ಸುದ್ದಿಗಳು

ಅಮೇರಿಕಾದಲ್ಲಿ “ನಾಗರಹಾವು”

ವಿದೇಶದಲ್ಲೂ ಸದ್ದು ಮಾಡಲು ಹೊರಟ 'ನಾಗರಹಾವು'

ಅಮೇರಿಕಾದಲ್ಲಿ ನಾಗರಹಾವು ಸಿನಿಮಾ ತೆರೆಕಾಣುತ್ತಿದ್ದು, ಮುಂದಿನ ವಾರದವರೆಗೆ ಮುಂದುವರೆಯಲಿದೆ.

ಬೆಂಗಳೂರು, ಸೆ.11: ಪುಟ್ಟಣ್ಣ ಕಣಗಾಲ್ ಸಿನಿಮಾಗಳಂದ್ರೆನೇ ಹಾಗೆ ಸಿನಿಮಾ ಕೇವಲ ಮನರಂಜನೆಯ ಭಾಗವಾಗದೇ ಈ ಪ್ರಬಲವಾದ ಮಾಧ್ಯಮದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತವು. ಸ್ಯಾಂಡಲ್‌ವುಡ್‌ನ ದಿಗ್ಗಜ ನಟರಿಗೆ ನಿರ್ದೇಶನ ಮಾಡಿದ ಕಣಗಾಲ್‌ ರ ಬತ್ತಳಿಕೆಯಲ್ಲಿನ ಸುಪ್ರಸಿದ್ದವಾದ ಅಸ್ತ್ರ ಅಂದರೆ ಅದು ‘ನಾಗರಹಾವು’. ಸದ್ಯ ‘ನಾಗರಹಾವು’ ಸಿನಿಮಾ ರಿ ರಿಲೀಸ್ ಆಗಿರುವುದು ಎಲ್ಲರಿಗೂ ಗೊತ್ತಿರುವ  ವಿಚಾರವೇ. ಆದರೆ ಇದು ಕೇವಲ ಕರ್ನಾಟಕದಲ್ಲಿ ಅಲ್ಲ. ವಿದೇಶಗಳಲ್ಲೂ ಸದ್ದು ಮಾಡುತ್ತಿದೆ.ವಿಷ್ಣುವರ್ಧನ್ ಮತ್ತು ಅಂಬರೀಶ್ ಅಭಿನಯದ ಸಿನಿಮಾ

ನಾಗರಹಾವು.. ೧೯೭೩ರಲ್ಲಿ ಬಿಡುಗಡೆಯಾಗಿ ಬಿಗ್ ಹಿಟ್ ಕಂಡ ಸಿನಿಮಾ.. ಕನ್ನಡ ಚಿತ್ರರಂಗದ ಲೆಜೆಂಡರಿ ಡೈರೆಕ್ಟರ್ ಪುಟ್ಟಣ್ಣ ಕಣಗಾಲ್ ಸಾರಥ್ಯದಲ್ಲಿ ಮೂಡಿಬಂದ  ಕನ್ನಡ ಸಿನಿಮಾ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದು ಬಿಟ್ಟಿದೆ.. ಇನ್ನು ಈ ಸಿನಿಮಾದ ಮೂಲಕ ನಾಯಕನಾಗಿ ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯಿಸಿದ್ದು, ಖಳನಾಯಕನಾಗಿ ರೆಬೆಲ್‌ಸ್ಟಾರ್ ಅಂಬರೀಷ್ ಬುಲ್ ಬುಲ್ ಅಂತಾ ಹುಡುಗಿಯನ್ನು ಚುಡಾಯಿಸಿಕೊಂಡು ಜಲೀಲನಾಗಿ ಬಂದರು. ಈ ಇಡೀ ಸಿನಿಮಾವನ್ನು ಹೊಸ ತಂತ್ರಜ್ಞಾನ ಬಳಸಿ ಮತ್ತೆ ತೆರೆಗೆ ತರಲಾಗಿತ್ತು. ಇದೀಗ ರಾಜ್ಯದಲ್ಲಿ ಎಲ್ಲೆಡೆ ಈ ಸಿನಿಮಾ ಮತ್ತೆ ತೆರೆ ಕಂಡರೂ ಅಷ್ಟೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅಮೇರಿಕಾದಲ್ಲೂ ಸದ್ದು ಮಾಡುತ್ತಿದೆ. ಮುಂದಿನವಾರದವರೆಗೆ ಅಮೇರಿಕಾದಲ್ಲಿ ನಾಗರಹಾವು

ಹೌದು, ಒತ್ತಾಯದ ಮೇರೆಗೆ ಇದೀಗ ಅಮೇರಿಕಾದಲ್ಲೂ ಈ ಸಿನಿಮಾ ತೆರೆ ಕಂಡಿದೆ. ರಾಜ್ಯದೆಲ್ಲೆಡೆ ಉತ್ತರ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ಇದೀಗ ಅಮೇರಿಕಾ ದಲ್ಲಿ ಮುಂದಿನ ವಾರದವರೆಗೆ ಈ ಸಿನಿಮಾ ಮುಂದುವರೆಯಲಿದೆ. ಇನ್ನು ಸಿನಿಮಾ ನೋಡಿದ ವಿದೇಶಿ ಕನ್ನಡಿಗರು ಸಿನಿಮಾವನ್ನು ನಟರನ್ನು ಹಾಡಿ ಹೊಗಳಿದ್ದಾರಂತೆ. ಇನ್ನು ಅಮೇರಿಕಾ ಅಷ್ಟೆ ಅಲ್ಲ ಯುಕೆ, ಯುಎಇ, ಯುರೋಫ್‌ನಲ್ಲೂ ಈ ಸಿನಿಮಾ ತೆರೆ ಕಾಣಲಿದೆಯಂತೆ.

ಕಾಲೇಜ್ ನಲ್ಲಿ ಹುಟ್ಟುವ ಈ ಲವ್‌ಸ್ಟೋರಿ ಹೇಗೆಲ್ಲಾ ಮಾಸ್ ಅವತಾರ ಪಡೆಯುತ್ತೆ.. ಅಲ್ಲದೇ ಚಾಮಯ್ಯ ಮೇಷ್ಟ್ರಿಗೆ ರಾಮಾಚಾರಿ ವಾದ ಮಾಡುವುದನ್ನು ನಾವು ನೀವೆಲ್ಲರೂ ನೋಡಿದ್ದೇವೆ.. ‘ಹಾವಿನ ದ್ವೇಷ ಹನ್ನೇರಡು ವರುಷ ನನ್ನ ರೋಷ ನೂರು ವರುಷ ಅಂತಾ’ ಚಿತ್ರದ ನಾಯಕ ಅಭಿನಯ ಭಾರ್ಗವ ವಿಷ್ಣು ಅವರ ನಟನೆಗೆ ಫಿದಾ ಆಗಿದ್ದಾರೆ. ಇದೀಗ ಕನ್ನಡ ಸಿನಿಮಾ ವಿದೇಶೀ ಕನ್ನಡಿಗರಲ್ಲೂ ಅಚ್ಚರಿಯದೇ ಉಳಿದಿರೋದು ಖುಷಿಯ ಸಂಗತಿ.

Tags