ಸುದ್ದಿಗಳು

‘ಸಿನಿಮಾ ಸ್ಫೂರ್ತಿ’ ತಂಡದಿಂದ ಕೊಡಗು ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ

ಸಿನಿಮಾ ತಾರೆಯರಿಂದ ನಿಧಿ ಸಂಗ್ರಹ

ಕೊಡಗು ನೆರೆ ಸಂತ್ರಸ್ತರಿಗಾಗಿ ವಿಶೇಷ ಪೂಜೆ ಸಲ್ಲಿಸಿ, ಸಿನಿಮಾ ಮಂದಿ ಕಾಲ್ನಡಿಗೆಯಲ್ಲಿ ಜಾಥವನ್ನು ಶುರು ಮಾಡುವುದರ ಮೂಲಕ ಪರಿಹಾರ ನಿಧಿಯನ್ನು ಸಂಗ್ರಹ ಮಾಡಲಾಯಿತು.ಬೆಂಗಳೂರು, ಆ.28: ಕನ್ನಡ ಚಿತ್ರ ಸಾಮಾಜಿಕ ಜಾಲತಾಣ ಪ್ರಚಾರ ತಂಡಗಳಲ್ಲಲೊಂದಾದ ‘ಸಿನಿಮಾ ಸ್ಫೂರ್ತಿ’ ತಂಡವು ಭಾನುವಾರ ಕೊಡಗು ನೆರೆ ಸಂತ್ರಸ್ತರಿಗಾಗಿ ಪರಿಹಾರ ನಿಧಿ ಸಂಗ್ರಹ ಮಾಡುವ ಕಾರ್ಯಕ್ರಮ ಬೆಂಗಳೂರಿನ ವಿಜಯನಗರದಲ್ಲಿ ಹಮ್ಮಿಕೊಂಡಿತ್ತು.ಬೆಳಿಗ್ಗೆ ವಿಜಯನಗರದ ಮಾರುತಿ ಮಂದಿರ ದೇವಾಲಯದಲ್ಲಿ ಬೆಳಿಗ್ಗೆ 10 ಗಂಟೆಗೆ ಕೊಡಗು ನೆರೆ ಸಂತ್ರಸ್ತರಿಗಾಗಿ ವಿಶೇಷ ಪೂಜೆ ಸಲ್ಲಿಸಿ ಕಾಲ್ನಡಿಗೆಯಲ್ಲಿ ಜಾಥವನ್ನು ಶುರು ಮಾಡಲಾಯಿತು.ಕೊಡಗು ಜನರಿಗೆ ನೆರವಾಗುತ್ತಿರುವ ಸಿನಿಮಾ ಮಂದಿ

ಈ ಕಾರ್ಯಕ್ರಮಕ್ಕೆ “ಜೋಡಿಹಕ್ಕಿ” ಧಾರವಾಹಿ ಖ್ಯಾತಿಯ ” ಚೈತ್ರಾ ರಾವ್” , ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ಚಂದು ಗೌಡ, ‘ಮಂತ್ರಂ’ ಮತ್ತು ‘ರವಿ ಹಿಸ್ಟರಿ’ ಚಿತ್ರದ ನಾಯಕಿ ಪಲ್ಲವಿ ರಾಜು ಮತ್ತು ‘ಆಕ್ಟೋಪಸ್’ , ‘ಒಂದು ರೊಮ್ಯಾಂಟಿಕ್ ಕಥೆ’ ಚಿತ್ರದ ನಾಯಕಿ ಅಶ್ವಿನಿ ಚಂದ್ರಶೇಖರ್ ಸ್ವತಃ ಅವರೇ ಪರಿಹಾರ ನಿಧಿ ಸಂಗ್ರಹಿಸುವ ಮೂಲಕ ಕೊಡಗಿನ ಜನತೆಗೆ ನೆರವಾದರು. ಈ ಕಾರ್ಯಕ್ರಮದಿಂದ ಸಂಗ್ರಹವಾದ ಪರಿಹಾರ ನಿಧಿಯನ್ನು ಅಲ್ಲಿನ ಜನರಿಗೆ ಅವಶ್ಯಕತೆ ಇರುವ ವಸ್ತುಗಳ ಮೂಲಕ ತಲುಪಿಸಲಾಗುತ್ತಿದೆ.

Tags

Related Articles