ಸುದ್ದಿಗಳು

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಬಿಡುಗಡೆ…!

ಮಕ್ಕಳೇ ಹೆಚ್ಚಾಗಿ ನಟಿಸಿರುವ ಚಿತ್ರ...!

ಮಂಗಳೂರು, ಆ.23: ತನ್ನ ನಟನೆ ಮತ್ತು ನಿರ್ದೇಶನದ ಮೂಲಕ ಜಾದೂ ಮಾಡಿದ ಅಪ್ಪಟ ಕರಾವಳಿ ಪತ್ರಿಭೆ  ರಿಷಬ್ ಶೆಟ್ಟಿ. ಇದೀಗ  ರಿಷಬ್  ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ . ಇಂದು ಮಂಗಳೂರಿನಲ್ಲಿ ಬಿಡುಗಡೆಗೊಂಡಿದೆ.

ಮಂಗಳೂರಿನ ಬಿಗ್ ಸಿನೆಮಾದಲ್ಲಿ ಈ ಕನ್ನಡ ಚಲನಚಿತ್ರದ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಈ ವೇಳೆ ಮಂಗಳೂರು ನಗರದ ‌ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್ , ದೀಪ ಬೆಳಗಿಸಿ ಸಿನೆಮಾ ಬಿಡುಗಡೆಗೊಳಿಸಿ ಶುಭ ಕೋರಿದರು. ಮೇಯರ್ ಭಾಸ್ಕರ್ ಮೊಯಿಲಿ, ಬಿಗ್ ಸಿನಿಮಾದ ಬಾಲಕೃಷ್ಣ ಶೆಟ್ಟಿ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ರಾಜೇಶ್ ಬ್ರಹ್ಮಾವರ, ಜ್ಞಾನೇಶ್, ಪ್ರಕಾಶ್ ಪಾಂಡೇಶ್ವರ್, ಪ್ರದೀಪ್ ಆಳ್ವ, ನಿರ್ಮಾಪಕರಾದ ರವಿ ರೈ ಕಳಸ ವಿಜಯ ಕುಮಾರ್, ಕೊಡಿಯಾಲ್ ಬೈಲ್ ಅಕ್ಷತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಮಾತೃಭಾಷೆ ಕುರಿತಾದ ಸಿನಿಮಾ

ಮಂಗಳೂರಿನ ಗಡಿಭಾಗದಲ್ಲಿರುವ ಕಾಸರಗೋಡಿನಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿನೆಮಾ ನಿರ್ಮಿಸಲಾಗಿದೆ. ಮಕ್ಕಳೇ ಹೆಚ್ಚಾಗಿ ನಟಿಸಿರುವ ಈ ಚಿತ್ರದಲ್ಲಿ 52 ಮಂದಿಯಲ್ಲಿ ಹತ್ತು ಮಕ್ಕಳ ಪಾತ್ರ ಹೆಚ್ಚು ಪ್ರಾಮುಖ್ಯತೆ ಹೊಂದಿದೆ. ಹಾಲಿವುಡ್ ಶೈಲಿಯಲ್ಲಿ ಈ ಸಿನೆಮಾವನ್ನು ನಿರ್ಮಿಸಲಾಗಿದೆ. ಶಿಕ್ಷಣ, ಮಾತೃಭಾಷೆ ಕುರಿತಂತೆ ಸಂಭಾಷಣೆ ಮೂಲಕ ಚರ್ಚಿಸಲಾಗಿದೆ. ಜೊತೆಗೆ ಹಾಸ್ಯದ ಲೇಪವೂ ಇದೆ.ಕಾಸರಗೋಡು ಸೇರಿ ಮಂಜೇಶ್ವರ, ಕುಂಬಳೆ, ಉಪ್ಪಳ, ಬಂಟ್ವಾಳದ ಕೈರಂಗಳ ಮತ್ತು ಮಂಗಳೂರಿನಲ್ಲಿ ಶೂಟಿಂಗ್ ನಡೆದಿದೆ. ಕನ್ನಡದ ಹಿರಿಯ ನಟ ಅನಂತನಾಗ್ ವಿಶೇಷ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಇವರ ಜೊತೆಗೆ ಖ್ಯಾತ ರಂಗಭೂಮಿ ಕಲಾವಿದ ಪ್ರಕಾಶ್ ತೂಮಿನಾಡು, ಪ್ರದೀಪ್ ಆಳ್ವಾ ಕದ್ರಿ, ಚೇತನ್ ಜಿ. ಪಿಲಾರ್, ಚಂದ್ರಹಾಸ್ ಶೆಟ್ಟಿ, ಶಶಿರಾಜ್ ಕಾವೂರ್ ಕೂಡಾ ನಟಿಸಿದ್ದಾರೆ.

ಚಿತ್ರತಂಡ

ರಿಷಬ್ ಶೆಟ್ಟಿ, ಬಿವಿ ರವಿ ರೈ ಕಳಶ, ಅಕ್ಷತಾ ಶೆಟ್ಟಿ, ಜಯರಾಮ್ ಬಿ.ಶೆಟ್ಟಿ ಈ ಚಿತ್ರದ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಈ ಚಿತ್ರಕ್ಕೆ ವೆಂಕಟೇಶ್ ಹಂಗೂರಾಜ್ ಛಾಯಾಗ್ರಹಣವಿದೆ. ವಾಸುಕಿ ವೈಭವ್ ಸಂಗೀತವಿದೆ. ವಸಂತ ಕುಲಕರ್ಣಿ ಕಲೆ ಇದೆ. ಅಭಿಜಿತ್ ಮಹೇಶ್, ರಾಜ್ ಬಿ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ. ಕೆ. ಕಲ್ಯಾಣ್, ತ್ರಿಲೋಕ್, ತ್ರಿವಿಕ್ರಮ್, ಅವಿನಾಶ್ ಬಲೆಕ್ಕಳ, ವೀರೇಶ್ ಶಿವಮೂರ್ತಿ ಸಾಹಿತ್ಯ  ಬರೆದಿದ್ದಾರೆ. ನಾಯಕ, ನಾಯಕಿ ಪ್ರಧಾನವಲ್ಲದ ಈ ಸಿನೆಮಾ ಹಾಡು, ಟ್ರೈಲರ್ ಮೂಲಕವೇ ಸದ್ದು ಮಾಡಿದೆ. ಸಿನಿ ಪ್ರೇಕ್ಷಕರ  ಪ್ರತಿಕ್ರಿಯೆ, ಕಾದು ನೋಡಬೇಕಿದೆ.

 

Tags