ಸುದ್ದಿಗಳು

‘ಕೆಸಿಸಿ ಕಪ್’ ಗೆ ಟಿಕೆಟ್ ದರ ನಿಗದಿ…!ಬೇಕಿದ್ದವರು ಬುಕ್ ಮಾಡಿಕೊಳ್ಳಿ…!

ಕೆಸಿಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗರು

ಬೆಂಗಳೂರು, ಸೆ.05: ಸದ್ಯ ಬಾರೀ ಕುತೂಹಲ ಮೂಡಿಸಿರುವ ಕೆಸಿಸಿ ಕ್ರಿಕೇಟ್ ಲೀಗ್ ಗೆ ಇನ್ನೇನು ದಿನಗಣೆನೆ ಪ್ರಾರಂಭವಾಗಿದೆ. ಈಗಾಗಲೇ ಕೆಸಿಸಿಗೆ ಅಂತ ಸಿನಿಮಾ ಮಂದಿ ತರಬೇತಿ ಕೂಡಾ ನಡೆಸುತ್ತಿದ್ದಾರೆ. ಈ ಬಾರಿಯ ವಿಷೇಶ ಅಂದರೆ ಸಿನಿ ದಿಗ್ಗಜರ ಜೊತೆಗೆ ಕ್ರಿಕೆಟ್ ದಿಗ್ಗಜರು ಕೂಡ ಜೊತೆಯಾಗುತ್ತಿದ್ದಾರೆ. ಇದೀಗ ಈ ಟೂರ್ನಿಗೆ ಟಿಕೆಟ್ ದರ ಕೂಡಾ ನಿಗದಿಯಾಗಿದೆ.

ಹೌದು, ಒಂದೇ ಮೈದಾನದಲ್ಲಿ ಘಟಾನುಘಟಿ ಸಿನಿ ದಿಗ್ಗಜರನ್ನು ನೋಡೋಕೆ ಸಿಗೋದು ಒಂದು ಪ್ರಶಸ್ತಿ ಸಮಾರಂಭದಲ್ಲಿ ಬಿಟ್ಟರೆ ಕೆಸಿಸಿ ಟೂರ್ನಿಯಲ್ಲಿ ಮಾತ್ರ. ಸೆಪ್ಟೆಂಬರ್ 8 ಮತ್ತು 9 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಈ ಟೂರ್ನಿಯಲ್ಲಿ 300  ರೂಪಾಯಿಂದ 5000 ರೂಪಾಯಿಯ ವರೆಗೆ ಟಿಕೆಟ್ ದರ ಇರಲಿದೆಯಂತೆ. ಇನ್ನು ಟಿಕೆಟ್ ಗೆ ತಕ್ಕಂತೆ ಪ್ರೇಕ್ಷಕರಿಗೆ ಸೌಲಭ್ಯ ಕೂಡ ಇದೆ.

ಇನ್ನು, ಈ ಬಾರಿ ಕೆಸಿಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ಇಂಗ್ಲೆಂಡ್‌ನ ಓವೈಸ್ ಷಾ, ಆಸ್ಟ್ರೇಲಿಯಾದ ಆಡಂ ಗಿಲ್‌ಕ್ರಿಸ್ಟ್,  ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್,  ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲುಸ್ನರ್, ಹರ್ಷೆಲ್ ಗಿಬ್ಸ್ ಆಡಲಿದ್ದಾರೆ.  ಸದ್ಯ ಈಗಾಗಲೇ ಸಿದ್ದತೆ ನಡೆಸಿರುವ ಚಿತ್ರತಂಡ ಇನ್ನೇನು ಮೈದಾನಕ್ಕಿಳಿಯಲು ಸಜ್ಜಾಗಿದೆ.

Tags

Related Articles