ಸುದ್ದಿಗಳು

‘ಕೆಸಿಸಿ’ ಟಿಕೆಟ್ ಪಡೆದು ಸೆಲ್ಫಿ ವಿಡಿಯೋ ಮಾಡಿದ ಪ್ರಥಮ್

ಟಿಕೆಟ್ ಪಡೆದುಕೊಂಡಿರೋ ಪ್ರಥಮ್ ಕಿಚ್ಚನೊಟ್ಟಿಗೆ 'ಕೆಸಿಸಿ' ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುವ ಪ್ರಥಮ್ ಸದ್ಯ ಕೆಸಿಸಿ ಟಿಕೆಟ್ ಪಡೆದು ಲೈವ್ ಮಾಡೋ ಮೂಲಕ ಸುದ್ದಿಗೆ ಬಂದಿದ್ದಾರೆ.

ಬೆಂಗಳೂರು, ಸೆ.07: ಸದ್ಯ ಕೆಸಿಸಿ ಜ್ವರ ಪ್ರಾರಂಭವಾಗಿದೆ. ನಾಳೆ ನಡೆಯುವ ಸಿನಿ ದಿಗ್ಗಜರ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತುರರಾಗಿದ್ದಾರೆ. ಈಗಾಗಲೇ ಈ ಕ್ರಿಕೆಟ್ ಟೂರ್ನಿಗೆ ದರವನ್ನು ನಿಗಧಿಪಡಿಸಲಾಗಿದೆ. ಇನ್ನು ಟಿಕೆಟ್ ಕೂಡ ಈಗಾಗಲೇ ಸ್ಟೇಡಿಯಂ ನಲ್ಲಿ ಮಾರಾಟ ಮಾಡಲಾಗುತ್ತಿವೆ. ಇದೀಗ ಈ ಬೆನ್ನಲ್ಲೇ ನಟ ಪ್ರಥಮ್ ಟಿಕೆಟ್ ಪಡೆದಿದ್ದಾರೆ.

 

View this post on Instagram

 

ಹೆಂಗೆ ನಾವು????????☺???? ನಾವು ಅಂದ್ರೆ ಸುಮ್ನೆನಾ?

A post shared by Olle Hudga Pratham (@olle_hudga_prathama) on

ಕೆಸಿಸಿಗೆ ಆಲ್ ದಿ ಬೆಸ್ಟ್ ಹೇಳಿದ ಪ್ರಥಮ್

ಹೌದು ಎಲ್ಲೇ ಹೋದರು ಸೆಲ್ಫಿ ವಿಡಿಯೋ ಮಾಡೋ ಮೂಲಕ ಸದಾ ಸುದ್ದಿಯಲ್ಲಿರುವ ಪ್ರಥಮ್ ಸದ್ಯ ಕೆಸಿಸಿ ಟಿಕೆಟ್ ಪಡೆದು ಕಿಚ್ಚ ಸುದೀಪ್ ಜೊತೆ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಈಗಾಗಲೇ ಟಿಕೆಟ್ ಪಡೆದುಕೊಂಡಿರೋ ಪ್ರಥಮ್ ಕಿಚ್ಚನೊಟ್ಟಿಗೆ ಕೆಸಿಸಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಪೈಲ್ವಾನ್ ಜೊತೆ ಮರಿ ಪೈಲ್ವಾನ್

ಕನ್ನಡ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡಿ, ಕೆಸಿಸಿ ಟೂರ್ನಿಯ ಟಿಕೆಟ್ ಪಡೆದು ನೋಡಿ ಎಂದಿರುವ ಪ್ರಥಮ್, ಹುಟ್ಟುಹಬ್ಬದ ಹಾಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಷಯವನ್ನು ಸುದೀಪ್ ಗೆ ತಿಳಿಸಿದ್ದಾರೆ. ಅಷ್ಟಲಕ್ಷ್ಮಿಯರು ಬಾಸ್ ಗೆ ಅಟ್ಟಾಡಿಸಿಕೊಂಡು ಬರಲಿ. ಕೆಸಿಸಿ ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಕೆಸಿಸಿ ಒಳ್ಳೆಯ ಪ್ರಯತ್ನ. ಟಿಕೆಟ್ ಪಡೆದು ಟೂರ್ನಿ ನೋಡಿ ಎಂದಿದ್ದರೆ. ಇನ್ನು ಪೈಲ್ವಾನ್ ಜೊತೆ ಮರಿ ಪೈಲ್ವಾನ್ ನಾನು ಎಂದು ಹೇಳುವುದರ ಮೂಲಕ ಸುದ್ದಿಯಾಗಿದ್ದಾರೆ.

Tags

Related Articles