ಸುದ್ದಿಗಳು

‘ಕುರುಕ್ಷೇತ್ರ’ ತಂಡದಿಂದ ಚಾಲೆಂಜಿಂಗ್ ಸ್ಟಾರ್ ಗೆ ಮಹಾ ಮೋಸ!

'ಕುರುಕ್ಷೇತ್ರ' ಸಿನಿಮಾ ಪ್ರಚಾರದಲ್ಲಿಲ್ಲ ದರ್ಶನ್ ಗೆ ಅವಕಾಶ

ಬೆಂಗಳೂರು, ಸೆ.14: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಕುರುಕ್ಷೇತ್ರ’. ಕೇವಲ ದರ್ಶನ್ ಪಾಲಿಗೆ ಮಾತ್ರವಲ್ಲದೆ ಕನ್ನಡ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಚಿತ್ರ. ಕುರುಕ್ಷೇತ್ರ ಸಿನಿಮಾ ಸಾಕಷ್ಟು ವಿಚಾರಗಳಿಂದ ಸುದ್ದಿ ಆಗುತ್ತಲೇ ಇದೆ. ಮೊನ್ನೆ ಮೊನ್ನೆಯಷ್ಟೇ ದರ್ಶನ್ ಅವರಿಗಿಂತಲೂ ನಿಖಿಲ್ ಕುಮಾರ್ ಅವರ ಅಭಿನಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಈಗ ಇಂತಹದ್ಧೇ ಮತ್ತೊಂದು ವಿಚಾರ ಅಭಿಮಾನಿಗಳಿಗೆ ತಿಳಿದು ಬಂದಿದೆ.

‘ಕುರುಕ್ಷೇತ್ರ’  ಸಿನಿಮಾ ತಂಡದಲ್ಲಿ ಏನೇನೋ ಬದಲಾವಣೆಗಳು ಆಗುತ್ತಿವೆ. ಡಿ ಬಾಸ್ ಗೆ ಈ ಮೂಲಕ ಮೋಸ ಆಗುತ್ತಿದೆಯೇ ಎನ್ನುವ ಪ್ರಶ್ನೆ ದರ್ಶನ್ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿದೆ. ಹಾಗಾದರೆ ದರ್ಶನ್ ಅವರಿಗೆ ಚಿತ್ರತಂಡ ಮಾಡಿದ ಮೋಸ ಏನು? ಈ ವಿಚಾರ ಇನ್ನು ಡಿ ಬಾಸ್ ಗಮನಕ್ಕೆ ಬಂದಿಲ್ಲವೇ?ಕುರುಕ್ಷೇತ್ರ ಪ್ರಚಾರದಲ್ಲಿ ದರ್ಶನ್ ಗಿಲ್ಲ ಅವಕಾಶ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾದ ಪ್ರಚಾರ ಕಾರ್ಯಗಳು ಆರಂಭವಾಗಿವೆ. ಅಧಿಕೃತವಾಗಿ ಸಿನಿಮಾ ತಂಡ ಪ್ರಮೋಷನ್ ಕೆಲಸಕ್ಕೆ ಚಾಲನೆ ಕೊಟ್ಟಿಲ್ಲವಾದರೂ ಆನ್ ಲೈನ್, ಸಾಮಾಜಿಕ ಜಾಲತಾಣದಲ್ಲಿ ಕೆಲಸಗಳು ಬಿರುಸಿನಿಂದ ಶುರುವಾಗಿದೆ. ಸಿನಿಮಾ ಬಿಡುಗಡೆ ಮುನ್ನ ಪ್ರೇಕ್ಷಕರ ಅಭಿಪ್ರಾಯವನ್ನು ಸಂಗ್ರಹಣೆ ಮಾಡುವ ‘ಬುಕ್ ಮೈ ಶೋ’ ಕೂಡ ಒಂದು ಸಿನಿಮಾ ಪ್ರಚಾರ ವೇದಿಕೆ.

ಬುಕ್ ಮೈ ಶೋ ನಲ್ಲಿ ನಿಖಿಲ್ ಫೋಟೋ

‘ಬುಕ್ ಮೈ ಶೋ’ ನಲ್ಲಿ ‘ಕುರುಕ್ಷೇತ್ರ’ ಅಂತ ಟೈಪ್ ಮಾಡಿ ಸರ್ಚ್ ಮಾಡಿದರೆ ಅಲ್ಲಿ ದರ್ಶನ್ ಫೋಟೋ ನೋಡುವುದಕ್ಕೆ ಸಿಗುವುದಿಲ್ಲ. ಚಿತ್ರಕ್ಕೆ  ದರ್ಶನ್ ನಾಯಕ ಆದರೆ, ಡಿಸ್ ಪ್ಲೇ ನಲ್ಲಿ ಪೋಷಕ ನಟನಾದ ನಿಖಿಲ್ ಕುಮಾರ್ ಫೋಟೋ ರಾರಾಜಿಸುತ್ತಿದೆ. ಈ ಬಗ್ಗೆ ದರ್ಶನ್  ಅಭಿಮಾನಿಗಳು ಗಮನ ಹರಿಸಿದ್ದಾರೆ. ಆದರೆ ದರ್ಶನ್ ಈ ಬಗ್ಗೆ ಚಕಾರ ಎತ್ತುವುದು ಬೇಡ ಎಂದಿದ್ದಾರೆ, ಎನ್ನುವುದು ಇದೀಗ ನಂಬಲರ್ಹ ಮೂಲಗಳಿಂದ ತಿಳಿಸಿವೆ.ಅಂದ್ಹಾಗೆ ಕುರುಕ್ಷೇತ್ರ ಸಿನಿಮಾವನ್ನು ನಾಗಣ್ಣ ನಿರ್ದೇಶನ ಮಾಡಿದ್ದು ಮುನಿರತ್ನ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್, ರವಿಚಂದ್ರನ್, ಹರಿಪ್ರಿಯಾ, ಮೇಘನಾ ರಾಜ್, ನಿಖಿಲ್ ಕುಮಾರ್ ಹೀಗೆ ಇನ್ನು ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ.

Tags