ಸುದ್ದಿಗಳು

‘ಭೈರವ ಗೀತ’ ಸಿನಿಮಾ ಹಾಡಿನ ಟೀಸರ್ ಬಿಡುಗಡೆ

ಬೆಂಗಳೂರು, ಸೆ.12: ಸದ್ಯ ಧನಂಜಯ್ ಅಭಿನಯದ ‘ಭೈರವ ಗೀತ’ ಸಿನಿಮಾ ಎಲ್ಲೆಡೆ ಕುತೂಹಲ ನಿರೀಕ್ಷೆಯನ್ನು ಹೆಚ್ಚಿಸಿಕೊಂಡಿದೆ. ಟ್ರೇಲರ್ ಮೂಲಕವೇ ಬಹಳಷ್ಟು ಸುದ್ದಿಯಾಗಿದ್ದ ಈ ಸಿನಿಮಾ ಇದೀಗ ಹಾಡೊಂದರ ಟೀಸರ್‌ ಅನ್ನು ಬಿಡುಗಡೆ ಮಾಡಿದ್ದಾರೆ.

ಡಾಲಿ ಧನಂಜಯ್

‘ಟಗರು’ ಚಿತ್ರದ ಯಶಸ್ಸಿನ ನಂತರ ನಟ ಧನಂಜಯ್‌ ಗೆ ಎಲ್ಲಿಲ್ಲದ ಬೇಡಿಕೆ ಶುರುವಾಗಿರುವುದಂತೂ ಸತ್ಯವಾದ ಸಂಗತಿ. ‘ಟಗರು’ ಚಿತ್ರದಲ್ಲಿ ಡಾಲಿಯಾಗಿ ಧನಂಜಯ್ ನಟಿಸಿದ ಪಾತ್ರವೇ ಇಂದು ಅವರನ್ನು ಈ ಮಟ್ಟಿಗೆ ಬೆಳೆಸುತ್ತಿದೆ. ನಿರ್ದೇಶಕ, ನಿರ್ಮಾಪಕ ರಾಮ್‌ಗೋಪಾಲ್ ವರ್ಮಾ ಜೊತೆ ‘ಭೈರವಗೀತ’ ಚಿತ್ರದಲ್ಲಿ ಧನಂಜಯ್ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಟ್ರೇಲರ್ ಬಿಡುಗಡೆ ಮಾಡಿದ್ದ ನಿರ್ದೇಶಕರು ಇದೀಗ ಹಾಡಿನ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದಾರೆ.

ರಾಮ್ ಗೋಪಾಲ್ ವರ್ಮಾ ನಿರ್ಮಾಣದ ಸಿನಿಮಾ

ಸ್ಯಾಂಡಲ್‌ವುಡ್‌ ನ ಡಾಲಿ ಧನಂಜಯ್ ಹಾಗೂ ಇರಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಭೈರವ ಗೀತ’ ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ಸಖತ್ ಹಲ್‌ಚಲ್ ಮಾಡುತ್ತಿದೆ.. ಯಾಕಂದರೆ, ಅದರಲ್ಲಿರುವ ಹಸಿಬಿಸಿ ದೃಶ್ಯ ಪಡ್ಡೆ ಹುಡುಗರ ನಿದ್ದೆಗೆ ಕತ್ತರಿ ಹಾಕಿದೆ.. ಇದರ ಜೊತೆಗೆ ರಾಮ್‌ಗೋಪಾಲ್ ವರ್ಮಾ ನಿರ್ಮಾಣ ಮಾಡಿರುವ ಚಿತ್ರ ಅಂದರೆ ಅದರಲ್ಲಿ ಏನಾದರೂ ವಿಶೇಷತೆ ಇದ್ದೇ ಇರುತ್ತೆ ಅನ್ನೋದು ಸಿನಿ ಪ್ರೇಕ್ಷಕರ ಲೆಕ್ಕಾಚಾರ. ರಾಮ್ ಗೋಪಾಲ್ ವರ್ಮಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಟ್ರೇಲರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡ್ ಮಾಡುತ್ತಿದೆ.. ಇನ್ನು ಈ ಸಿನಿಮಾಗೆ ನಿರ್ದೇಶನ ಮಾಡಿರುವುದು ಸಿದ್ದಾರ್ಥ.. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಜಾನರ್‌ಗೆ ಸೇರಿದ ಸಿನಿಮಾವಾಗಿದ್ದು, ಇದರಲ್ಲಿ ಒಂದು ಮುಗ್ದ ಮನಸುಗಳ ನಡುವಿನ ಪ್ರೀತಿಯನ್ನು ಹೇಳ ಹೊರಟಿದ್ದಾರೆ ನಿರ್ದೇಶಕ ಸಿದ್ದಾರ್ಥ..ಜಯದಲ್ಲೂ ಪ್ರೀತಿ ಸವಿಯುವ ಜೋಡಿ

ಈ ಸಿನಿಮಾ ಟ್ರೇಲರ್ ನಷ್ಟೆ ಈಗ ಬಿಡುಗಡೆಯಾಗಿರುವ ಹಾಡಿನ ಟೀಸರ್ ಒಂದು ಮತ್ತೆ ಸದ್ದು ಮಾಡುತ್ತಿದೆ. ‘ನೀ ನನ್ನ ಭಗವದ್ ಗೀತ’ ಎನ್ನುವ ಸಾಲಿನಲ್ಲಿ ಪ್ರಾರಂಭವಾಗುವ ಹಾಡಿನ ಟೀಸರ್ ಇದೀಗ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಭಯದಲ್ಲೂ ಈ ಜೋಡಿ ತಮ್ಮ ಪ್ರೀತಿಯನ್ನು ಸವಿಯುವ ಪರಿಯನ್ನು ಸಿನಿಮಾ ನಿರ್ದೇಶಕ ಟೀಸರ್‌ ನಲ್ಲಿ ತೋರಿಸಿದ್ದಾರೆ.‘ಭೈರವ ಗೀತ’.. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಸಿನಿಮಾ.. ಮುಂದಿನ ತಿಂಗಳು ಅಕ್ಟೋಬರ್ ೧೨ರಂದು ‘ಭೈರವಗೀತ’ ಚಿತ್ರ ಅದ್ದೂರಿಯಾಗಿ ಬೆಳ್ಳೆಪರದೆಯ ಮೇಲೆ ರಾರಾಜಿಸಲಿದ್ದಾನೆ, ಸ್ಯಾಂಡಲ್‌ ವುಡ್‌ ನಲ್ಲಿ ಮಾತ್ರವಲ್ಲದೆ ಟಾಲಿವುಡ್‌ ನಲ್ಲೂ ಅಬ್ಬರಿಸಲಿದೆ. ಈ ಚಿತ್ರದ ಮೂಲಕ ಸ್ಯಾಂಡಲ್ವುಡ್‌ ನ ಡಾಲಿ ಪರಭಾಷೆಯಲ್ಲೂ ಮಿಂಚಲಿದ್ದಾರೆ.

Tags

Related Articles