ಸುದ್ದಿಗಳು

ಚಂದನವನದಲ್ಲಿ ಶುರುವಾಯ್ತು ‘ಬಾಕ್ಸ್ ಕ್ರಿಕೇಟ್ ಲೀಗ್’…!

ಕಮರ್ ಫಿಲ್ಮ್ ಫ್ಯಾಕ್ಟರಿ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮ

ಸಿನಿಮಾ ತಾರೆಯರು ತಮ್ಮ ನಿರತವಾದ ಕೆಲಸದ ಮಧ್ಯದಲ್ಲಿಯೂ, ಕೂಡ ಅವರಿಗೆ ಮನರಂಜನೆ ನೀಡುವ ಉದ್ದೇಶದಿಂದ ಹುಟ್ಟಿಕೊಂಡ ಕ್ರೀಡೆಯೇ ‘ಬಾಕ್ಸ್ ಕ್ರಿಕೇಟ್ ಲೀಗ್’.

ಬೆಂಗಳೂರು, ಆ.31: ವರ್ಷಪೂರ್ತಿ ಸಿನಿಮಾದಲ್ಲಿ ನಿರತರಾದ ತಾರೆಯರಿಗೂ ಹಾಗೂ ಸದಾ ಸುದ್ದಿಯಲ್ಲಿ ಮುಳುಗಿರೋ ಮಾಧ್ಯಮದವರನ್ನು ರಂಜಿಸಲು ಕಮರ್ ಫಿಲ್ಮ್ ಫ್ಯಾಕ್ಟರಿ ವತಿಯಿಂದ ‘ಬಾಕ್ಸ್ ಕ್ರಿಕೇಟ್ ಲೀಗ್’  ಹಮ್ಮಿಕೊಳ್ಳಲಾಗಿದೆ.. ಹಾಗಿದ್ರೆ ಈ ಬಾರಿಯ ಬಿಸಿಎಲ್ ಕ್ರಿಕೆಟ್‌ ನಲ್ಲಿ ಯಾರೇಲ್ಲಾ ಭಾಗವಹಿಸಲಿದ್ದಾರೆ.  ಇದೀಗ ಈ ವರ್ಷ ನಡೆಯುವ ‘ಬಿಸಿಎಲ್’ ಸೀಜ಼ನ್ 2 ನಿನ್ನೆಯಷ್ಟೇ ಖಾಸಗಿ ಹೊಟೇಲ್‌ವೊಂದರಲ್ಲಿ ಲಾಂಚ್ ಮಾಡಲಾಯಿತು..

ಬಿಸಿಎಲ್ ನ ಪೋಸ್ಟರ್ ಲಾಂಚ್ ಮಾಡಿದ ತಾರೆಯರು

ಸ್ಯಾಂಡಲ್‌ ವುಡ್‌ ನ ಅನೇಕ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ಆದಿ ಲೋಕೇಶ್, ಧರ್ಮಕೀರ್ತಿರಾಜ್, ಲೂಸ್ ಮಾದ ಯೋಗಿ, ಜಯಶ್ರೀ ಹಾಗೂ ನಿರ್ದೇಶಕರಾದ ದಿನಕರ್ ತೂಗುದೀಪ್, ಕವಿರಾಜ್ ಹಾಗೂ ಆರ್.ಚಂದ್ರು ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ.. ಈ ಬಾರಿಯ ಬಿಸಿಎಲ್ ಪೋಸ್ಟರ್ ಲಾಂಚ್ ಮಾಡಿದ್ದರು..

ಅಷ್ಟೇ ಅಲ್ಲದೆ ಪ್ರತಿಯೊಬ್ಬ ನಟರು ಹಾಗೂ ನಿರ್ದೇಶಕ ಒಂದೊಂದು ಟೀಮ್‌ ನ ನಾಯಕತ್ವವನ್ನು ವಹಿಸಿಕೊಳ್ಳಿದ್ದಾರಂತೆ.. ದಿನಕರ್ ಮೈಸೂರು ತಂಡವನ್ನು, ಆದಿ ಲೊಕೇಶ್ ದಾವಣಗೆರೆಯನ್ನು ಹಾಗೂ ಧರ್ಮ ಕೀರ್ತಿರಾಜ್ ಬಳ್ಳಾರಿಯ ನಾಯಕತ್ವವನ್ನು ವಹಿಸಿಕೊಳಲಿದ್ದಾರಂತೆ..

ಒಟ್ಟಿನಲ್ಲಿ ನಿನ್ನೆಯಷ್ಟೇ ಕಮರ್ ಫಿಲ್ಮ್ ಫ್ಯಾಕ್ಟರಿಯ ವತಿಯಿಂದ ಲಾಂಚ್ ಆದ ಬಿಸಿಎಲ್ ಇದೆ ಸೆಪ್ಟಂಬರ್ ಕೊನೆಯ ವಾರದಲ್ಲಿ ಪ್ರಾರಂಭವಾಗಲಿದೆ.

Tags