ಸುದ್ದಿಗಳು

ಡಬ್ಬಿಂಗ್ ವಿರೋಧಿಸಿ ಮತ್ತೆ ಬೀದಿಗಿಳಿದ ವಾಟಾಳ್

ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಚಿನ್ನೇಗೌಡ್ರಿಗೆ ವಾಟಾಳ್ ಮನವಿ

ಡಬ್ಬಿಂಗ್ ವಿರುದ್ಧವಾಗಿ ಕಲಾವಿದರು, ನಿರ್ದೇಕರುಗಳು, ನಿರ್ಮಾಪಕರು ಬೀದಿಗಿಳಿದು ಹೋರಾಟ ಮಾಡ್ಬೇಕು. ಆದ್ರೆ ಯಾರೂ ಬಂದಿಲ್ಲ ಅವ್ರ ಸ್ಥಾನದಲ್ಲಿ ನಾವು ಹೋರಾಟ ಮಾಡ್ತಿದಿವಿ ಎಂದ ವಾಟಾಳ್.

ಬೆಂಗಳೂರು, ಸೆ.03: ಸದ್ಯ ಕರ್ನಾಟಕದಲ್ಲಿ ಡಬ್ಬಿಂಗ್ ವಿಚಾರಕ್ಕೆ ಪರ ವಿರೋಧ ವ್ಯಕ್ತಪಡಿಸಿ ನಡೆಯುತ್ತಿರುವ ಪ್ರತಿಭಟನೆಗಳು ಇಂದು ಮೊದಲೇನಲ್ಲಾ.  ಹಲವಾರು ವರ್ಷಗಳಿಂದ ಒಂದಿಷ್ಟು ಮಂದಿ ಡಬ್ಬಿಂಗ್ ಬೇಕು ಅಂದ್ರೆ ಇನ್ನೊಂದೆಡೆ ಡಬ್ಬಿಂಗ್ ಬೇಡ ಅಂತಾಲೆ ಇದ್ದಾರೆ. ಈ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಕೂಡ ಬೀದಿಗಿಳಿದು ಹೋರಾಟ ಮಾಡುತ್ತಲೇ ಇದ್ದಾರೆ. ಇದೀಗ ಮತ್ತೆ ವಾಟಾಳ್ ನಾಗರಾಜ್ ಬೀದಿಗಿಳಿದಿದ್ದಾರೆ.ಹೌದು, ಡಬ್ಬಿಂಗ್ ಸಿನಿಮಾ  ವಿರೋಧಿಸಿ ಇಂದು ವಾಟಾಳ್ ಪ್ರತಿಭಟನೆ ಮಾಡಿದ್ದಾರೆ. ಡಬ್ಬಿಂಗ್ ಸಿನಿಮಾಗಳ ವಿರುದ್ದ ಕನ್ನಡ ಒಕ್ಕೂಟದ ವತಿಯಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ‘ಚಲನಚಿತ್ರ ವಾಣಿಜ್ಯ ಮಂಡಳಿ’ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ನೀತಿಗೆಟ್ಟ ವಾಣಿಜ್ಯ ಮಂಡಳಿ

ಈ ವಿಚಾರವಾಗಿ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಚಿನ್ನೇಗೌಡ್ರಿಗೆ ವಾಟಾಳ್ ಮನವಿ ಮಾಡಿದ್ದಾರೆ.  ಇದೇ ವೇಳೆ ಮಾತನಾಡಿರೋ ವಾಟಾಳ್ ಡಬ್ಬಿಂಗ್ ವಿರೋಧದ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತಾ ಕೇಳಿದ್ರೆ ಅಧ್ಯಕ್ಷರು ತುಟಿ ಪಿಟಕ್ ಅನ್ನುತ್ತಿಲ್ಲ. ಡಬ್ಬಿಂಗ್ ವಿರುದ್ಧವಾಗಿ ಕಲಾವಿದರು, ನಿರ್ದೇಕರುಗಳು, ನಿರ್ಮಾಪಕರು ಬೀದಿಗಿಳಿದು ಹೋರಾಟ ಮಾಡ್ಬೇಕು. ಆದ್ರೆ ಯಾರೂ ಬಂದಿಲ್ಲ ಅವ್ರ ಸ್ಥಾನದಲ್ಲಿ ನಾವು ಹೋರಾಟ ಮಾಡ್ತಿದಿವಿ ಇದಕ್ಕೆ ವಾಣಿಜ್ಯ ಮಂಡಳಿ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ನೀತಿಗೆಟ್ಟ ವಾಣಿಜ್ಯ ಮಂಡಳಿ ವಿರುದ್ಧ ವಾಟಾಳ್ ಹರಿಹಾಯ್ದಿದ್ದಾರೆ.

 

Tags