ಸುದ್ದಿಗಳು

‘ಅರಗಿಣಿ’ ಯಾಗಿ ಮನ ಮಾತಾದ ‘ಅವಳು’…

ಖುಷಿ ಪಾತ್ರಧಾರಿಯಾಗಿ ಮನೆಮಾತಾಗಿರುವ ಮೇಘನ

ಬೆಂಗಳೂರು, ಸೆ.08: ಕನ್ನಡ ಧಾರಾವಾಹಿ ವೀಕ್ಷಕರಿಗೆ ಬೆಡಗಿ ಅಪರಿಚಿತರೇನಲ್ಲ. ತನ್ನ ಮನೋಜ್ಞ ಅಭಿನಯದಿಂದ ವೀಕ್ಷಕರ ಮನ ಸೆಳದಿರುವ ಚಿತ್ರದುರ್ಗದ ಚೆಲುವೆಯ ಹೆಸರು ಮೇಘನ ಗೌಡ. ಅರಗಿಣಿ ಧಾರಾವಾಹಿಯಲ್ಲಿ ತುಂಟ ಹುಡುಗಿ ಖುಷಿ ಪಾತ್ರಧಾರಿಯಾಗಿ ಮನೆಮಾತಾಗಿರುವ ಮೇಘನ ಸದ್ಯ ಮಾನಸಳಾಗಿ ಬದಲಾಗಿದ್ದು ನಿಮಗೆಲ್ಲಾ ತಿಳಿದಿದೆಹೌದು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅವಳು ಧಾರಾವಾಹಿಯಲ್ಲಿ ಮಾನಸ ಪಾತ್ರಕ್ಕೆ ಜೀವತುಂಬುತ್ತಿದ್ದ ಮೇಘನಾ ಇದೀಗ ಅದೇ ಧಾರಾವಾಹಿಯಲ್ಲಿ ಪದ್ಮಳಾಗಿ ಮಿಂಚುತ್ತಿದ್ದಾರೆ.ಅರಗಿಣಿ ಖುಷಿ ಪಾತ್ರಧಾರಿಯಾಗಿ ಕಿರುತೆರೆ  ಪ್ರವೇಶ

ಅರಗಿಣಿ ಖುಷಿ ಪಾತ್ರಧಾರಿಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಮೇಘನ ಗೌಡ ಆಕಸ್ಮತ್ತಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಟನೆಯ ಬಗ್ಗೆ ಏನೂ ತಿಳಿಯದ ಮೇಘನಳಿಗೆ ಇದು ಬಯಸದೇ ಬಂದ ಅವಕಾಶ. ಫೇಸ್ ಬುಕ್ ನಲ್ಲಿ ಇವರ ಫೋಟೋ ನೋಡಿದ ರವಿ ಗರಣಿ ಅರಗಿಣಿ ಧಾರಾವಾಹಿಯಲ್ಲಿ ನಟಿಸುವಂತೆ ಕೇಳಿದರು. ನಿರೂಪಣೆ ಇಷ್ಟವಿದ್ದ ಮೇಘನ ಆಡಿಶನ್ ಮೂಲಕ ಆಯ್ಕೆಯಾಗಿದ್ದು ಮಾತ್ರವಲ್ಲದೇ ಮೊದಲ ಧಾರಾವಾಹಿಯಲ್ಲೇ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.ಮೇಘನಳಿಗೆ ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಎಂದರೆ ಇಷ್ಟ.

ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ನನಗೆ ತುಂಬಾ ಕಷ್ಟ ಆಯ್ತು. ಹಿರಿಯ ನಟರ ನಡುವೆ ನಾನು ನಟಿಸಲು ಸಾಧ್ಯವಾ ಎಂಬ ಅಳುಕಿತ್ತು. ಆದರೆ ರವಿ ಗರಣಿ ಮತ್ತು ಹಿರಿಯ ಕಲಾವಿದರುಗಳ ಸಹಕಾರದಿಂದ ನಾನು ಬಣ್ಣದ ಲೋಕದಲ್ಲಿ ಮಿಂಚಲು ಸಾಧ್ಯವಾಯಿತು ಎನ್ನುವ ಮೇಘನಳಿಗೆ ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯಾ ರೈ ಎಂದರೆ ಇಷ್ಟ.ಕಿರುತೆರೆಯ ಪಯಣ ವಿವರಿಸಿದ ಮೇಘನಾ

‘’ ನನ್ನ ಕಿರುತೆರೆ ಪಯಣ ನಿಜಕ್ಕೂ ತುಂಬಾ ಚಾಲೆಂಜಿಂಗ್ ಆಗಿತ್ತು. ಒಂದು ಸೀರಿಯಲ್ ನಲ್ಲಿ ಅಭಿನಯಿಸಿದ ನಂತರ ನಾನು ಮಗದೊಂದು ಸೀರಿಯಲ್ ನಲ್ಲಿ ಅವಕಾಶ ಸಿಗಲು ಕಷ್ಟವಾಗುತ್ತೆ ಅಂತ ಅಂದುಕೊಂಡಿದ್ದೆ. ಅರಗಿಣಿ ಧಾರಾವಾಹಿಯ ಅನಂತರ ಮುಂದೆ ಏನು ಮಾಡೋದು ಅಂಥ ಅನ್ನಿಸಲೇ ಇಲ್ಲ. ಸಮಯದಲ್ಲಿ ತೆಲುಗು, ತಮಿಳು ಧಾರವಾಹಿಗಳಿಂದ ಆಫರ್ ಬಂತು. ಅದರಲ್ಲಿ ಅಭಿನಯಿಸುವ ಮೂಲಕ ಪರಭಾಷೆಗೂ ಕಾಲಿಟ್ಟೆ. ಎಲ್ಲಿಯೂ ಖಾಲಿ ಕುಳಿತುಕೊಳ್ಳುವ ಅವಕಾಶವೇ ಬರಲಿಲ್ಲ’’ ಎಂದು ಕಿರುತೆರೆಯ ಪಯಣವನ್ನು ವಿವರಿಸಿದರು ಮೇಘನ.ಗ್ಲಾಮರಸ್ ಆಗಿ ಕಾಣುವುದಕ್ಕಿಂತಲೂ ಒಳ್ಳೆಯ ತೂಕವಿರುವ ಪಾತ್ರದಲ್ಲಿ ನಟಿಸಬೇಕು. ಉತ್ತಮ ಸಂದೇಶ ಸಾರುವಂಥ ಪಾತ್ರವಾದರೆ ಚೆನ್ನ ಎಂದೆನ್ನುವ ಮೇಘನಗೆ ಪೌರಾಣಿಕ ಪಾತ್ರದಲ್ಲಿ ನಟಿಸುವ ಬಯಕೆ.

ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಯಲ್ಲಿ ನಟಿಸಿರುವ ಮೇಘನ ನಟನಾ ರಂಗದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ ಎಂದು ಹಾರೈಸೋಣ.

Tags

Related Articles