ಸುದ್ದಿಗಳು

ಸುದೀಪ್ ನನ್ನು ನಿಂದಿಸಿದವನಿಂದಲೇ ಕ್ಷಮೆಯಾಚನೆ

ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ಹರಡಿದ ವೀಡಿಯೋ

ಸುದೀಪ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಜಗದೀಶ್, ಸೆಲ್ಫೀ ವೀಡಿಯೋ ಮೂಲಕ ಕ್ಷಮೆ ಕೇಳಿದ್ದಾನೆ.

ಬೆಂಗಳೂರು, ಆ.31: ಒಂದು ಕಾಲದಲ್ಲಿ ಕುಚಿಕು ಗೆಳೆಯರಾಗಿದ್ದ ಸುದೀಪ್ ಮತ್ತು ದರ್ಶನ್ ಕೆಲ ದಿನಗಳ ಬಳಿಕ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಪರಸ್ಪರ ಮಾತನಾಡುವುದನ್ನು ಬಿಡುವುದರೊಂದಿಗೆ ಯಾವ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿರಲಿಲ್ಲ. ಇವರ ಮಧ್ಯದ ವೈಮನಸ್ಸು ಅಭಿಮಾನಿಗಳ ಮಧ್ಯೆ ಆಗಾಗ ಫೇಸ್ ಬುಕ್ ನಲ್ಲಿ ವಾಕ್ಸ್ ಸಮರ ನಡೆಯುತ್ತಿರುತ್ತದೆ.


ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದ ಜಗದೀಶ

ಕೆಲದಿನಗಳ ಹಿಂದೆ  ಫೇಸ್ ಬುಕ್ ನಲ್ಲಿ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು  ಚಿತ್ರದುರ್ಗದ ಜಗದೀಶ ಎಂಬ ಯುವಕ ನಟ  ಸುದೀಪ್ ರನ್ನು  ಬಾಯಿಗೆ ಬಂದಂತೆ ಬೈದು ಅವಮಾನ ಮಾಡಿದ್ದಲ್ಲದೆ , ಸುದೀಪ್ ಅಭಿಮಾನಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದನ್ನು, ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದನು. ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ಎಲ್ಲಡೆ ಹರಡಿತ್ತು.

ಕ್ಷಮೆ ಕೇಳಿದ ದರ್ಶನ್ ಅಭಿಮಾನಿ

ಕೆಟ್ಟ ಪದಗಳನ್ನು ಉಪಯೋಗಿಸುವುದರ ಮೂಲಕ ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಜಗದೀಶ ಗುರಿಯಾಗಿದ್ದನು. ಇಡೀ ಕರ್ನಾಟಕದೆಲ್ಲೆಡೆ ಸುದೀಪ್ ಅಭಿಮಾನಿಗಳು ಅವನಿಗಾಗಿ ಶೋಧನೆ ಮಾಡುತ್ತಿದ್ದರು. ತದನಂತರ ಜಗದೀಶ್ ವಿರುದ್ದ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದು  ಆಕ್ರೋಶ ವ್ಯಕ್ತಪಡಿಸಿದರು.ವಿಡಿಯೋವನ್ನು ಅಪ್ ಲೋಡ್ ಮಾಡಿದ ಜಗದೀಶ , ಕೆಲವು ದಿನಗಳ ಕಾಲ ಕಣ್ಮರೆಯಾಗಿದ್ದ, ಎಲ್ಲೆಡೆ ಕಿಚ್ಚನ ಅಭಿಮಾನಿಗಳ ಆಕ್ರೋಶದಿಂದ ಎಚ್ಚೆತ್ತ ಜಗದೀಶ ಸೆಲ್ಫಿ ವಿಡಿಯೋ ಮಾಡುವ  ಮೂಲಕ ಕಿಚ್ಚ ಸುದೀಪ್ ಹಾಗೂ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾನೆ.

Tags

Related Articles