ಸುದ್ದಿಗಳು

ಆ ಘಟನೆ ಬಗ್ಗೆ ಕೇಳಿದ್ರೆ ನಟಿ ಜಯಾಪ್ರದಾ ಈಗಲೂ ಹೆದರುತ್ತಾರೆ..!

ಬಾಲಿವುಡ್ ನ ಹಿರಿಯ ನಟಿ ಹಾಗೂ ಮಾದಕ ಬೆಡಗಿ ಜಯಪ್ರದಾ

ಬೆಂಗಳೂರು, ಸೆ.07: ರೀಲ್ ಲೈಫ್ ಹಾಗೂ ರಿಯಲ್  ಜೀವನಕ್ಕೂ ಅಜಾಗಜಾಂತರ ವ್ಯತ್ಯಾಸವಿದೆ. ಸ್ಯಾಂಡಲ್ ವುಡ್, ಬಾಲಿವುಡ್, ಹಾಲಿವುಡ್ ಸೇರಿ ವಿವಿಧ ಭಾಷೆಯ ಚಿತ್ರ ತಾರೆಯರ ಜೀವನ ಸಂಪೂರ್ಣವಾಗಿ ಕಲರ್ ಫುಲ್ ಆಗಿರಲು ಸಾಧ್ಯವೇ ಇಲ್ಲ. ಅವರು ಕೂಡಾ ಒಂದಲ್ಲೊಂದು ಕಷ್ಟಗಳನ್ನು ಎದುರಿಸುತ್ತಿರುತ್ತಾರೆ. ಈ ಮಾತು ಹೇಳುವುದಕ್ಕೂ ಒಂದು ಕಾರಣ ಇದೆ. ಅದೇನು ಗೊತ್ತೇ..?200 ಕ್ಕಿಂತ ಹೆಚ್ಚಿನ ಚಲನಚಿತ್ರಗಳಲ್ಲಿ ಅಭಿನಯಸಿದ ಜಯಾಪ್ರದಾ

ಬಾಲಿವುಡ್ ನ ಹಿರಿಯ ನಟಿ ಹಾಗೂ ಮಾದಕ ಬೆಡಗಿ ಜಯಪ್ರದಾ ದೀರ್ಘಕಾಲ ಬೆಳ್ಳಿ ಪರದೆಯ ಮೇಲೆ ನಟಿಸಿದವರು. ಬೆಳ್ಳಿ ಪರದೆಯ ಮೇಲೆ ತನ್ನದೇ ಆದ ಛಾಪನ್ನು ಮೂಡಿಸಿದವರು. ತನ್ನ ಮೂರು ದಶಕಗಳ ಸಿನಿ ವೃತ್ತಿಜೀವನದಲ್ಲಿ 200 ಕ್ಕಿಂತ ಹೆಚ್ಚಿನ ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಈ ವೇಳೆ ಅನೇಕ ಸ್ಟಾರ್ ನಟರ ಜೊತೆಗೆ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಜಯಪ್ರದಾರ ವೃತ್ತಿಜೀವನವು ತುಂಬಾ ಪ್ರಯಾಸದಾಯಕವಾಗಿತ್ತು. ಅವರು ಬಾಲಿವುಡ್ ನಲ್ಲಿ ಎತ್ತರದ ಹಂತದ ಮಟ್ಟವನ್ನು ತಲುಪಲು ಬಹಳಷ್ಟು ಸವಾಲುಗಳನ್ನು ಎದುರಿಸಿದ್ದರು. ಸುಂದರ ನಟಿಯರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿದ್ದ ಜಯಪ್ರದಾ ಈ ಒಂದು ಘಟನೆಯಿಂದ ಬಹಳ ಹೆದರಿದ್ದರು. ಜೊತೆಗೆ ನೊಂದುಕೊಂಡಿದ್ದರು.ಒಮ್ಮೆ ನಟ ದಿಲೀಪ್ ತಾಹಿಲ್ ಜೊತೆಗೆ ಹಾಟ್ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾಗ ಅನಿರೀಕ್ಷಿತ ಘಟನೆಯೊಂದು ನಡೆಯಿತು.

ಅಂದರೆ ಇದು ದಿಲೀಪ್ ತಾಹಿಲ್ ಮತ್ತು ಜಯಪ್ರದಾ ನಡುವಿನ ಆಲಿಂಗನ, ಚುಂಬನದ ದೃಶ್ಯವಾಗಿತ್ತು. ಶೂಟಿಂಗ್ ಆರಂಭವಾದಾಗ ನಟ ದಿಲೀಪ್ ತನ್ನ ನಿಯಂತ್ರಣವನ್ನು ಕಳೆದುಕೊಂಡು ನಟಿ ಜಯಪ್ರದಾರನ್ನು ಗಟ್ಟಿಯಾಗಿ ಹಿಡಿದುಕೊಂಡರು. ಈ ವೇಳೆ ಜಯಪ್ರದಾ, ಅವರ ಕೈ ಹಿಡಿತದಿಂದ ಹೊರಬರಲು ಸಾಕಷ್ಟು ಪ್ರಯತ್ನಿಸಿದರು. ಈ ವೇಳೆ ನಟಿ ಜಯಪ್ರದಾ ತುಂಬಾ ನೋವು ಅನುಭವಿಸುವಂತಾಯಿತು. ಈ ವೇಳೆ ಜಯಪ್ರದಾ ದಿಲೀಪ್ ಕುತ್ತಿಗೆಯನ್ನು  ಬಿಗಿಯಾಗಿ ಹಿಡಿದು ನೂಕಿದ್ದರು. ಕೋಪದಿಂದ ‘ದಿಲೀಪ್ ಇದು ರಿಯಲ್ ಅಲ್ಲ. ರೀಲ್. ಎಚ್ಚರದಿಂದ ನಟಿಸಿ’ ಅಂತಾ ಜೋರಾಗಿ ಕಪಾಳಮೋಕ್ಷ ಮಾಡಿದ್ದರು. ಈ ಘಟನೆ ನನಗೆ ಉಸಿರುಗಟ್ಟಿಸುವ ರೀತಿಯಂತಿತ್ತು ಅಂತಾ ಹೇಳುತ್ತಾರೆ ನಟಿ ಜಯಪ್ರದಾ.

Tags