ಸುದ್ದಿಗಳು

ದರ್ಶನ್ ಕಾರು ಅಪಘಾತದ ವಿಚಾರವಾಗಿ ಪೊಲೀಸರಿಂದ ಸ್ವಯಂ ದೂರು ದಾಖಲು…!

ಬೆಂಗಳೂರು, ಸೆ.25: ಸಾಮಾನ್ಯ ಜನರ ಕಾರು ಅಪಘಾತವಾದರೆ ಸ್ವಯಂ ದೂರು ದಾಖಲು ಮಾಡಿಕೊಳ್ಳುವ ಪೊಲೀಸರು ದರ್ಶನ್ ಕೇಸ್‌ ನಲ್ಲಿ ಈ ಕೆಲಸ ತಕ್ಷಣಕ್ಕೆ ಮಾಡಿರಲಿಲ್ಲ. ಇದೀಗ ಪೊಲೀಸರೇ ಸ್ವಯಂ ದೂರು ದಾಖಲು ಮಾಡಿದ್ದಾರೆ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ. ಘಟನೆಯಲ್ಲಿ ಹಿರಿಯ ನಟ ದೇವರಾಜ್, ಪ್ರಜ್ವಲ್ ದೇವರಾಜ್, ಚಾಲಕ ರಾಯ್ ಆಂಟೋನಿಗೆ ಗಾಯಾಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಬೆಳಗಿನ ಜಾವ ಆದ ಪ್ರಕರಣಕ್ಕೆ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಇದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿತ್ತು. ಇದೀಗ ಇದಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್  ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ. ಈ ನಟ ಪ್ರಯಾಣಿಸುತ್ತಿದ್ದ ಕಾರು ನಿನ್ನೆ ಬೆಳಗಿನ ಜಾವ ಅಪಘಾತಕ್ಕೀಡಾಗಿದೆ. ಹೌದು ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಪ್ರಯಾಣ ಮಾಡುತ್ತಿದ್ದ ಕಾರು ಮೈಸೂರಿನ ಮೇಟಗಳ್ಳಿಯ ರಿಂಗ್ ರಸ್ತೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿ ಪಲ್ಟಿಯಾಗಿದೆ. ಘಟನೆಯ ವೇಳೆ ಚಾಲಕ ರಾಯ್ ಆಂಟೋನಿ ಕಾರು ಚಾಲನೆ ಮಾಡುತ್ತಿದ್ದರು.  ಇದರಿಂದ ನಟ ದರ್ಶನ್ ಗೆ ಮುಂಗೈ ಮೂಳೆ ಮುರಿದಿದ್ರೆ ದೇವರಾಜ್ ಗೆ ಬೆರಳಿಗೆ, ಪ್ರಜ್ವಲ್ ದೇವರಾಜ್ ಗೆ ಎದೆ ಮತ್ತು ತಲೆ ಭಾಗ ಮತ್ತು ಚಾಲಕ ರಾಯ್ ಆಂಟೋನಿಗೆ ಕಾಲು ಮತ್ತು ಕೈಗೆ ಪೆಟ್ಟಾಗಿದೆ.

ಕಾರಿನಲ್ಲಿದ್ದವರಿಗೆ ಚಿಕಿತ್ಸೆ

ಕೂಡಲೇ ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ವೇಳೆ ದರ್ಶನ್ ಅವರ ಮುರಿದಿರುವ ಮುಂಗೈಗೆ ಶಸ್ತ್ರ ಚಿಕಿತ್ಸೆ ಮಾಡಿ ಪ್ಲೇಟ್ ಹಾಕಿ ೨೫ ಹೊಲಿಗೆ ಹಾಕಲಾಗಿದೆ. ಮಿಕ್ಕುಳಿದವರಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ದರ್ಶನ್ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು ೪೮ ಗಂಟೆಗಳ ಪರಿಶೀಲನೆಯ ನಂತರ ಡಿಸ್ಚಾರ್ಜ್ ಮಾಡಲಾಗುವುದು ಅಂತಾ ಈಗಾಗಲೇ ವೈದ್ಯರು ತಿಳಿಸಿದ್ದಾರೆ.ಪೊಲೀಸರಿಂದ ಸ್ವಯಂ ದೂರು ದಾಖಲು

ಇನ್ನು ನಿನ್ನೆ ಬೆಳಿಗ್ಗೆಯಾದ ಘಟನೆಗೆ ಪೊಲೀಸರು ಮಧ್ಯಾಹ್ನದ ವೇಳೆಯಾದರೂ ದೂರು ದಾಖಲಿಸಿಕೊಂಡಿದ್ದಿಲ್ಲ. ಇದೀಗ ಈ ವಿಚಾರವಾಗಿ ನಿನ್ನೆ ಸಂಜೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ಇನ್ನು ಅಪಘಾತದ ವೇಳೆ ತಾವೇ ಕಾರು ಚಾಲನೆ ಮಾಡಿರುವುದಾಗಿ ಆಂಟೋನಿ ಹೇಳಿದ್ದಾರೆ. ಇನ್ನು ಅಜಾಗರುಕತೆ ಹಾಗೂ ಅತಿವೇಗವೇ ಈ ಅಪಘಾತಕ್ಕೆ ಕಾರಣ ಅಂತಾ ಈ ಕೇಸ್‌ಗಳ ಅಡಿಯಲ್ಲಿ ಬರುವ ಸೆಕ್ಷನ್‌ ಗಳನ್ನು ಮೈಸೂರಿನ ವಿವಿ ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸದ್ಯ ದರ್ಶನ್ ಇರುವ ೧೨೩ನೇ ವಾರ್ಡ್ ಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ ಇದೀಗ ಪೊಲೀಸರು ಸ್ವಯಂ ದೂರು ದಾಖಲು ಮಾಡಿಕೊಂಡಿದ್ದಾರೆ.

 

 

Tags