ಸುದ್ದಿಗಳು

‘ಕೆಸಿಸಿ’ ಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದವನ್ನು ತಿಳಿಸಿದ ಕಿಚ್ಚ

ಬೆಂಗಳೂರು, ಸೆ.11: ಕೆಸಿಸಿ ಎರಡನೇ ಆವೃತ್ತಿಯ ಟೂರ್ನಿ ಮುಗಿದಿದೆ. ಇದೀಗ ಈ ಟೂರ್ನಿಗೆ ಸಹಕರಿಸಿದ ಎಲ್ಲರಿಗೂ ನಟ ಸುದೀಪ್ ಧನ್ಯವಾದ ತಿಳಿಸಿದ್ದಾರೆ.

ಕೆಸಿಸಿ ಎರಡನೇ ಆವೃತ್ತಿಯ ಟೂರ್ನಮೆಂಟ್  ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಟೀಮ್ ವಿಜಯಬೇರಿ ಭಾರಿಸಿದೆ. ಕೆಸಿಸಿ ಮೊದಲ ದಿನದಿಂದಲೂ ಸಾಕಷ್ಟು ಮಂದಿ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಕಿಚ್ಚ ಸುದೀಪ್ ಎಲ್ಲರಿಗೂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧನ್ಯವಾದ ಹೇಳಿದ್ದಾರೆ.

ಕೆಸಿಸಿಯಲ್ಲಿನ ಸುದೀಪ್ ಅನಿಸಿಕೆಗಳು

ಇನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಮ್ಮೆಲ್ಲರಿಗೂ ಮರೆಯಲಾಗದ ದಿನ ಕ್ಷಣ ಅಂದರೆ ಅದು ಕೆಸಿಸಿ ಲೀಗ್. ಇಲ್ಲಿ ತನಕ ನನಗೆ ಯಾರಾದರೂ, ಒಬ್ಬರೂ ನನ್ನ ನಿದ್ದೆಯಿಂದ ಎಚ್ಚರ ಮಾಡುತ್ತಿದ್ದರು. ಆದರೆ ಈಗ ಅದೆಲ್ಲ ಮುಗಿದು ಎಲ್ಲರ ಮುಖದಲ್ಲೂ ಮಂದಹಾಸ ನೋಡಿ ನನ್ನ ಮನಸ್ಸಿಗೆ ಖುಷಿ ಕೊಟ್ಟಿದೆ. ಹಾಗೂ ನಮ್ಮ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದಗಳು. ಅಲ್ಲದೆ ನನಗೆ ಸಪೋರ್ಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.ಇನ್ನು ಇದೇ 8 ಮತ್ತು 9 ನಡೆದ ಈ ಟೂರ್ನಿಯಲ್ಲಿ ಕ್ರಿಕೆಟ್ ದಿಗ್ಗಜರೂ ಭಾಗಿಯಾಗಿದ್ದು ಪ್ರೇಕ್ಷಕರಲ್ಲಿ ಇನ್ನಷ್ಟು ಸಂತಸವನ್ನು ಉಂಟು ಮಾಡಿತ್ತು. ಪ್ರತಿಯೊಂದು ಮ್ಯಾಚ್‌ ನಲ್ಲಿ ಪ್ರೇಕ್ಷಕರು ಕುತೂಹಲದಿಂದಲೇ ನೋಡುತ್ತಿದ್ದರು. ಇನ್ನು, ಒಂದೊಂದು ಮ್ಯಾಚ್‌ ಗೂ ನಿರೀಕ್ಷೆಗಳು ಹೆಚ್ಚಿದ್ದವು, ಯಾವ ಟೀಮ್ ಈ ಬಾರಿ ವಿಜಯವಾಗುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದರು. . ಒಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ಕೆಸಿಸಿ ಲೀಗ್ ನಡೆಯಿತು.

Tags