ಸುದ್ದಿಗಳು

ಜಗ್ಗೇಶ್-ಗುರುಪ್ರಸಾದ್ ಜೋಡಿಯ ಸಿನಿಮಾಕ್ಕೆ ಸುರೇಶ್ ಬಂಡವಾಳ

ಬೆಂಗಳೂರು, ಆ-24:ನವರಸನಾಯಕ ಜಗ್ಗೇಶ್ ಹಾಗೂ ಗುರುಪ್ರಸಾದ್  ಜೋಡಿ ಈ ಹಿಂದೆಯೇ ಜನರ ಮನಸ್ಸನ್ನ ಗೆದ್ದಿದೆ. ಎದ್ದೇಳು ಮಂಜುನಾಥ ಹಾಗೂ ಮಠ ಸಿನಿಮಾಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ ಈ ಜೋಡಿ. ಇದೀಗ ಮತ್ತೆ ನಕ್ಕು ನಗಿಸೋಕೆ ಬರುತ್ತಿದೆ. ಇತ್ತೀಚೆಗಷ್ಟೆ ಈ ಜೋಡಿ ಇನ್ನೊಂದು ಸಿನಿಮಾ ಮಾಡಲು ರೆಡಿಯಾಗಿದೆ ಅನ್ನೋದನ್ನ ಹೇಳಿದ್ದೆವು. ಆದ್ರೆ ಆ ಸಿನಿಮಾಕ್ಕೆ ಇದೀಗ ಕೆ.ಎ.ಉಮಾಪತಿ ಬಂಡವಾಳ ಹಾಕುತ್ತಿದ್ದಾರಂತೆ.

ಅದು “ಮಠ- ೨”ಆ…? ಅಥವಾ “ಮಂಜುನಾಥ- ೨ಆ…?

ಹೌದು, ಜಗ್ಗೇಶ್ ತೆರೆ ಮೇಲೆ ಬಂದರೆ ಸಾಕು ಇಂದಿಗೂ ಅವರ ಅಭಿಮಾನಿಗಳು ಸಿಳ್ಳೆ, ಚಪ್ಪಾಳೆ ಹೊಡೆಯೋದು ಗ್ಯಾರಂಟಿ. ಈಗಾಗಲೇ ಅನೇಕ ಸಿನಿಮಾಗಳ ಮೂಲಕ ಬಹಳಷ್ಟು ಜನಪ್ರಿಯತೆ ಗಳಿಸಿರೋ ಈ ನಟ ಇತ್ತೀಚೆಗೆ “ತೋತಾಪುರಿ” ಅನ್ನೋ ಸಿನಿಮಾ ಮಾಡುತ್ತಿದ್ದಾರೆ. “ಮಠ” ಹಾಗೂ “ಎದ್ದೇಳು ಮಂಜುನಾಥ” ದಂತಹ ಸಿನಿಮಾಗಳನ್ನ ನೀಡಿದ ಈ ಜೋಡಿ ಸದ್ಯ ಇನ್ನೊಂದು ಸಿನಿಮಾಕ್ಕೆ ರೆಡಿಯಾಗಿದೆ. ಆದ್ರೆ ಅದು “ಮಠ- ೨”ಆ…? ಅಥವಾ “ಮಂಜುನಾಥ- ೨ಆ…? ಅಥವಾ ಬೇರೆ ಟೈಟಲ್‌ನ ಸಿನಿಮಾನಾ.. ಅನ್ನೋದು ಗೊತ್ತಿಲ್ಲ. ಇದೀಗ ಇವರ ಮೂರನೇ ಸಿನಿಮಾಗೆ ಕೆ.ಎ.ಸುರೇಶ್ ಬಂಡವಾಳ ಹಾಕುತ್ತಿದ್ದಾರೆ.

ಇನ್ನು, ಸುರೇಶ್ ಈ ಹಿಂದೆ ” ಶ್ರಾವಣಿ ಸುಬ್ರಹ್ಮಣ್ಯ”, “ಆರ್ ಎಕ್ಸ್ ಸೂರಿ”, “ಶಿವಲಿಂಗು” ದಂತಹ ಸಿನಿಮಾಗಳಿಗೆ ಬಂಡವಾಳ ಹಾಕಿದ್ದಾರೆ. ಅಷ್ಟೆ ಅಲ್ಲ ಜಗ್ಗೇಶ್ ರ “ತೋತಾಪುರಿ ” ಸಿನಿಮಾಗೂ ಕೂಡ ಬಂಡವಾಳ ಹೂಡಿದ್ದು, ಇದೀಗ ಗುರು-ಜಗ್ಗಿಯ ಕಾಂಬಿನೇಷನ್‌ನಲ್ಲಿ ಮತ್ತೆ ಬಂಡವಾಳ ಹೂಡುತ್ತಿದ್ದಾರೆ. ಇನ್ನು ಸದ್ಯದಲ್ಲೇ ಸಿನಿಮಾದ ಟೈಟಲ್ ನಿಗಧಿಯಾಗಲಿದೆ. ಮತ್ತೊಮ್ಮೆ ಈ ಜೋಡಿ ಬಹಳಷ್ಟು ನಿರೀಕ್ಷೆಗಳೊಂದಿಗೆ ಜನರನ್ನು ನಕ್ಕು ನಗಿಸೋಕೆ ಬರುತ್ತಿದೆ.

 

Tags

Related Articles