ಸುದ್ದಿಗಳು

10 ಮಿಲಿಯನ್ ವೀವ್ಸ್ ಪಡೆದ ‘ದಿ ವಿಲನ್’ ಟಿಕ್ ಟಿಕ್ ಹಾಡು

ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿರುವ 'ದಿ ವಿಲನ್' ಹಾಡುಗಳು

ಕೈಲಾಶ್ ಕೇರ್, ವಿಜಯ್ ಪ್ರಕಾಶ್ ಹಾಗೂ ಪ್ರೇಮ್ ಧ್ವನಿಯಲ್ಲಿ ಮೂಡಿಬಂದಿರುವ ‘ದಿ ವಿಲನ್’  ಟಿಕ್ ಟಿಕ್ ಹಾಡು ಸದ್ಯ ೧೦ ಮಿಲಿಯನ್ ಮಂದಿ ವೀಕ್ಷಣೆ ಪಡೆದಿದೆ.

ಬೆಂಗಳೂರು, ಆ.29: ಚಂದನವನದ ಬಹು ನಿರೀಕ್ಷಿತ ಚಿತ್ರ ‘ದಿ ವಿಲನ್’ . ‘ದಿ ವಿಲನ್’  ದ  ಸಿನಿಮಾದ ಹಾಡುಗಳನ್ನು ಅದ್ಧೂರಿ ಸೆಟ್‌ನಲ್ಲಿ ಸಿನಿಮಾ ದಿಗ್ಗಜರ ಮುಂದೆ ತೆರೆದಿಟ್ಟಿರೋ ನಿರ್ದೇಶಕ ಪ್ರೇಮ್. ಇನ್ನೇನು ಸಿನಿಮಾ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ಈ ಸಿನಿಮಾ ಹೆಸರು ಇಟ್ಟಾಗಿನಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರೋ ಚಿತ್ರ ಸದ್ಯ ‘ಟಿಕ್ ಟಿಕ್’ ಹಾಡಿಗೆ ಮತ್ತೆ ಸುದ್ದಿಯಾಗಿದೆ.

10 ಮಿಲಿಯನ್ ವೀವ್ಸ್ ಪಡೆದ ಹಾಡು

ಹೌದು, ಸದ್ಯ ‘ದಿ ವಿಲನ್’ ಹಾಡುಗಳು ಬಿಡುಗಡೆಯಾದ ದಿನದಿಂದಲೂ ಬಾರೀ ಸದ್ದನ್ನು ಮಾಡುತ್ತಾ ಬಂದಿವೆ. ಈ ಹಾಡನ್ನು ನಿರ್ದೇಶಕ ಪ್ರೇಮ್ ಬರೆದಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೈಲಾಶ್ ಕೇರ್, ವಿಜಯ್ ಪ್ರಕಾಶ್ ಹಾಗೂ ಪ್ರೇಮ್ ಧ್ವನಿಯಲ್ಲಿ ಮೂಡಿಬಂದಿರುವ ‘ದಿ ವಿಲನ ಟಿಕ್ ಟಿಕ್ ಹಾಡು ಸದ್ಯ ೧೦ ಮಿಲಿಯನ್ ಮಂದಿ ವೀಕ್ಷಣೆ ಪಡೆದಿದೆ. ಯುಟ್ಯೂಬ್ ನಲ್ಲೂ ಕೂಡ ಈ ಸಿನಿಮಾ ಹಾಡುಗಳು ಟ್ರೆಂಡಿಂಗ್‌ ನಲ್ಲಿವೆ.ಸದ್ಯ ಈ ಸಿನಿಮಾದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಈ ಸಿನಿಮಾ ಸೆನ್ಸಾರ್ ಮಂಡಳಿಯಿಂದ ಒಪ್ಪಿಗೆಯನ್ನೂ ಕೂಡ ಪಡೆದಿದೆ.. ಇನ್ನೇನು ಥಿಯೇಟರ್‌ ನತ್ತ ಪ್ರೇಕ್ಷಕರು ದೃಷ್ಟಿ ವಾಲಿಸೋದು ಒಂದೇ ಬಾಕಿ.

Tags