ಬಾಲ್ಕನಿಯಿಂದಸಂಬಂಧಗಳುಸುದ್ದಿಗಳು

ಅಮೆರಿಕಾದ ಪ್ರಜಾಪ್ರಭುತ್ವ ವ್ಯವಸ್ಥೆ ಅನುಕರಣೀಯ:ಉಪ್ಪಿ

'ಅಕ್ಕ' ಸಮ್ಮೇಳನದಲ್ಲಿ ಭಾಗಿಯಾಗಿದ್ದ ಉಪೇಂದ್ರ

ಟೆಕ್ಸಾಸ್ – ಡಲ್ಲಾಸ್, ಸೆ.05:  ಅಮೇರಿಕಾ ಆಡಳಿತ ವ್ಯವಸ್ಥೆ ತೋರಿಸಿ ಹೆಮ್ಮೆ ಪಟ್ಟ ಉಪ್ಪಿ ಸದ್ಯ ” ಅಕ್ಕ” ಸಮ್ಮೇಳಕ್ಕಾಗಿ ಅಮೇರಿಕಾದಲ್ಲಿದ್ದಾರೆ. ತಮ್ಮ ಬಾಲ್ಯದ ಸ್ನೇಹಿತರ ಮನೆಯಲ್ಲಿರುವ ಉಪೇಂದ್ರ ಅಮೇರಿಕಾ ಆಡಳಿತ ವ್ಯವಸ್ಥೆ ಬಗ್ಗೆ ರಿಯಾಲಿಟಿಯನ್ನ ತೋರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಅಕ್ಕ” ಸಮ್ಮೇಳನದಲ್ಲಿ ಭಾಗಿಯಾಗಿದ್ದ ಉಪೇಂದ್ರ ನಂತರ ತಮ್ಮ ಸ್ನೇಹಿತ ಪ್ರಮೋದ್ ಅವರ ಮನೆಯಲ್ಲಿ ಉಳಿದಿದ್ದರು. ಈ ವೇಳೆ ಅಲ್ಲಿನ ಆಡಳಿತ ಬಗ್ಗೆ ಸ್ನೇಹಿತನ ಜೊತೆ ಸೇರಿ ಒಂದು ವಿಡಿಯೋ ಮಾಡಿದ್ದಾರೆ.
ಪ್ರತಿನಿಧಿಗಳಿಗೆ ಸಲಹೆ ನೀಡಬಹುದು
ಟೆಕ್ಸಾಸ್ ಡಲ್ಲಾಸ್  ಪ್ರದೇಶದಲ್ಲಿ ಪ್ರಮೋದ್ ಮನೆ ಇದೆ. ಸಾಮಾನ್ಯವಾಗಿ ಅಮೇರಿಕಾದಲ್ಲೂ ನಮ್ಮಲ್ಲಿ ಶಾಸಕರು ಇದ್ದಹಾಗೇ ಅಲ್ಲಿಯೂ ಒಂದೊಂದು ಪ್ರದೇಶಕ್ಕೆ ಒಬ್ಬೊಬ್ಬರು ಪ್ರತಿನಿಧಿ ಇರುತ್ತಾರೆ. ಅಲ್ಲಿನ ಆಡಳಿತ ವ್ಯವಸ್ಥೆ ಹೇಗಿರುತ್ತೆ ಅಂದ್ರೆ ಪ್ರತಿ ೬ ತಿಂಗಳಿಗೊಮ್ಮೆ ಪ್ರೋಗ್ರಸ್ ಲೆಟರ್ ಒಂದನ್ನ ಕಳಿಸುತ್ತಾರೆ. ಆ ಪತ್ರದಲ್ಲಿ ೬ ತಿಂಗಳಿಂದ ನಡೆದ ಎಲ್ಲಾ ಅಭಿವೃದ್ದಿ ಹಾಗೂ ಕ್ಯಾಪಿಟೋಲ್ ನಲ್ಲಿ ಆಯಾ ಪ್ರದೇಶಗಳ ಬಗ್ಗೆ ನಡೆದ ಚರ್ಚೆಯ ಬಗ್ಗೆ ಬರೆದಿರುತ್ತಾರಂತೆ.
ಅಲ್ಲದೆ ಈ ಕೆಲವೊಂದು ನಿರ್ಧಾರಗಳ ಬಗ್ಗೆ ಆಕ್ಷೇಪ ಇದ್ದಲ್ಲಿ ಅಲ್ಲಿನ ಪ್ರತಿನಿಧಿಗಳನ್ನ ಭೇಟಿ ಮಾಡಬಹುದು. ಕೆಲವೊಂದು ಸಲಹೆ ನೀಡಬಹುದಾಗಿದೆ. ಇದೆಲ್ಲವನ್ನ ಉಪೇಂದ್ರ ವಿಡಿಯೋ ಮಾಡಿದ್ದಾರೆ. ಇನ್ನು ಉಪ್ಪಿ ಅಲ್ಲಿ‌ನ ರಸ್ತೆಗಳು ಅವರು ಮಾಡಿರುವ ಅಭಿವೃದ್ದಿಯನ್ನು ತೋರಿಸಿದ್ದಾರೆ. ಉಳಿದ ಅನೇಕ ವಿಚಾರಗಳೂ ಚರ್ಚೆಯನ್ನ ಭಾರತಕ್ಕೆ ಬಂದು ತಿಳಿಸೋದಾಗಿಯೂ ಉಪ್ಪಿ ತಿಳಿಸಿದ್ದಾರೆ.

ART of governance……

Posted by Upendra on Tuesday, September 4, 2018

Tags