ಸುದ್ದಿಗಳು

‘ದರ್ಗಾ’ ದಲ್ಲಿ ಶ್ರೀ ಮುರುಳಿ

ಬೆಂಗಳೂರು, ಸೆ.12:ಭರಾಟೆ’ ಚಿತ್ರದ ಶೂಟಿಂಗ್ ನಡುವೆ ಅಜ್ಮೀರ ದರ್ಗಾಗೆ ಶ್ರೀ ಮುರುಳಿ ಭೇಟಿ ನೀಡಿದ್ದಾರೆ.

ಸದ್ಯ ಶ್ರೀ ಮುರುಳಿ ‘ಭರಾಟೆ’ ಸಿನಿಮಾದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಕೂಡ ಭರದಿಂದ ಸಾಗಿದೆ. ಇದೀಗ ಶ್ರೀ ಮುರುಳಿ ದರ್ಗಾ ಒಂದಕ್ಕೆ ಭೇಟಿ ನೀಡಿ ಸಿನಿಮಾ ಯಶಸ್ವಿಯಾಗಲಿ ಅಂತಾ ಬೇಡಿಕೊಂಡಿದ್ದಾರೆ.ಹೌದು ‘ಭರಾಟೆ’ ಸಿನಿಮಾ ಸದ್ಯ ರಾಜಸ್ತಾನದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡಿರುವ ಮುರುಳಿ ಇದೀಗ ಕುಟುಂಬ ಸಮೇತ ಅಜ್ಮೀರ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ಸೂಪಿ ಸಂತ ಅಜರತ್ ಖ್ವಾಜ ಮೊಯಿನುದ್ದೀನ್ ದರ್ಗಾಕ್ಕೆ ಭೇಟಿ ನೀಡಿ ಚಿತ್ರ ಯಶಸ್ವಿಯಾಗಲೀ ಅಂತಾ ಕೇಳಿಕೊಂಡಿದ್ದಾರೆ.

ಇನ್ನು ‘ಭರಾಟೆ’ ಸಿನಿಮಾಕ್ಕೆ ಚೇತನ್ ನಿರ್ದೇಶನ ಮಾಡಿದ್ದು, ಸದ್ಯ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾ ನಿರ್ಮಾಣದ ಕಾರ್ಯವನ್ನು ಮುರುಳಿ ಸ್ನೇಹಿತರು ವಹಿಸಿಕೊಂಡಿದ್ದಾರೆ.

Tags

Related Articles