ಸುದ್ದಿಗಳು

ಚಂದನವನದ ಖ್ಯಾತ ನಿರ್ದೇಶಕನಿಗೆ ಪಂಗನಾಮ ಹಾಕಿದ ಜ್ಯೋತಿಷಿ…!

ಜ್ಯೋತಿಷಿಯಿಂದ ಎಸ್ ನಾರಾಯಣ್ ಗೆ ವಂಚನೆ

ಸಾಲ ಕೊಡಿಸುವ ಸಲುವಾಗಿ ವಂಚನೆ ಮಾಡಿದ ಜ್ಯೋತಿಷಿಯ ವಿರುದ್ದ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಬೆಂಗಳೂರು, ಆ.31: ನಿರ್ದೇಶಕ ಎಸ್ ನಾರಾಯಣ್‌ ಗೆ ತಮಿಳುನಾಡು ಮೂಲದ ಜ್ಯೋತಿಷಿಯೊಬ್ಬರು ವಂಚನೆ ಮಾಡಿರೋ ವಿಚಾರ ಇದೀಗ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಮಂದಾರ ಮೂರ್ತಿ ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಇದೀಗ ವಂಚನೆ ಮಾಡಿದ್ದಾರೆ.ಕೊಟ್ಟ ಹಣವೂ ಇಲ್ಲ ಸಾಲವೂ ಇಲ್ಲ

ಎಪ್ಪತ್ತು ಕೋಟಿ ಹಣವನ್ನು ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ಹೇಳಿದ್ದ ಜ್ಯೋತಿಷಿ, ಮೊದಲು ಸಾಲಕ್ಕಾಗಿ 20 ಲಕ್ಷ ನಿರ್ವಹಣಾ ಶುಲ್ಕವನ್ನು ಕೇಳಿದ್ದಾರೆ . ಈ ವೇಳೆ ನಿರ್ವಹಣಾ ಶುಲ್ಕವನ್ನು ನಾರಾಯಣ್ ನೀಡಿದ್ದಾರೆ. ಆದರೀಗ ಕೊಟ್ಟ ಹಣವೂ ಇಲ್ಲ, ಸಾಲವೂ ಇಲ್ಲ ಎನ್ನುವಂತಾಗಿದೆ.

ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಎಸ್ ನಾರಾಯಣ್ ಮಂದಾರ ಮೂರ್ತಿಯ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಈ ದೂರಿನನ್ವಯ ಮಂದಾರ ಮೂರ್ತಿ ಅವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

Tags