ಸುದ್ದಿಗಳು

ಆಯುಕ್ತರನ್ನು ಭೇಟಿ ಮಾಡಿದ ‘ಚಲನಚಿತ್ರ ವಾಣಿಜ್ಯ ಮಂಡಳಿ’

ಬೆಂಗಳೂರು, ಸೆ.12: ಸಿನಿಮಾ ಪ್ರಚಾರಕ್ಕಾಗಿ ಬದಲಿ ವ್ಯವಸ್ಥೆ ಮಾಡುವಂತೆ ಇಂದು ಬಿಬಿಎಂಪಿ ಆಯುಕ್ತರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಭೇಟಿ ಮಾಡಿದೆ.

ಸದ್ಯ ಬೆಂಗಳೂರಲ್ಲಿ ಪ್ಲಾಸ್ಟಿಕ್ ಜಾಹಿರಾತು ನಿಷೇಧ ಮಾಡಲಾಗಿದೆ. ಈಗಾಗಲೇ ಇಡೀ ನಗರ ಜಾಹಿರಾತುಗಳಿಂದ ಮುಕ್ತವಾಗಿದೆ. ಜಾಹಿರಾತು ಹಾಕಿದ್ರೆ ದಂಡದ ಜೊತೆಗೆ ಜೈಲುವಾಸುವನ್ನು ಅನುಭವಿಸಬೇಕಾದಿತು ಅಂತಾ ಸೂಚನೆ ಕೂಡ ಹೊರಡಿಸಲಾಗಿದೆ. ಆದ್ರೆ ಇದೀಗ ಈ ಜಾಹಿರಾತು ವಿಚಾರವಾಗಿ ಸಿನಿಮಾ ರಂಗಕ್ಕೆ ದೊಡ್ಡ ಹೊಡೆತ ಬಿದ್ದಿದೆ ಅಂದ್ರೆ ತಪ್ಪಾಗಲಾರದು. ಇದೀಗ ಪ್ರಚಾರಕ್ಕಾಗಿ ಬದಲಿ ವ್ಯವಸ್ಥೆ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಲಾಗಿದೆ. ಹೌದು, ಇಂದು ಫ್ಲೆಕ್ಸ್ ಪೋಸ್ಟರ್ ನಿಷೇಧ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಿಬಿಎಂಪಿ ಆಯುಕ್ತರನ್ನು ಭೇಟಿ ಮಾಡಿದ್ದರು. ಅಧ್ಯಕ್ಷ ಚಿನ್ನೇಗೌಡ, ಪ್ರಧಾನ ಕಾರ್ಯದರ್ಶಿ ಬಾಮ ಹರೀಶ್ ಇಂದು ಭೇಟಿ ಮಾಡಿ, ಚಲನಚಿತ್ರ ಪ್ರಚಾರಕ್ಕೆ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಯುಕ್ತರು. ಪ್ಲಾಸ್ಟಿಕ್ ಅಂಶ ಬಿಟ್ಟು ಹಾಗೂ ಗೋಡೆಗಳಿಗೆ ಪೋಸ್ಟರ್ ಹಾಕುವಂತಿಲ್ಲ. ಬಟ್ಟೆ ಬ್ಯಾನರ್ ಮೂಲಕ ಹಾಗೂ ಥಿಯೇಟರ್ ಆವರಣದಲ್ಲಿ ಪೋಸ್ಟರ್ ಹಾಕಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

Tags

Related Articles