ಸುದ್ದಿಗಳು

ಕೆಸಿಸಿ ತರಬೇತಿಯಲ್ಲಿ ಕೇಕ್ ಕತ್ತರಿಸಿ ಸಂಭ‍್ರಮಾಚರಣೆ ಮಾಡಿದ ಕಿಚ್ಚ…!

ಕೊಡಗು ಪ್ರವಾಹದಲ್ಲಿ ನಲುಗಿದವರಿಗೆ ಸಹಾಯ

ಇದೇ ತಿಂಗಳ 8 ಮತ್ತು 9ರಂದು  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಪಂದ್ಯಾವಳಿ ನಡೆಯಲಿದೆ‌. ಕೊಡಗು ಪ್ರವಾಹದಲ್ಲಿ ನಲುಗಿದವರ ಸಹಾಯಾರ್ಥವಾಗಿ ಪಂದ್ಯ ನಡೆಯಲಿದೆ.

ಬೆಂಗಳೂರು, ಸೆ.03: ಸಾಲು ಸಾಲು ಸಿನಿಮಾಗಳಲ್ಲಿ ನಿರತಾರಾಗಿರುವ ಕಿಚ್ಚ ಇದೀಗ  ಕೆಸಿಸಿ ಟೂರ್ನಿಯಲ್ಲೂ ಭಾಗಿಯಾಗಿದ್ದಾರೆ.  ಸಿನಿಮಾ ದಂಡೇ ಒಂದು ಕಡೆ ಸೇರುವ ಕ್ಷಣಕ್ಕೆ ಈಗಾಗಲೇ ವೇದಿಕೆ ಸಜ್ಜಾಗುತ್ತಿದೆ. ಇದರ ನಡುವೆ ಕೆಸಿಸಿಗೆ ಅಂತ ತರಬೇತಿ ಕೂಡ ನಡೆಯುತ್ತಿದೆ‌.  ನೆಲಮಂಗಲದ ಆದಿತ್ಯ ಕ್ರೀಡಾಂಗಣದಲ್ಲಿ  ಇಂದು ನಡೆದ ತರಭೇತಿಯಲ್ಲಿ ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಭಾಗಿಯಾಗಿದ್ದರು. ಈ ವೇಳೆ ಕಿಚ್ಚ ಕೇಕ್ ಕತ್ತರಿಸೋ ಮೂಲಕ ಮತ್ತೊಮ್ಮೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ತರಬೇತಿಯಲ್ಲಿ ಪಾಲ್ಗೊಂಡ ಕಿಚ್ಚ ಮತ್ತು ಶಿವಣ್ಣ

ಹೌದು, ಕೆಸಿಸಿಗೆ ಇನ್ನೇನು ಕೆಲವೆ ದಿನಗಳು ಇವೆ. ಇದಕ್ಕೆ ತರಬೇತಿ ಕೂಡ ನಡೆಯುತ್ತಿದೆ.  ನಿನ್ನೆ ತಾನೇ ಕಿಚ್ಚ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಇಂದು ಕೆಸಿಸಿ ತರಭೇತಿಯಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಕ್ರೀಡಾಂಗಣದಲ್ಲಿ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಂಡರು. ಇನ್ನು ಪರಸ್ಪರ ಶಿವಣ್ಣ ಮತ್ತು ಸುದೀಪ್  ಸಿಹಿ ತಿನ್ನಿಸಿದರು.ಇದೇ ತಿಂಗಳ 8 ಮತ್ತು 9ರಂದು  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಪಂದ್ಯಾವಳಿ ನಡೆಯಲಿದೆ‌. ಕೊಡಗು ಪ್ರವಾಹದಲ್ಲಿ ನಲುಗಿದವರ ಸಹಾಯಾರ್ಥವಾಗಿ ಪಂದ್ಯ ನಡೆಯಲಿದೆ. ಪಂದ್ಯದ ಹಿನ್ನೆಲೆಯಲ್ಲಿ ಪೂರ್ವಬಾವಿ ತರಭೇತಿ ನಡೆಯುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ಪ್ರೋತ್ಸಾಹಿಸಬೇಕೆಂದು ಅಭಿಮಾನಿಗಳಿಗೆ ಶಿವಣ್ಣ ಕರೆ ನೀಡಿದ್ದಾರೆ.

Tags

Related Articles