ಸುದ್ದಿಗಳು

ಅಭಿಷೇಕ್ ಜೊತೆ ಸೊಂಟ ಬಳುಕಿಸಲಿರುವ ‘ಡಿಂಪಲ್ ಕ್ವೀನ್’…!

‘ಅಮರ್’ ಚಿತ್ರತಂಡಕ್ಕೆ ಹೊಸ ಸೇರ್ಪಡೆ

ಅಭಿಷೇಕ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಅಮರ್’ ಚಿತ್ರಕ್ಕೆ ರಚಿತಾ ರಾಮ್ ಹೊಸ ಸೇರ್ಪಡೆಯಾಗಿದ್ದಾರೆ. ‘ಅಮರ್’ ಸಿನಿಮಾದ ವಿಶೇಷ ಹಾಡೊಂದಕ್ಕೆ ರಚಿತಾ ರಾಮ್ ಹೆಜ್ಜೆಹಾಕಲಿದ್ದಾರೆ.

ಬೆಂಗಳೂರು, ಸೆ.03: ರೆಬೆಲ್ ಸ್ಟಾರ್ ಅಂಬರೀಶ್ ರವರ ಮಗ ಅಭಿಷೇಕ್ ಸದ್ಯ ಚಂದನವನಕ್ಕೆ ಪಾದಾರ್ಪಣೆಗೊಂಡಿದ್ದು, ಅಮರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಭಿಷೇಕ್ ‘ಅಮರ್’ ಸಿನಿಮಾದಲ್ಲಿ ಬೈಕ್ ರೇಸರ್ ಆಗಿ ಕಾಣಿಸಿಕೊಂಡಿದ್ದಾರೆ.ಬೈಕ್ ರೇಸರ್ ಆಗಿ ಅಭಿಷೇಕ್

‘ಮೈನಾ’,  ‘ಸಂಜು ವೆಡ್ಸ್ ಗೀತ’ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗಶೇಖರ್ ಸದ್ಯ ಅಭಿಷೇಕ್ ನಟನೆಯ ‘ಅಮರ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಅಭಿಷೇಕ್ ಈ ಸಿನಿಮಾದಲ್ಲಿ ಬೈಕ್ ರೇಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಸಿನಿಮಾದಲ್ಲಿನ ಬೈಕ್ ರೇಸರ್  ಪಾತ್ರಕ್ಕಾಗಿ ಅಭಿಷೇಕ್ ಬಹಳಷ್ಟು ವರ್ಕೌಟ್ ಮಾಡಿದ್ದಾರೆ.  ಪಾತ್ರಕ್ಕಾಗಿ ಸಾಕಷ್ಟು ದಿನಗಳ ಹಿಂದಿನಿಂದಲೇ  ತಯಾರಿ ಮಾಡಿಕೊಂಡಿದ್ದ ಅಂಬಿ ಪುತ್ರ ಅಭಿಷೇಕ್ ಡ್ಯಾನ್ಸ್,  ಫೈಟಿಂಗ್, ಆಕ್ಟಿಂಗ್ ನಲ್ಲಿ ವಿಶೇಷ ತರಬೇತಿಯನ್ನೂ ಪಡೆದುಕೊಂಡಿದ್ದಾರೆ .ಅಭಿಷೇಕ್ ಗೆ ನಾಯಕಿಯಾಗಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದು, ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದಾರೆ.. ಅಮರ್  ಚಿತ್ರಕ್ಕೆ ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದಾರೆ.ವಿಶೇಷ ಪಾತ್ರದಲ್ಲಿ ನಿರೂಪ್ ಭಂಡಾರಿ ಮತ್ತು ರಚಿತಾ

ಇದೀಗ ಅಮರ್ ಸಿನಿಮಾದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.  ಹೌದು, ಈ ಸಿನಿಮಾದೊಂದು ಹಾಡಿಗಾಗಿ , ಚಂದನವನದ ಡಿಂಪಲ್ ಕ್ವೀನ್ ಎಂದೇ ಪ್ರಸಿದ್ಧಿಯಾಗಿರುವ ರಚಿತಾ ರಾಮ್ ರವರನ್ನು ಕರೆಯಲಾಗಿದೆಯಂತೆ. ‘ಅಮರ್’ ಸಿನಿಮಾದ ವಿಶೇಷ ಹಾಡಿಗೆ ರಚಿತಾ ಹೆಜ್ಜೆಹಾಕಲಿದ್ದು, ಅಭಿಷೇಕ್ ಜೊತೆ ತೆರೆ ಹಂಚಿಕೊಳ್ಳುವ ಸದಾವಕಾಶ ಡಿಂಪಲ್ ಕ್ವೀನ್ ಗೆ ಒಲಿದು ಬಂದಿದೆ. ಇದಲ್ಲದೆ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ

Tags