ಸುದ್ದಿಗಳು

ಮಂಜುಳಾ ಅವರ ಜನುಮ ದಿನದ ಸವಿನೆನಪು

ಮಂಜುಳಾ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ನಟಿ. ಇಂದು ಅವರ ಜನ್ಮ ದಿನ. ಸುಮಾರು ನೂರಕ್ಕಿಂತ ಹೆಚ್ಚು ಚಿತ್ರದಲ್ಲಿ ನಟಿಸಿದ ಇವರು ಚಿತ್ರರಂಗದ ಅಪರೂಪದ ಸುಂದರ ನಟಿ. ಗಂಡು ಬೀರಿ ಎಂದೇ ಖ್ಯಾತಿ ಪಡೆದಿದ್ದರು. `ಎರಡು ಕನಸು’ ಚಿತ್ರದ ಮುಗ್ಧ ಪ್ರೇಮಿ ಲಲಿತಾ ಆಗಿ, `ಸಂಪತ್ತಿಗೆ ಸವಾಲ್’ ಚಿತ್ರದ ಗಂಡುಬೀರಿ ದುರ್ಗಾ ಆಗಿ ಕಾಣಿಸಿಕೊಂಡ ಇವರು ಈಗ ನೆನಪಿನಲ್ಲಿ ಮಾತ್ರ.

1966 ರಲ್ಲಿ ತೆರೆಕಂಡ `ಮನೆಕಟ್ಟಿ ನೋಡು’ ಚಿತ್ರದಿಂದ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕೆಲ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ ಇವರು 1972 ರಲ್ಲಿ ತೆರೆಕಂಡ `ಯಾರ ಸಾಕ್ಷಿ’ ಚಿತ್ರದಿಂದ ಪೂರ್ಣಪ್ರಮಾಣದ ನಾಯಕಿಯಾಗಿ ಅಭಿನಯ ಪ್ರಾರಂಭಿಸಿದರು.

Image result for manjula  kannada photos

ಕನ್ನಡದ ನಾಯಕನಟ ಶ್ರೀನಾಥ್ ಮತ್ತು ಮಂಜುಳಾ ಜೋಡಿ ಪ್ರಣಯ ಜೋಡಿ ಎಂದು ಪ್ರಸಿಧ್ಧವಾಗಿತ್ತು ವರನಟ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಅವರಂತಹ ಸ್ಟಾರ್ ನಟರ ಜೊತೆ ಅಭಿನಯಿಸಿದ್ದರೂ, ನಟಿ ಮಂಜುಳ ಅತ್ಯದ್ಭುತ ಯಶಸ್ಸು ಗಳಿಸಿದ್ದು ಪ್ರಣಯ ರಾಜ ಶ್ರೀನಾಥ್ ಜೊತೆಗೆ.

ಇವರು ಚಿತ್ರ ನಿರ್ದೇಶಕ `ಅಮೃತಂ’ ಜೊತೆ ಮದುವೆಯಾಗಿದ್ದರು. 1986 ರಲ್ಲಿ ತಮ್ಮ ಮನೆಯಲ್ಲಿ ಗ್ಯಾಸ್ ಸ್ಟೋವ್ ಸ್ಪೋಟದಿಂದ ನಿಧನ ಹೊಂದಿದರು.

ವಿದೇಶಿ ಪ್ರವಾಸದಲ್ಲಿ ‘ಟಗರು’ ಪುಟ್ಟಿ ಮಾನ್ವಿತಾ

#manjula #manjulabirthday #sandalwood #kanandactress

Tags