ಸುದ್ದಿಗಳು

ಆರನೇ ವರ್ಷದ ಫ್ಲೆಮಿಂಗೋ ಅವಾರ್ಡ್ ನಲ್ಲಿ ಚಂದನವನದ ತಾರೆಯರು

ಚಿತ್ರರಂಗದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ಪ್ರಶಸ್ತಿ

ಬೆಂಗಳೂರು, ಡಿ.15: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ‘ಫ್ಲೆಮಿಂಗೋ’ ಅವಾರ್ಡ್ ನೀಡಲಾಯಿತು. ಈ ವರ್ಷ ಕೂಡ ಹಲವಾರು ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.

ಕನ್ನಡದ ನಟ – ನಟಿಯರ ಸಾಧನೆಗೆ ನೀಡುವ ಪ್ರಶಸ್ತಿ

ಅಲ್ಲಿ ಎಲ್ಲಿ ನೋಡಿದರೂ ಪುಟಾಣಿ ಮಾಡೆಲ್ಸ್‌ ಗಳ ಕಲರವ, ಇನ್ನೂ  ಬ್ಯೂಟಿಫುಲ್ ನಟಿ ರೂಪಿಕಾರವರ ಡಾನ್ಸ್ ಝಲಕ್ ಜೊತೆಗೆ ಸ್ಯಾಂಡಲ್‌ ವುಡ್ ನಟಿ ಶ್ರಾವ್ಯರವರು ಡಿಸೈನ್ ಮಾಡಿರುವ ಕಾಸ್ಟೂಮ್‌ ನಲ್ಲಿ ಬೆಕ್ಕಿನ ನಡಿಗೆಯಲ್ಲಿ ಬಳುಕುತ್ತಾ ಬಂದ್ರು ಮಾಡೆಲ್ಸ್‌ ಗಳು. ಇವೆಲ್ಲ ಕೂಡ 6ನೇ ವರ್ಷದ ಫ್ಲೆಮಿಂಗೋ ಅವಾರ್ಡ್‌ನಲ್ಲಿ ನಡೆದ ವಿಚಾರಗಳು.

6ನೇ ವರ್ಷದ ಫ್ಲೆಮಿಂಗೋ ಅವಾರ್ಡ್

ಪುಟ್ಟ ಪುಟಾಣಿಗಳು  ಸ್ಟೇಜ್ ಮೇಲೆ ಬೆಕ್ಕಿನ ನಡಿಗೆಯಲ್ಲಿ ಅವರ ಸ್ಟೈಲ್ ನೋಡಲು ಚಂದ ಈ ಝಲಕ್ ಕಂಡು ಬಂದಿದ್ದು ಫ್ಲೆಮಿಂಗೋ ಸೆಲೆಬ್ರಿಟಿ ವರ್ಡ್ ಲಿಮಿಟೆಡ್‌ ನಲ್ಲಿ. ಹೌದು, ಇದು ಆರನೇ ವರ್ಷದ ಫ್ಲೆಮಿಂಗೋ ಅವಾರ್ಡ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ  ಫಿಲ್ಮ್ ಛೇಂಬರ್ ಅಧ್ಯಕ್ಷರಾದ ಚಿನ್ನೇಗೌಡ, ಹಿರಿಯ ಕಲಾವಿದರಾದ ಶ್ರೀನಾಥ್, ಗಿರಿಜಾ ಲೋಕೇಶ್, ರೇಖಾ ದಾಸ್, ವನಿತಾ ವಾಸು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸ್ಯಾಂಡಲ್‌ ವುಡ್ ಸ್ಟಾ‍ರ್ಸ್ ಭಾಗಿ

ಒಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಚಿತ್ರರಂಗದಲ್ಲಿ ಸಾಧನೆ ಮಾಡಿದ ಕಲಾವಿದರಿಗೆ ಫ್ಲೇಮಿಂಗೋ ಸಂಸ್ಥೆಯ ಕಡೆಯಿಂದ ಅವಾರ್ಡ್ ನೀಡಲಾಯಿತು.. ಈಗಾಗಲೇ ಈ ಅವಾರ್ಡ್ ಬಹಳಷ್ಟು ಮಂದಿ ಪಡೆದಿದ್ದಾರೆ. ಈ ವರ್ಷ ಕೂಡ ಹಲವು ಮಂದಿಗೆ ನೀಡಿದೆ ಈ ಸಂಸ್ಥೆ.

 

Tags