿದ್ದಾರೆ. ಹೌದು, ನಟಿ ರಾಧಿಕಾ ಪಂಡಿತ್, ಅನು ಪ್ರಭಾಕರ್, ಸಪ್ನ ಅಜಯ್ ರಾವ್ ಈ ನಟಿಯರೆಲ್ಲಾ ತಮ್ಮ ಮುದ್ದು ಮಕ್ಕಳೊಂದಿಗೆ ಆಚರಿಸಿಕೊಂಡಿರುವುದು ವಿಶೇಷ.

ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳು ಐರಾ ಯಶ್ ಜೊತೆ ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಅನು ಪ್ರಭಾಕರ್
ನಟಿ ಅನುಪ್ರಭಾಕರ್ ಅವರಿಗೆ ಈ ಬಾರಿಯ ವರಮಹಾಲಕ್ಷ್ಮಿ ಹಬ್ಬ ಅತ್ಯಂತ ವಿಶೇಷವಾದದ್ದು. ಯಾಕೆಂದರೆ, ಮನೆಗೆ ಲಕ್ಷ್ಮಿ ಆಗಮನವಾಗಿದೆ!  ಮುದ್ದಿನ ಮಗಳು ‘ನಂದನಾ ಪ್ರಭಾಕರ್ ಮುಖರ್ಜಿ’ ಜೊತೆ ಮನೆಯಲ್ಲೇ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ.

ಸಪ್ನ ಅಜಯ್ ರಾವ್

ಅಜಯ್ ರಾವ್ ಪತ್ನಿ ಸಪ್ನ ಅವರಿಗೂ ಈ ಬಾರು ವರಮಹಾಲಕ್ಷ್ಮಿ ಹಬ್ಬ ವಿಶೇಷವಾಗಿತ್ತು. ಮನೆಗೆ ಮುದ್ದು ಮಗಳು ಚೆರಿಷ್ಮಾ ಆಗಮಿಸಿದ್ದು, ಮಗಳು ಬಂದ ಖುಷಿಯಲ್ಲಿ ಹಬ್ಬದ ಸಂಭ್ರವೂ ಜೋರಾಗಿತ್ತು.

ಬೋಲ್ಡ್ ಲುಕ್ ಗೆ ಸೈ, ಟ್ರಡಿಷನಲ್ ಲುಕ್ ಗೆ ಸೈ ಈ ಚಾರ್ಮಿಂಗ್ ಬ್ಯೂಟಿ..

#radhikapandit #sandalwood #sapnajairao #anuprabhakar

Tags