ಸುದ್ದಿಗಳು

‘ಕೋಟಿಗೊಬ್ಬ 3’ ಸಿನಿಮಾದ ಫೋಟೋ ರಿವಿಲ್…!

ರಗಡ್ ಲುಕ್ ನಲ್ಲಿ ಮಿಂಚುತ್ತಿರುವ ಕಿಚ್ಚ

ಬೆಂಗಳೂರು, ಸೆ.05:  ಇತ್ತೀಚಿಗೆ ಟೀಸರ್‌ ನಲ್ಲಿಯೇ ಸಿನಿಮಾ ಕಾತುರತೆ ಹೆಚ್ಚಿಸಿಕೊಂಡಿರುವ ‘ಕೋಟಿಗೊಬ್ಬ 3’ ಸಿನಿಮಾದ ಫೋಟೋಗಳು ಇದೀಗ ಬಿಡುಗಡೆ ಆಗಿವೆ. ಕಪ್ಪು ಬಟ್ಟೆಯಲ್ಲಿ ಕಿಚ್ಚನ ಆಕ್ಷನ್ ನೋಡುಗರನ್ನು ಸೆಳೆಯುತ್ತಿದೆ. ಈಗಾಗಲೇ ಸಿನಿಮಾ ಟೀಸರ್ ನಿಂದ ಸದ್ದು ಮಾಡಿದ್ದ ಚಿತ್ರತಂಡ, ಇದೀಗ  ಫೋಟೋಗಳಿಂದ ಮತ್ತೆ ಸದ್ದು ಮಾಡುತ್ತಿವೆ.

ಶಿವ ಕಾರ್ತಿಕ್ ನಿರ್ದೇಶನದ ಸಿನಿಮಾ

ಇನ್ನು ಈ ಚಿತ್ರವನ್ನು ‘ಕೋಟಿಗೊಬ್ಬ ೨’  ಚಿತ್ರವನ್ನು ನಿರ್ಮಾಣ ಮಾಡಿದ ಸೂರಪ್ಪ ಬಾಬು ಅವರೇ ಪಾರ್ಟ್ – 3 ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕಿಚ್ಚ ಸುದೀಪ್ ಕಥೆ ಇದ್ದು, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಶಿವ ಕಾರ್ತಿಕ್ ಹೊತ್ತುಕೊಂಡಿದ್ದಾರೆ. ಈಗಾಗಲೇ ‘ಕೊಟಿಗೊಬ್ಬ 2’ ಸೂಪರ್ ಹಿಟ್ ಆದಂತಹ ಚಿತ್ರ ಹಾಗಾಗಿ ಪಾರ್ಟ್-3  ಚಿತ್ರವನ್ನು ಜನರಿಗೆ ತಲುಪಿಸಬೇಕಾದ್ರೆ ಅದಕ್ಕಿಂತಲೂ ಏನಾದರೂ ವಿಭಿನ್ನ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸಬೇಕು. ಹಾಗಾಗಿ ನಿರ್ದೇಶಕ ಶಿವ ಕಾರ್ತಿಕ್ ಕೂಡಾ ದೊಡ್ಡ ಜವಾಬ್ದಾರಿಯೊಂದಿಗೆ ಕಥೆಯನ್ನು ಹೆಣೆದುಕೊಂಡಿದ್ದಾರೆ..

ಯೂಟ್ಯೂಬ್  ಟ್ರೆಂಡಿಂಗ್ ನಲ್ಲಿ ಕೋಟಿಗೊಬ್ಬ

ಅಂದಹಾಗೆ ಕೋಟಿಗೊಬ್ಬ ಪಾರ್ಟ್-2 ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ತಯಾರಾಗಿ ತೆರೆ ಕಂಡಿತ್ತು.. ‘ಕೋಟಿಗೊಬ್ಬ 3’ ಸಿನಿಮಾ ಇದೀಗ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದು, ಎರಡನೇ ಹಂತದ ಚಿತ್ರೀಕರಣ ಪ್ರಾರಂಭ ಮಾಡಿದೆ. ಇನ್ನು ಚಿತ್ರತಂಡ ಕಿಚ್ಚ ಸುದೀಪ್ ಹುಟ್ಟುಹಬ್ಬದ ಅಂಗವಾಗಿ ಟೀಸರ್ ಕೂಡ ರಿಲೀಸ್ ಮಾಡಿದ್ದು ಯುಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

ಕಿಚ್ಚನ ಅಭಿಮಾನಿಗಳಂತು ತಮ್ಮ ನೆಚ್ಚಿನ ನಾಯಕನ ಸಾಲು ಸಾಲು ಸಿನಿಮಾಗಾಗಿ ತುದಿಗಾಲಿನಲ್ಲಿ ನಿಂತು ಕಾಯ್ತಿರೋದಂತು ನೂರಕ್ಕೆ ನೂರರಷ್ಟು ಸತ್ಯ.. ‘ಅಂಬಿ ನಿಂಗ್ ವಯಸ್ಸಾಯ್ತೋ’, ‘ದಿ ವಿಲನ್’, ತೆಲುಗು ಸಿನಿಮಾ ‘ಸೈರಾ’ ಹಾಗೂ ಕೋಟಿಗೊಬ್ಬ ಸಿನಿಮಾವನ್ನು ನೋಡಲು ಅಭಿಮಾನಿಗಳು ಕೌತುಕದಿಂದ ಕಾಯುತ್ತಿದ್ದಾರೆ.

Tags