ಸುದ್ದಿಗಳು

‘ಕಮಾಂಡೋ’ ಡಬ್ಬಿಂಗ್ ಸಿನಿಮಾಗೆ ಉತ್ತಮ ರೆಸ್ಪಾನ್ಸ್

ಅಜಿತ್ ಮತ್ತು ಕಾಜಲ್ ಅಗರ್ ವಾಲ್ ಅಭಿನಯದ ಸಿನಿಮಾ

ಡಬ್ಬಿಂಗ್ ವಿರೋಧಗಳ ನಡುವೆಯೂ ‘ಕಮಾಂಡೋ’ ಸಿನಿಮಾ ಎಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.

ಬೆಂಗಳೂರು, ಆ.31: ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರೋಧಿ ಅಲೆ ಜೋರಾಗಿಯೇ ಎದ್ದಿತ್ತು. ಡಬ್ಬಿಂಗ್ ನಿಂದಾಗಿ ಕನ್ನಡ ಚಿತ್ರರಂಗದಲ್ಲಿ ಕಲಾವಿದರಿಗೆ ತೊಂದರೆಯಾಗುತ್ತಿದೆ ಎಂದು ಕಲಾವಿದರು, ನಿರ್ದೇಶಕರು, ಸಂಗೀತ ನಿರ್ದೇಶಕರು ಸೇರಿದಂತೆ ಬಹುತೇಕ ಸಂಘಗಳು ಡಬ್ಬಿಂಗ್ ಬೇಡ ಎಂದರೆ ನಿರ್ಮಾಪಕರು ಮಾತ್ರ ಡಬ್ಬಿಂಗ್ ಪರ ಒಲವು ತೋರಿದ್ದರಿಂದ, ಸ್ಯಾಂಡಲ್ ವುಡ್ ನಟ ನಟಿಯರು ರೊಚ್ಚಿಗೆದ್ದರು.

ಡಬ್ಬಿಂಗ್ ಗೆ ವಿರೋಧ ವ್ಯಕ್ತಪಡಿಸಿದ ಹ್ಯಾಟ್ರಿಕ್ ಹೀರೋ

ಸ್ವತಃ ಶಿವರಾಜ್ ಕುಮಾರ್ ಅವರೆ ಡಬ್ಬಿಂಗ್ ಗೆ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಡಬ್ಬಿಂಗ್ ಚಿತ್ರಗಳು ಬೇಡ ಎಂಬ ಅಘೋಷಿತ ನಿಯಮವೊಂದು ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ಇವೆ.  ಅಂದಹಾಗೆ ಈ ಡಬ್ಬಿಂಗ್ ಬೇಕು ಬೇಡ ಎಂಬ ಹೋರಾಟಕ್ಕೆ ದಶಕಗಳ ಇತಿಹಾಸವೇ ಇದೆ. ನ್ಯಾಯಾಲಯದ ಮೆಟ್ಟಿಲೇರಿದ್ದ ಈ ವಿವಾದದಿಂದಾಗಿ  ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದೂ ಆಗಿದೆ.


ವಿರೋಧಗಳ ನಡುವೆಯೂ ‘ಕಮಾಂಡೋ’ ಸಿನಿಮಾ ಬಿಡುಗಡೆ

ಈ ಪರ ವಿರೋಧಗಳ ನಡುವೆಯೇ ಕೆಲವೊಂದು ಡಬ್ಬಿಂಗ್ ಚಿತ್ರಗಳು ಕನ್ನಡದಲ್ಲಿ ತೆರೆಕಂಡಿದ್ದರೂ ಅವು ಗಮನ ಸೆಳೆದಿರಲಿಲ್ಲ. ಆದರೆ ಇದೀಗ ಮತ್ತೆ ಡಬ್ಬಿಂಗ್ ವಿಚಾರ ಚರ್ಚೆಯಾಗಲು ಕಾರಣವಾಗಿರುವುದು ‘ಕಮಾಂಡೋ’. ಆಗಸ್ಟ್ 31ರಂದು  ‘ಕಮಾಂಡೋ’ ಡಬ್ಬಿಂಗ್ ಸಿನಿಮಾ ತೆರೆಕಂಡಿದ್ದು, ಈ ಸಿನಿಮಾ  2017ರ ‘ವಿವೇಕಂ’ ತಮಿಳು ಚಿತ್ರದ ಡಬ್‌ ಆಗಿದೆ.  ಹರಿವು ಕ್ರಿಯೇಷನ್ಸ್‌ ಡಬ್ಬಿಂಗ್ ಕನ್ನಡ ಅವತರಣಿಕೆಯನ್ನು ಸಿದ್ದಪಡಿಸಿದ್ದು, ಅಜಿತ್ ಅಭಿನಯದ ಈ ಚಿತ್ರ 70 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆ ಕಂಡಿದೆ.ಹರಿವು ಕ್ರಿಯೇಷನ್ಸ್ ನಲ್ಲಿ ಕಮಾಂಡೋ

ಹರಿವು ಕ್ರಿಯೇಷನ್ಸ್‌ನ ಜೋಷಿ ಮಾತನಾಡಿ, ಸಮಾನ ಆಸಕ್ತರು ಸೇರಿಕೊಂಡು  ಹರಿವು ಕ್ರಿಯೇಷನ್ ಕಟ್ಟಿಕೊಂಡಿದ್ದು, ನಮ್ಮ ಕ್ರಿಯೇಷನ್ ನ ಮೊದಲ ಪ್ರಯತ್ನವೇ ‘ಕಮಾಂಡೋ’. ವೃತ್ತಿಪರ ಡಬ್ಬಿಂಗ್‌ ಕಲಾವಿದರು ಕೆಲಸ ಮಾಡಿದ್ದಾರೆ.  ಹಲವು ಕನ್ನಡ ಸಂಘಟನೆಗಳು ನಮ್ಮನ್ನು ಬೆಂಬಲಿಸಿದ್ದು, ಇಲ್ಲಿವರೆಗೆ ಯಾರಿಂದಲೂ ವಿರೋಧ ವ್ಯಕ್ತವಾಗಿಲ್ಲ ಎನ್ನುತ್ತಾರೆ. ಅಂದ ಹಾಗೆ ‘ವಿವೇಕಂ’ ಚಿತ್ರ ಸಂಪೂರ್ಣವಾಗಿ ‘ವಿದೇಶದಲ್ಲಿ ಚಿತ್ರೀಕರಣವಾಗಿದೆ.   80 ಕೋಟಿ ಬಜೆಟ್‌ ನಲ್ಲಿ ಉತ್ಕೃಷ್ಟ ತಾಂತ್ರಿಕತೆಯೊಂದಿಗೆ ಚಿತ್ರ ತಯಾರಾಗಿದೆ.‘ಕಮಾಂಡೋ. ಚಿತ್ರದಲ್ಲಿ ಅಜಿತ್ ಗೆ ಜೋಡಿಯಾಗಿ ಕಾಜಲ್ ಅಗರ್ ವಾಲ್ ನಟಿಸಿದ್ದಾರೆ. ಖಳನಾಯಕನ ಪಾತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್‌ ಇದ್ದಾರೆ.

Tags