ಸುದ್ದಿಗಳು

ಎರಡನೇ ಮಗುವಿಗೆ ಜನ್ಮ ನೀಡಿದ ಹೇಮಾ

ಬೆಂಗಳೂರು, ಸೆ.07: ‘ಅಮೇರಿಕಾ ಅಮೇರಿಕಾ’, ‘ದೊರೆ’, ‘ಸಂಭ್ರಮ’, ಸಿನಿಮಾ ಮೂಲಕ ಚಂದನವನದಲ್ಲಿ ಕಾಣಿಸಿಕೊಂಡ ಚೆಲುವೆಯ ಹೆಸರು ಹೇಮಾ ಪಂಚಮುಖಿ. ‘ಅಮೇರಿಕಾ ಅಮೇರಿಕಾ’ ಚಿತ್ರದ ಭೂಮಿಕಾ ಪಾತ್ರಧಾರಿಯಾಗಿ ಮಿಂಚಿದ ನಂತರ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ  ಹೇಮಾ ಸದ್ಯ ನಾಟ್ಯ ಶಾಲೆಯಲ್ಲಿ ನಿರತಾರಾಗಿರುವುದು ಗೊತ್ತಿರುವ ವಿಚಾರ. ಅದರ ಜೊತೆಗೆ ಹೇಮಾ ನಟ ಪ್ರಶಾಂತ್ ಗೋಪಾಲ ಶಾಸ್ತ್ರಿ ಅವರೊಂದಿಗೆ ಎರಡನೇ ಮದುವೆ ಆಗಿದ್ದು ಕೂಡ ನಮಗೆ ತಿಳಿದಿರುವ ವಿಚಾರ.

ಹೊಸ ಅತಿಥಿಯ ಆಗಮನದಿಂದ ಸಂತಸದಿಂದಿರುವ ಹೇಮಾ ದಂಪತಿ

ಕೆಲವು ತಿಂಗಳ ಹಿಂದೆಯಷ್ಟೇ ಮನೆಯವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸೀಮಂತ ಮಾಡಿಕೊಂಡ ಹೇಮಾ ನಿನ್ನೆ (ಸೆಪ್ಟೆಂಬರ್ 6) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಹೇಮಾ ಹಾಗೂ ಪ್ರಶಾಂತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹೊಸ ಅತಿಥಿಯ ಆಗಮನದಿಂದ ಸಂತಸದಿಂದಿರುವ ಹೇಮಾ ದಂಪತಿಗಳಿಗೆ ಅಭಿಮಾನಿಗಳ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.ನಟಿ ಹೇಮಾ ಅವರಿಗೆ ಈಗಾಗಲೇ ಒಬ್ಬಳು ಮಗಳಿದ್ದು ಆಕೆ ವಿದ್ಯಾಭ್ಯಾಸದ ಜೊತೆಗೆ ತಾಯಿಯಂತೆ ಭರತನಾಟ್ಯವನ್ನು ಕಲಿಯುತ್ತಿದ್ದಾಳೆ. ಸದ್ಯ ಸಿನಿಮಾ ಸಹವಾಸದಿಂದ ದೂರ ಉಳಿದುಕೊಂಡಿರುವ ಹೇಮಾ ಮತ್ತು ಪ್ರಶಾಂತ್ ನೃತ್ಯ ಶಾಲೆಯ ಮೂಲಕ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದಾರೆ. ಹಾಗೂ ಇದರ ಜೊತೆಗೆ  ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನವನ್ನು ಮಾಡುತ್ತಾರೆ.

 

Tags

Related Articles