ಸುದ್ದಿಗಳು

ಗಾಂಧಿನಗರಕ್ಕೆ ಲಗ್ಗೆ ಇಡಲು ಬರುತ್ತಿದೆ”ಗೋಸಿ ಗ್ಯಾಂಗ್”

ಹೊಸಬರ ಸಿನಿಮಾ

‘ಗೋಸಿ ಗ್ಯಾಂಗ್’ ಎನ್ನುವುದು ಹುಡುಗರ ತಂಡ ಅನ್ನೋದು ಮೇಲ್ನೋಟಕ್ಕೆ ಕಂಡುಬಂದರೂ ಇದು ಮಾಮೂಲಿ ಚಿತ್ರಗಳಂತೆ ಅದೇ ಲವ್, ಕಾಮಿಡಿ ತರದ ಸಿನಿಮಾವಲ್ಲದೆ, ಇದೊಂದು ಥ್ರಿಲ್ಲರ್ ಕಥೆಯನ್ನುಒಳಗೊಂಡಿದೆ.

ಬೆಂಗಳೂರು, ಆ.31: ಜಗ್ಗೇಶ್ ಪುತ್ರ ಯತಿರಾಜ್ ನಟಿಸಿರುವ . “ ಗೋಸಿ ಗ್ಯಾಂಗ್” ಎನ್ನುವ ಚಿತ್ರವೊಂದು ಗಾಂಧಿನಗರದಲ್ಲಿ ಇತ್ತೀಚೆಗೆ  ಬಾರೀ ಸದ್ಧು ಮಾಡುತ್ತಿದೆ. ಬಹುತೇಕ ಹೊಸಬರೇ ಇರುವ  ಈ ಸಿನಿಮಾ ಮೊದಲಿಗೆ ತನ್ನ ಹೆಸರಿನಿಂದಲೇ ಕುತೂಹಲ ಮೂಡುವಂತೆ ಮಾಡಿದೆ. ಗೋಸಿ ಗ್ಯಾಂಗ್ ಎನ್ನುವುದು ಹುಡುಗರ ತಂಡ ಅನ್ನೋದು ಮೇಲ್ನೋಟಕ್ಕೆ ಕಂಡುಬಂದರೂ ಇದರಲ್ಲಿ  ತುಂಟಾಟ,ಲವ್, ಕಾಮಿಡಿಯ ಜೊತೆಗೆ  ಥ್ರಿಲ್ಲರ್ ಅಂಶಗಳು  ಕೂಡ ಇದೆಯಂತೆ. ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರ ಪಾತ್ರಗಳು ಒಂದೊಂದು ರೀತಿಯ ವಿಶೇಷತೆಗಳಿಂದ ಕೂಡಿದೆಯಂತೆ.

ನಿರ್ದೇಶಕನ ಕನಸಿಗೆ ನೀರೆರೆದ ನಿರ್ಮಾಪಕ

ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಲಾಂಛನದಲ್ಲಿ ಕೆ.ಶಿವಕುಮಾರ್, ಕಥೆ ಬರೆದು ನಿರ್ಮಾಣ ಮಾಡುತ್ತಿರುವ ‘ಗೋಸಿ ಗ್ಯಾಂಗ್’ ಚಿತ್ರವು  ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು  ಇದೀಗ ಬಿಡುಗಡೆಗೆ ಸಿದ್ದವಾಗಿದೆ.  ಕನ್ನಡ ಚಿತ್ರರಂಗದಲ್ಲಿ ಅಪಾರ ಅನುಭವ ಹೊಂದಿರುವ ರಾಜು ದೇವಸಂದ್ರ ನಿರ್ದೇಶನದ ಈ ಚಿತ್ರದಲ್ಲಿ ಜಗ್ಗೇಶ್ ರವರ ಕಿರಿಯ ಪುತ್ರ ಯತಿರಾಜ್  ಅವರೊಂದಿಗೆ ಅಜಯ್ ಕಾರ್ತಿಕ್, ರೋಹಿತ್ ಅಭಯ್, ಅಪ್ಪು ವೆಂಕಟೇಶ್, ಮೋನಿಕ, ಅನುಷ, ಸೋನು ಪಾಟೀಲ್, ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ  ಆರವ್ ರುಶಿಕ್ ಸಂಗೀತ ನಿದೇಶನ ಮಾಡಿದ್ದಾರೆ.

ಈ ಚಿತ್ರದ ಮೂಲಕ ಮತ್ತೊಮ್ಮೆ ಯತಿರಾಜ್ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಏಕೆಂದರೆ ಅವರು ಈವರೆಗೂ ನಟಿಸಿದ ಯಾವ ಚಿತ್ರಗಳೂ ಸಹ ಅಷ್ಟೊಂದು ಹಿಟ್ ಆಗಿರಲಿಲ್ಲ. ಹೀಗಾಗಿ ಈ ಚಿತ್ರದ ಮೇಲೆ ನಿರೀಕ್ಷೆಗಳು ಗದಿಗೆದರಿವೆ.

ಹಿರಿಯ ಕಲಾವಿದರ ದಂಡು

ಉಳಿದ ತಾರಾಬಳಗದಲ್ಲಿ ಹಿರಿಯ ಕಲಾವಿದರಾದ ಎಸ್.ಉಮೇಶ್, ಕಿಲ್ಲರ್ ವೆಂಕಟೇಶ್, ಬಿರಾದರ್, ಬ್ಯಾಂಕ್ ಜನಾರ್ಧನ್, ಮೈಕೆಲ್ ಮಧು, ಸುಚಿತ್ರ, ಕಾವ್ಯ ಪ್ರಕಾಶ್, ಅನ್ನಪೂರ್ಣ, ಗಿರೀಶ್ ಯಲಚೇನಹಳ್ಳಿ, ಭೈರೇಶ್, ಹಾಲತಿ ಜಯರಾಮ್, ಅನಿರುದ್ಧ,, ಶಿವಕುಮಾರ್, ಶಿವಮಂಜು, ವಿಕ್ಟರಿ ವಾಸು ಮುಂತಾದವರು ಅಭಿನಯಿಸಿದ್ದು ಸಿನಿಮಾಕ್ಕೆ ಇನ್ನಷ್ಟು ಮೆರಗು ತಂದಿದ್ದಾರೆ. ಇನ್ನು ಈ ಚಿತ್ರದಲ್ಲಿ ಇಷ್ಟು ದಿನ  ನಾಯಕರಿಗೆ ದೈಹಿಕ ತರಬೇತಿ ನೀಡುತ್ತಿದ್ದ ಅಪ್ಪುವೆಂಕಟೇಶ್‍ ಖಳನಾಯಕನಾಗಿ ನಟಿಸಿದ್ದಾರೆ.

ನಾದಬ್ರಹ್ಮ ಹಂಸಲೇಖರಿಂದ  ‘’ಗೋಸಿ ಗ್ಯಾಂಗ್ ‘’ ಚಿತ್ರವು ತನ್ನ ಹಾಡುಗಳ  ಧ್ವನಿಸಾಂದ್ರಿಕೆಯನ್ನು  ಈಗಾಗಲೇ ಅನಾವರಣಗೊಳಿಸಿಕೊಂಡಿದೆ. ಹಾಡುಗಳು ಸಹ ಎಲ್ಲೆಡೆ ಪ್ರಶಂಸೆಗೊಳಪಟ್ಟಿರುವುದು ಚಿತ್ರತಂಡಕ್ಕೆ ಸಂತಸ ಉಂಟುಮಾಡಿದೆ.

ಈ ಚಿತ್ರವು ಥ್ರಿಲ್ಲರ್ ಕತೆಯನ್ನು ಹೊಂದಿದ್ದು  ನಿಘಂಟುವಿನಲ್ಲಿ ಇರುವ ಪದವನ್ನು ಶೀರ್ಷಿಕೆಯಾಗಿ ಬಳಸಲಾಗಿದೆ.  ಗೋಸಿ ಹುಡುಗರು ಅಂತ ಯಾಕೆ ಕರೆಯುತ್ತಾರೆ ಅಂತ  ತಿಳಿಯಲು  ನೀವು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ನೋಡಲೇಬೇಕು.

 

Tags