ಸುದ್ದಿಗಳು

“ನಾಥೂರಾಮ್” ಗಾಗಿ ಹುಡುಗಿಯ ಹುಡುಕಾಟ

ಬೆಂಗಳೂರು, ಸೆ.12: ರಿಷಬ್ ಅವರ ‘ನಾಥೂರಾಮ್’ ಸಿನಿಮಾಕ್ಕೆ ಸದ್ಯ ನಟಿಯ ಹುಡುಕಾಟ ನಡೆದಿದೆ. ಹೊಸ ಮುಖ ಪರಿಚಯ ಮಾಡುವುದರಲ್ಲಿ  ಸಿನಿಮಾ ತಂಡ ನಿರತಾರಾಗಿದ್ದಾರೆ.

ಸದ್ಯ ರಿಷಬ್  ‘ಸ.ಹಿ.ಪ್ರಾ.ಶಾಲೆ ಕಾಸರಗೋಡು’ ಸಿನಿಮಾ ಯಶಸ್ವಿಯ ಹಾದಿಯಲ್ಲಿದ್ದಾರೆ. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದ ರಿಷಬ್‌ಗೆ ಇದೀಗ ಸಕ್ಸಸ್ ಮೇಲೆ ಸಕ್ಸಸ್ ಬರುತ್ತಿದೆ.  ನಿರ್ದೇಶಕರಾಗಿ ಮಿಂಚಿದ್ದ ರಿಷಬ್ ನಟರಾಗಿ ಕಾಣಿಸಲು ರೆಡಿಯಾಗಿದ್ದಾರೆ. ‘ನಾಥೂರಾಮ್’ ಆಗಿ ರಿಷಬ್ ತೆರೆ ಮೇಲೆ ಅಬ್ಬರಿಸಲು ರೆಡಿಯಾಗುತ್ತಿದ್ದಾರೆ. ಇನ್ನು ಈ ‘ನಾಥೂರಾಮ್‌’ ಗೆ ಜೋಡಿ ಯಾರು ಅನ್ನೋದು ಸದ್ಯದ ಕುತೂಹಲ.ಹೊಸ ಮುಖ ಪರಿಚಯಿಸುವಲ್ಲಿ ಚಿತ್ರತಂಡ ಯೋಜನೆ..?

ಮೂಲಗಳ ಪ್ರಕಾರ ಹೊಸ ಮುಖವನ್ನು ಸಿನಿಮಾ ರಂಗಕ್ಕೆ ತರಬೇಕು ಎನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ಸಿನಿಮಾ ತಂಡ ಎಲ್ಲಿಯೂ ಮಾತನಾಡಿಲ್ಲ. ಇನ್ನೊಂದು ಮೂಲಗಳ ಪ್ರಕಾರ, ‘ಬೆಲ್ ಬಾಟಂ’, ‘ಕಥಾಸಂಗಮ’ ಚಿತ್ರಗಳಲ್ಲಿ ಜೋಡಿಯಾಗಿದ್ದ ಹರಿಪ್ರಿಯಾನೇ ಈ ಸಿನಿಮಾಕ್ಕೂ ರಿಷಬ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರ ತಂಡ ಯಾವುದೇ ವಿಚಾರ ಬಿಟ್ಟುಕೊಟ್ಟಿಲ್ಲ.

ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭ

ಇನ್ನು ‘ನಾಥೂರಾಮ್’ ಸಿನಿಮಾವನ್ನು ಕಿರುತೆರೆ ಖ್ಯಾತ ನಿರ್ದೇಶಕ ವಿನು ಬಳಂಜ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಚಿತ್ರವನ್ನು ವಿಭಿನ್ನ ಕಥೆಯನ್ನಿಟ್ಟುಕೊಂಡು ತೆರೆಗೆ ತರಲಾಗುತ್ತಿದೆ. ಶ್ರೀದೇವಿ ಪ್ರೊಡಕ್ಷನ್‌ ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭ ಮಾಡುತ್ತಿದೆ.

Tags

Related Articles