ಸುದ್ದಿಗಳು

‘ಮೈ ನೇಮ್ ಇಸ್ ಕಿರಾತಕ’ ನ ಹೊಸ ಲುಕ್ ಹೇಗಿದೆ ನೋಡಿ…?

ಕಿರಾತಕನಾಗಿ ಮೋಡಿ ಮಾಡಲು ಬಂದ ರಾಕಿಂಗ್ ಸ್ಟಾರ್

“ಮೈ ನೇಮ್ ಇಸ್ ಕಿರಾತಕ” ಶೂಟಿಂಗ್ ಶುರುವಾಗಿದ್ದು, ಅದರ ಫೋಟೋವೊಂದನ್ನು ಯಶ್ ತಮ್ಮಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು, ಸೆ.03: ಚಂದನವನದ ರಾಕಿಂಗ್ ಸ್ಟಾರ್ ಯಶ್. ಸತತ ಎರಡು ವರ್ಷಗಳ ಪರಿಶ್ರಮದಿಂದ ‘ಕೆಜಿಎಫ್’ ಸಿನಿಮಾವನ್ನು ಮಾಡಿ ಮುಗಿಸಿದ್ದಾರೆ. ಸದ್ಯ ನವೆಂಬರ್ ತಿಂಗಳಿನಲ್ಲಿ ಈ ಸಿನಿಮಾ ತೆರೆಗೆ ತರಲು ನಿರ್ಮಾಪಕರು ಮುಂದಾಗಿದ್ದಾರೆ.  ಕಳೆದು ಎರಡು ವರ್ಷಗಳಿಂದ ಯಶ್ ಯಾವುದೇ ಸಿನಿಮಾವನ್ನು ಕೈಗೆ ತೆಗೆದುಕೊಂಡಿರಲಿಲ್ಲ. ಇದೀಗ ಕಿರಾತಕ ಸೀಕ್ವೆಲ್ ನಲ್ಲಿ ಹಿಂತಿರುಗಿ ಬರುತ್ತಿದ್ದಾರೆ.‘ಮೈ ನೇಮ್ ಇಸ್ ಕಿರಾತಕ’ ಚಿತ್ರೀಕರಣ ಶುರು

‘ಮೈ ನೇಮ್ ಇಸ್ ಕಿರಾತಕ’ ಸಿನಿಮಾ ಸಂಬಂಧಿಸಿದಂತೆ  ಇಂದು ಶೂಟಿಂಗ್ ಶುರುವಾಗಿದ್ದು, ಯಶ್  ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದನ್ನು ತಮ್ಮ ಫೇಸ್ ಬುಕ್ ಬಹಿರಂಗಪಡಿಸಿದ್ದಾರೆ.

ಈ ಹಿಂದೆ ಯಶ್ ‘ಕಿರಾತಕ’  ಸಿನಿಮಾದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದರು. ಅವರ  ಮಂಡ್ಯ ಶೈಲಿಯ ಮಾತು, ಖಡಕ್ ಲುಕ್  ಹೀಗೆ ಅವರ ಹಾವ ಬಾವಗಳು ಯಶ್ ಅಭಿಮಾನಿಗಳು ಇಂದಿಗೂ ನೆನಪಿನ್ನಲ್ಲಿಟ್ಟುಕೊಂಡಿದ್ದಾರೆ. ಇದೀಗ ‘ಮೈ ನೇಮ್ ಇಸ್ ಕಿರಾತಕ’ ಸಿನಿಮಾದಲ್ಲಿ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ.ಕಿರಾತಕ ಸಿನಿಮಾದಲ್ಲಿನ ಯಶ್ ಲುಕ್

‘ಮೈ ನೇಮ್ ಇಸ್ ಕಿರಾತಕ’ ಸಿನಿಮಾದಲ್ಲಿನ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದನ್ನು ಯಶ್ ತಮ್ಮ ಫೇಸ್ ಬುಕ್ ನಲ್ಲಿ ಇಂದು ಹಂಚಿಕೊಂಡಿದ್ದಾರೆ. ಈ  ಫೋಟೋದಲ್ಲಿ ಯಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನೀಲಿ ಬಣ್ಣದ ಶರ್ಟ್, ಪಂಚೆ, ಕನ್ನಡಕ, ಕೈಗೆ  ಮತ್ತು ಕತ್ತಿಗೆ ಚೈನ್ ಗಳನ್ನು ಧರಿಸಿ ಥೇಟ್ ಮಂಡ್ಯದ ಗೌಡನಾಗಿ ಮಿಂಚುತ್ತಿದ್ದಾರೆ. ಈ ಫೋಟೋದಲ್ಲಿ ಚಿಕ್ಕಣ್ಣ, ಕುರಿ ಪ್ರತಾಪ್, ಮತ್ತು ಈ ಹಿಂದೆ ಕಿರಾತಕ ಸಿನಿಮಾದಲ್ಲಿ ಅಭಿನಯಿಸಿದ್ದ ಹಲವಾರು ಕಲಾವಿದರು ಅಭಿನಯಿಸುವುದರೊಂದಿಗೆ ನಾನು ಕಿರಾತಕನಾಗಿ ಹಿಂತಿರುಗಿ ಬರುವುದಾಗಿದೆ…, ಎಂದು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

Tags