ಸುದ್ದಿಗಳು

ಪ್ರೇಮ್ ಗಿದ್ದಾರೆ ಅನಾಮಿಕ ಅಭಿಮಾನಿ

ಬೆಂಗಳೂರು, ಸೆ.14: ನಿರ್ದೇಶಕ ಪ್ರೇಮ್ ಅವರ ಅನಾಮಿಕ ಅಭಿಮಾನಿಯೊಬ್ಬರು ದೇವರಂತೆ ಪೂಜಿಸುತ್ತಿದ್ದಾರೆ.

ರಾಜಕೀಯ ಮುಖಂಡರು, ಸಿನಿಮಾ ನಟ ನಟಿಯರಿಗೆ ಅಭಿಮಾನಿಗಳು ಇರುವುದು ಸಾಮಾನ್ಯ. ಅವರ ಸಿನಿಮಾಗಳು ಪೋಸ್ಟರ್ ಗಳನ್ನು ತಮ್ಮ ಮೊಬೈಲ್ ಡಿಪಿಯಲ್ಲಿ, ಅಥವಾ ಮನೆಯಲ್ಲಿ ಹಾಕಿಕೊಳ್ಳುವುದು ಸಾಮಾನ್ಯ. ಇನ್ನು ಮುಂದುವರೆದು ಹೇಳುವುದಾದರೆ ಹೊಸ ಮನೆಗಳಿಗೆ ಹೆಸರಿಡುವುದು ಕೂಡ ನಡೆದಿವೆ. ಆದರೆ ಇಲ್ಲಿ ನಿರ್ದೇಶಕರೊಬ್ಬರನ್ನು ಮನೆ ದೇವರಂತೆ ಪೂಜೆ ಮಾಡಲಾಗುತ್ತಿದೆ.ಪ್ರೇಮ್ ಗಿದ್ದಾರೆ ಅನಾಮಿಕ ಅಭಿಮಾನಿ

ಹೌದು, ಆ ನಿರ್ದೇಶಕ ಬೇರಾರು ಅಲ್ಲ ಅವರೇ ಪ್ರೇಮ್. ಪ್ರೇಮ್ ಗೆ ಒಬ್ಬ ಅನಾಮಿಕ ಅಭಿಮಾನಿಯೊಬ್ಬರು ಇದ್ದಾರೆ. ಇವರ ಹೆಸರು ಏನು ಅನ್ನೋದು ಕೂಡ ಗೊತ್ತಿಲ್ಲ. ಪ್ರೇಮ್ ನ ತಮ್ಮ ಮನೆ ದೇವರಂತೆ ಈ ಅನಾಮಿಕ ಅಭಿಮಾನಿ ಪೂಜಿಸುತ್ತಿದ್ದಾರೆ. ದೇವರ ಮನೆಯಲ್ಲಿ ದೇವರು ಇದ್ದಂತೆ ಇದೀಗ ಈ ಅನಾಮಿಕನ ಮನೆಯಲ್ಲಿ ಪ್ರೇಮ್ ಜೀನೇ ಇವರಿಗೆ ದೇವರಂತೆ.ನಿರ್ದೇಶಕರಿಗೂ ಭಾವನಾತ್ಮಕ ಅಭಿಮಾನಿ

ಸದ್ಯ ಈ ಅಭಿಮಾನಿ ಪ್ರೇಮ್ ಫೋಟೋ ಇಟ್ಟ ,  ಎಲ್ಲಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅದೇನೆ ಇದ್ರು. ನಟ, ನಟಿಯರಿಗಷ್ಟೆ ಅಲ್ಲದೆ ನಿರ್ದೇಶಕರಿಗೂ ಇಂಥಹ ಭಾವನಾತ್ಮಕ ಅಭಿಮಾನಿಗಳಿರೋದು ಖುಷಿಯ ಸಂಗತಿ.

 

Tags