ಸುದ್ದಿಗಳು

ಚಂದನವನದಲ್ಲಿ “ಶೆಟ್ಟಿ” ಗಳದ್ದೇ ಕಾರುಬಾರು

ಬೆಂಗಳೂರು, ಸೆ,11: ಚಂದನವನದಲ್ಲಿ ಇತ್ತೀಚೆಗೆ ಶೆಟ್ಟಿಗಳ ಹವಾ ಜೋರಾಗಿದೆ.  ನಾವು ಯಾರ ಬಗ್ಗೆ ಹೇಳುತ್ತಿದ್ದೀವಿ ಅಂತ ಅಂದುಕೊಂಡ್ರಾ?

ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ರೀತಿಯ ಕೆಲಸಗಳಲ್ಲಿ ಪಾಲ್ಗೊಂಡು ಅದರಲ್ಲಿ ಯಶಸ್ಸನ್ನು ಕಾಣುತ್ತಿರುವವರಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಹಾಗೂ ಚಂದನ್ ಶೆಟ್ಟಿ, ಐಶಾನಿ ಶೆಟ್ಟಿ, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ, ಪ್ರಮೋದ್ ಶೆಟ್ಟಿ ಶೈನ್ ಶೆಟ್ಟಿ, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ, ಶ್ರೀನಿಧಿ ಶೆಟ್ಟಿ, ಸಂಚಿತಾ ಶೆಟ್ಟಿ, ಆವಂತಿಕಾ ಶೆಟ್ಟಿ, ನೀತೂ ಶೆಟ್ಟಿ, ರೂಪೇಶ್ ಶೆಟ್ಟಿ, ಮೇಘಾ ಶೆಟ್ಟಿ, ಯಶ್ ಶೆಟ್ಟಿ, ನೇಹಾ ಶೆಟ್ಟಿ,ಭೂಮಿ ಶೆಟ್ಟಿ ಇನ್ನೂ ಮುಂತಾದವರು ಇದ್ದು ಈ ಅಸಂಖ್ಯ ಮಂದಿ ಇನ್ನೂ ಬರುವವರಿದ್ದಾರೆ.

ಅಂದರೆನರ್ಥ..?! ಸ್ಯಾಂಡಲ್ ವುಡ್ ನಲ್ಲಿ ಇದೀಗ ‘ಶೆಟ್ಟಿ’ಗಳ ಕಾರುಬಾರು  ಜೋರಾಗಿಯೇ  ನಡೆಯುತ್ತಿದೆ. ಅವರ ಹೆಸರಿನಲ್ಲಿರುವ ಗುಟ್ಟು ಏನೆಂದರೆ ಅವರಲ್ಲಿನ ಶ್ರದ್ದೆ , ಸಾಮರ್ಥ್ಯ, ಕೆಲಸದ  ಮೇಲಿನ  ಶಿಸ್ತು, ಎಲ್ಲವೂ ಅವರನ್ನು ಯಶಸ್ಸಿನ ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತಿದೆ.  ನಮ್ಮ  ಈ ವಿಶ್ಲೇಷಣೆ ನಿಜವಾಗಿದ್ದು ಈ ಕೆಳಕಂಡವರಿಂದ..

ರಕ್ಷಿತ್ ಶೆಟ್ಟಿ

‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾದ ಮೂಲಕ ಚಂದನವನದಲ್ಲಿ ಬಿರುಗಾಳಿ ಎಬ್ಬಿಸಿದ ನಟ ರಕ್ಷಿತ್ ಶೆಟ್ಟಿ.  ‘ಉಳಿದವರುಕಂಡಂತೆ’ , ಸಿನಿಮಾ ನಿರ್ದೇಶನ ಮಾಡಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈ ಕಟ್ಟು’, ‘ಕಿರಿಕ್ ಪಾರ್ಟಿ’, ‘ರಿಕ್ಕಿ’, ‘ವಾಸ್ತುಪ್ರಕಾರ’, ಸಿನಿಮಾದಲ್ಲಿಅಭಿನಯಿಸಿದ್ದಾರೆ. ಸದ್ಯ ‘ಅವನೇ  ಶ್ರೀಮನ್ನಾರಾಯಣ’ , ‘ಚಾರ್ಲಿ  777’ ಸಿನಿಮಾದಲ್ಲಿ ನಿರತರಾಗಿದ್ದು, ಚಿತ್ರರಂಗದ ಭರವಸೆಯ ನಟ, ನಿರ್ದೇಶಕನಾಗಿ ಗುರುತಿಸಿಕೊಂಡು,  ನಿರ್ಮಾಪಕನಾಗಿಯೂ  ಬೆಳೆಯುತ್ತಿದ್ದಾರೆ.ಚಂದನ್ ಶೆಟ್ಟಿ

‘ಮೂರೇ ಮೂರೇ ಪೆಗ್ಗು’ಎಂಬುವ ರಾಪ್  ಹಾಡಿನಿಂದ ಮನೆಮಾತಾದ ಚಂದನ್ ಶೆಟ್ಟಿ, ಇದೀಗ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ, ಗಾಯಕ, ಸಾಹಿತ್ಯದ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ. ಕನ್ನಡದ ರಾಪರ್ ಸಿಂಗರ್ ಅಂತಲೇ ಹೆಸರುವಾಸಿಯಾದ ಚಂದನ್, ಬಿಗ್ ಬಾಸ್ ನ ವಿಜೇತನಾಗಿದ್ದಲ್ಲದೇ, ಇದೀಗ  ಹಲವಾರು  ಸಿನಿಮಾಗಳಿಗೆ ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ನಾಯಕನಾಗಲು ಬಂದ ವ್ಯಕ್ತಿ ನಿರ್ದೇಶಕನಾಗಿ, ಆನಂತರ ನಾಯಕನಾದವರು ರಿಷಬ್ ಶೆಟ್ಟಿ. ನಿರ್ದೇಶಕ, ನಟ, ಬರಹಗಾರರಾಗಿ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಲೂಸಿಯಾ, ಉಳಿದವರು ಕಂಡಂತೆ, ರಿಕ್ಕಿ, ಕಥಾ ಸಂಗಮ , ಇದೀಗ ಬೆಲ್ ಬಾಟಮ್ ಸಿನಿಮಾಗಳಲ್ಲಿ ಅಭಿನಯಸಿದ್ದಾರೆ. ಕಿರಿಕ್ ಪಾರ್ಟಿ, ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.ಶೀತಲ್ ಶೆಟ್ಟಿ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿಯಲ್ಲರೊಬ್ಬರು ಶೀತಲ್ ಶೆಟ್ಟಿ. ಚಿತ್ರರಂಗಕ್ಕೆ ಬರುವ ಮುನ್ನ ಕನ್ನಡದ ಹೆಸರಾಂತ ನ್ಯೂಸ್ ಛಾನೆಲ್ ಟಿವಿ9  ಸಂಸ್ಥೆಯಲ್ಲಿ ನ್ಯೂಸ್ ಆಂಕರ್ ಕೆಲಸವನ್ನು 4-5 ವರ್ಷಗಳ ಕಾಲ  ನಿರ್ವಹಿಸಿದ್ದರು. ಟಿವಿ 9 ಛಾನೆಲ್ ಅನ್ನು ತೊರೆದು ಬಿಗ್ ಬಾಸ್ ಮನೆ ಸೇರಿದರು. ಅಲ್ಲಿಂದ ಅವರ ನಸೀಬು ಬದಲಾಗಿಹೋಯ್ತು. ‘ಉಳಿದವರು ಕಂಡಂತೆ’, ‘ಪ್ರೇಮ ಗೀಮ ಜಾನೆ ದೋ’, ‘ಕೆಂಡಸಂಪಿಗೆ’, ‘ಅರ್ಜುನ’ ಸಿನಿಮಾಗಳಲ್ಲಿ ಅಭಿನಯಿಸಿ, ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ‘ಪತಿಬೇಕು.ಕಾಮ್’ ಚಿತ್ರದಲ್ಲಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಐಶಾನಿ ಶೆಟ್ಟಿ

ಚಂದನವನದ ಮುದ್ದು ಮೊಗದ ಸುಂದರಿ ಐಶಾನಿ ಶೆಟ್ಟಿ, ‘ಜ್ಯೋತಿರಾಜ್ ಅಲಿಯಾಸ್  ಕೋತಿರಾಜ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ‘ವಾಸ್ತುಪ್ರಕಾರ’, ‘ರಾಕೆಟ್’ ಚಿತ್ರಗಳಲ್ಲಿ ಅಭಿನಯಸಿದ್ದಾರೆ. ಐಶಾನಿ ನಟಿ ಮಾತ್ರವಲ್ಲದೇ, ನಿರ್ದೇಶಕಿಯಾಗಿ ‘ಕಾಜಿ’ ಕಿರುಚಿತ್ರವನ್ನು ನಿರ್ದೇಶಿಸಿದ್ದು,  ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ‘ನಡುವೆ ಅಂತರವಿರಲಿ’ ಎಂಬ ಸಿನಿಮಾದಲ್ಲಿ ನಿರತರಾಗಿದ್ದಾರೆ.ಯಜ್ಞಾ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮುಡಿಸಿಕೊಂಡಿಸಿರುವ ಯಜ್ಞಾ ಶೆಟ್ಟಿ. ‘ಒಂದು ಪ್ರೀತಿಯ ಕಥೆ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ತದನಂತರ , ‘ಎದ್ದೇಳು ಮಂಜುನಾಥ’, ‘ಲವ್ ಗುರು’, ‘ಕರಿ ಚಿರತೆ’, ‘ಉಳಿದವರು ಕಂಡಂತೆ’, ‘ಕಳ್ಳ ಮಳ್ಳ ಸುಳ್ಳ’, ಇನ್ನಿತರ ಸಿನಿಮಾಗಳಲ್ಲಿ ನಟಿಸಿದಲ್ಲದೆ ‘ವಾರಸ್ದಾರ’ ಎಂಬ ಧಾರಾವಾಹಿಯಲ್ಲಿಯೂ ಸಹ ಅಭಿನಯಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

ಪ್ರಮೋದ್ ಶೆಟ್ಟಿ

ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಸ್ನೇಹಿತರಾದ ಪ್ರಮೋದ್ ಶೆಟ್ಟಿ ಅವರು ರಂಗಭೂಮಿ ಕಲಾವಿದ. ನಾಟಕವೇ ತಮ್ಮ ಉಸಿರಾಗಿಸಿಕೊಂಡವರು. ಪ್ರಮೋದ್ ಅವರನ್ನು ಚಿತ್ರರಂಗಕ್ಕೆ ಪರಿಚಯಪಡಿಸಿದವರು ರಿಷಬ್ ಶೆಟ್ಟಿ. ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’, ‘ರಿಕ್ಕಿ’, ‘ಅವನೇ ಶ್ರೀಮನ್ನಾರಾಯಣ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಅಭಿನಯಿಸುವುದರೊಂದಿಗೆ ಕನ್ನಡಭಿಮಾನಿಗಳಿಗೆ ಮನರಂಜನೆಯನ್ನು ನೀಡುತ್ತಾ ಬಂದಿದ್ದಾರೆ.

Tags