ಸುದ್ದಿಗಳು

ಬಾಲಿವುಡ್ ಹಾಗೂ ಚಂದನವನ ನಟರ ಸಮಾಗಮ

'ಪೈಲ್ವಾನ್' ಸಿನಿಮಾದಲ್ಲಿ ನಿರತರಾಗಿರುವ ಕಿಚ್ಚ ಮತ್ತು ಸುನೀಲ್

ಒಳ್ಳೆಯ ವ್ಯಕ್ತಿತ್ವ ಹಾಗೂ ಒಳ್ಳೆಯ ವ್ಯಕ್ತಿ, ಕಳೆದ ರಾತ್ರಿ ನಮ್ಮ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸ್ವಾಗತ ಸುನೀಲ್ ಶೆಟ್ಟಿ ಅಣ್ಣ ಅಂತಾ ಸುದೀಪ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು, ಆ.29: ನಟ ಕಿಚ್ಚ ಸುದೀಪ್ ಸದ್ಯ ‘ಪೈಲ್ವಾನ್’ ಸಿನಿಮಾದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾಗೆ ಸುನೀಲ್ ಶೆಟ್ಟಿ ಆಗಮಿಸಿರೋದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಇತ್ತೀಚೆಗೆ ನಡೆದ ‘ಪೈಲ್ವಾನ್’ ಸಿನಿಮಾ ಚಿತ್ರೀಕರಣದಲ್ಲಿ ಸುನೀಲ್ ಶೆಟ್ಟಿ ಭಾಗಿಯಾಗಿದ್ದಾರೆ. ಇದೀಗ ಕಿಚ್ಚ ಸುದೀಪ್ ಶೂಟಿಂಗ್ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೆಬ್ಬುಲಿ ನಿರ್ದೇಶಕನ ಹೊಸ ಪ್ರೋಡಕ್ಷನ್

ಹೌದು, ಯಶಸ್ವಿ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಕೃಷ್ಣ ‘ಫೈಲ್ವಾನ್‌’  ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೂಲಕ ಕೃಷ್ಣ ಪ್ರೋಡಕ್ಷನ್ ಕೂಡಾ ಶುರು ಮಾಡ್ತಿದ್ದಾರೆ. ಸದ್ಯ ಈ ಸಿನಿಮಾದ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಮೊದಲ ಹಂತದ ಶೂಟಿಂಗ್ ಮುಗಿಸಿದ್ದ ಈ ಚಿತ್ರತಂಡ ಸದ್ಯ ಇತ್ತೀಚೆಗೆ ಮತ್ತೊಂದು ಹಂತದ ಚಿತ್ರೀಕರಣ ಪ್ರಾರಂಭಮಾಡಿದೆ. ಈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಕೂಡಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ರಾತ್ರಿ ಕೆಲವೊಂದು ಶೂಟಿಂಗ್ ಫೋಟೋವನ್ನು ಕಿಚ್ಚ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಟ್ವಿಟರ್ ಖಾತೆಯ ಫೋಟೋ

‘ಒಳ್ಳೆಯ ವ್ಯಕ್ತಿತ್ವ ಹಾಗೂ ಒಳ್ಳೆಯ ವ್ಯಕ್ತಿ, ಕಳೆದ ರಾತ್ರಿ ನಮ್ಮ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸ್ವಾಗತ ಸುನೀಲ್ ಶೆಟ್ಟಿ ಅಣ್ಣ’ ಅಂತಾ ಸುದೀಪ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು, ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಇದೆ. ಅಲ್ಲದೆ ಮುಂಬೈ ಮೂಲದ ಆಕಾಂಕ್ಷ ಸಿಂಗ್ ಕಿಚ್ಚನ ಜೋಡಿಯಾಗಿ ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಸುದೀಪ್ ಕೂಡ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Tags

Related Articles