ಸುದ್ದಿಗಳು

ವಿಜಿ ಅಂಡ್ ಟೀಮ್ ಗೆ ‘ಜೈಲೋ’ ‘ಬೇಲೋ’…!

ಬೆಂಗಳೂರು, ಸೆ.26: ದುನಿಯಾ ವಿಜಯ್ ಹಲ್ಲೆ ಹಾಗೂ ಕಿಡ್ನಾಪ್ ಕೇಸ್‌ ನಲ್ಲಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈಗಾಗಲೇ ಜಾಮೀನಿಗಾಗಿ ಅರ್ಜಿ ಹಾಕಿದ್ದ ವಿಜಿ ಅಂಡ್ ಗ್ಯಾಂಗ್‌ ಗೆ ಜಾಮೀನು ನೀಡದಂತೆ ಪ್ರತಿವಾದಿ ವಕೀಲರು ವಾದ ಮಂಡಿಸಿದ್ದಾರೆ, ವಾದ ಆಲಿಸಿದ್ದ ನ್ಯಾಯಮೂರ್ತಿಗಳು ಇಂದು ತೀರ್ಪನ್ನು  ಕಾಯ್ದಿರಿಸಿದ್ದರು.

ಇಂದು ತೀರ್ಪು ಪ್ರಕಟ

ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುನಿಯಾ ವಿಜಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದರು. ಇನ್ನು ೧೪ ದಿನಗಳ ಕಾಲ ಕೇಂದ್ರ ಕಾರಾಗೃಹಕ್ಕೆ ಹಾಕಲಾಗಿತ್ತು. ಇನ್ನು ಜಾಮೀನು ಕೋರಿ ಅರ್ಜಿ ಹಾಕಲಾಗಿತ್ತು. ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳು ಇಂದು ತೀರ್ಪನ್ನು ಕಾಯ್ದಿರಿಸಿದ್ದಾರೆ. ೮ನೇ ಎಸಿಎಮ್ ಎಮ್ ಕೋರ್ಟ್ ಇಂದು ತೀರ್ಪು ಪ್ರಕಟಮಾಡಲಿದೆ.ವಾದ-ಪ್ರತಿವಾದ

ಇನ್ನು ವಿಚಾರಣಧೀನ ಆರೋಪಿ ತುಂಬಾ ಪ್ರಬಾವಿ ಆಗಿದ್ದಾರೆ. ಗಾಯಾಳು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ  ಜಾಮೀನು ಸಿಗಬಾರದೆಂದು ಪ್ರತಿವಾದಿ ವಕೀಲರು ವಾದ ಮಂಡಿಸಿದ್ದರು. ಇನ್ನು, ವಿಜಿ ಪರ ವಕೀಲರು ಕೂಡ ತಮ್ಮ ವಾದವನ್ನು ಮಂಡಿಸಿದ್ದಾರೆ. ಆದರೆ ಎಲ್ಲವನ್ನು ಆಲಿಸಿದ ನ್ಯಾಯಮೂರ್ತಿಗಳು ತೀರ್ಪನ್ನು  ಕಾಯ್ದಿರಿಸಿದ್ದಾರೆ.

Tags