ಸುದ್ದಿಗಳು

‘ಫೇಸ್ ಟು ಫೇಸ್’ ಚಿತ್ರದ ಹಾಡುಗಳ ಸಿ.ಡಿ. ಇದೀಗ ಮುಖಾಮುಖಿ!

‘ಫೇಸ್ ಟು ಫೇಸ್’ ನೋಡಿ ಕಥೆ ಹೇಳಲು ಬರ್ತಿದೆ ಹೊಸತಂಡ

ಬೆಂಗಳೂರು, ಸೆ.06: ಸ್ಯಾಂಡಲ್ ವುಡ್ ನಲ್ಲಿ ಈಗಂತೂ ಚಿತ್ರದ ಟೈಟಲ್​ಗಳೇ ಹೆಚ್ಚು ಗಮನ ಸೆಳೆಯುತ್ವೆ. ಆ ಸಾಲಿಗೆ ಸೇರ್ಪಡೆ ಆಗಿರೋ ಸಿನಿಮಾ ಅಂದ್ರೆ ‘ಫೇಸ್​ ಟು ಫೇಸ್​’. ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನಡೆದಿದ್ದು, ಸಿನಿಮಾದ ವೈಶಿಷ್ಟ್ಯ ಏನು? ಯಾರೆಲ್ಲ ತಾರಬಳಗದಲ್ಲಿದ್ದಾರೆ ಎನ್ನುವುದರ ಸಂಪೂರ್ಣ ಮಾಹಿತಿ​ ನಿಮ್ಮ ಮುಂದೆ.

ಈಗಂತೂ  ದಿನಕ್ಕೊಂದು ಸಿನೆಮಾ ಸೆಟ್ಟೇರ್ತಾ ಇರುತ್ವೆ..ಈ ನಡುವೆ ಹೊಸಬರ ತಂಡವು ಕೂಡ ನಾವೇನೂ ಕಡಿಮೆ ಇಲ್ಲ ಅನ್ನೋಹಾಗೆ  ಸೂಪರ್ ಸಿನೆಮಾಗಳನ್ನು  ಸಿನಿ ರಸಿಕರಿಗೆ ನೀಡ್ತಾನೇ ಇವೆ…ಅದೇ ರೀತಿ ‘ಫೇಸ್ ಟು ಫೇಸ್’ ಚಿತ್ರ ಕೂಡ ಹೊಸ ಹುಮ್ಮಸ್ಸಿನೊಂದಿಗೆ ಬರುತ್ತಿದ್ದು  ಅದ್ದೂರಿಯಾಗಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಕೂಡ ನಡೆಯಿತು. ಸುಂದರವಾದ ಪ್ರೇಮಕಥೆ 

ಹಿರಿಯ ನಟ ಶಿವರಾಂ ಅವ್ರ ಕೈಯಲ್ಲಿ ಹಾಡುಗಳು ಬಿಡುಗಡೆಗೊಳಿಸಿದ್ದು, ಕೃಷಿ ತಾಪಂಡ, ಪ್ರಥಮ್​, ಅನುಪಮಾ, ಜಯಶ್ರೀ , ವಿನಾಯಕ ಜೋಷಿ ಹೀಗೆ ಇಡೀ ಬಿಗ್​ ಬಾಸ್​ ತಂಡವೇ ಈ ಆಡಿಯೋ ಫಂಕ್ಷನ್ ​ನಲ್ಲಿ ಭಾಗಿಯಾಗಿದ್ದು ವಿಶೇಷ. ಸುಮಿತ್ರ ಜನಾರ್ಧನ್  ಎಂಬುವವರು ಬಂಡವಾಳ ಹೂಡಿದ್ದು, ನವ ನಿರ್ದೇಶಕ ಸಂದೀಪ್ ಜನಾರ್ಧನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಫೇಸ್ ಟು ಫೇಸ್’ ಚಿತ್ರವು ಒಂದು ಬ್ಯೂಟಿಫುಲ್​ ಲವ್​ ಸ್ಟೋರಿಯಾಗಿದ್ದು, ಅದಕ್ಕೆ ಒಂದ್​ ಸ್ವಲ್ಪ ಕಾಮಿಡಿ ಟಚ್​ ಕೊಟ್ಟು ಅದ್ಭುತವಾದ ಕಥೆ ಹೆಣೆದಿದ್ದಾರೆ. ಸಂದೀಪ್​  ಈ ಹಿಂದೆ ನಟ ಉಪೇಂದ್ರ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಫೇಸ್​ ಟು ಫೇಸ್​ ಚಿತ್ರದ ಮೂಲಕ ಡೈರೆಕ್ಟರ್​ ಕಾಪ್​ ತೊಟ್ಟಿದ್ದಾರೆ. ತಾರಾಬಳಗ  

‘ದೃಶ್ಯ’ ಸಿನೆಮಾದಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ,ರೋಹಿತ್ ಭಾನುಪ್ರಕಾಶ್ ಈ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದಾರೆ. ರೋಹಿತ್​ ಗೆ ಜೋಡಿಯಾಗಿ ಪೂರ್ವಿ ಜೋಷಿ ಹಾಗೂ ಹುಲಿರಾಯ ಚಿತ್ರ ಖ್ಯಾತಿಯ ದಿವ್ಯ ಹುರುಡುಗ ಅಭಿನಯಿಸಿದ್ದಾರೆ.  ‘ಫೇಸ್​ ಟು ಫೇಸ್’​ ಸಿನಿಮಾ ಕೇವಲ ಲವ್​ ಬೇಸ್ಡ್​ ಮಾತ್ರವಲ್ಲದೇ  ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ ಕೂಡ ಹೌದು. ಚಿತ್ರಕ್ಕೆ ಜಯಂತ್ ಕಾಯ್ಕಿಣಿ ಅವ್ರ ಮ್ಯೂಸಿಕ್​ ಹಾಗೂ ಡಾ. ವಿ ನಾಗೇಂದ್ರ ಪ್ರಸಾದ್ ರವರ ಸಾಹಿತ್ಯವಿದೆ..ಈಗಾಗಲೇ ಸಿನಿಮಾದ ಹಾಡುಗಳು ಕೇಳುಗರನ್ನು ಮೋಡಿ ಮಾಡಿವೆ. ಚಿಕ್ಕಮಂಗಳೂರು, ಬೆಂಗಳೂರು, ಮಂಗಳೂರಿನಲ್ಲಿ  ‘ಫೇಸ್​ ಟು ಫೇಸ್’​ ಸಿನಿಮಾದ   ಶೂಟಿಂಗ್ ನಡೆದಿದ್ದು, ಇದೀಗ  ಪೋಸ್ಟ್ ಪ್ರೋಡಕ್ಷನ್ ಹಂತ ದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದ್ರೇ, ಸದ್ಯದಲ್ಲೇ ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ.

Tags