ಸುದ್ದಿಗಳು

ಯಾರು ಈ 8th ವಂಡರ್ ಸ್ಟಾರ್?

ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿನಿಮಾ

ಬೆಂಗಳೂರು, ಆ.31: ಕೆ.ಕೆ.ಬ್ರದರ್ಸ್ ಬ್ಯಾನರ್ ಅಡಿಯಲ್ಲಿ ಸಂತೋಷ್ ಕುಮಾರ್ ಬೆಟಗೇರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ  ‘ಒಂಬತ್ತನೇ ಅದ್ಭುತ’ ಎನ್ನುವ ಚಿತ್ರವು ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಬಾರಿ ಸದ್ದನ್ನೇ ಮಾಡುತ್ತಿದೆ.  ಇದಕ್ಕೆ ಕಾರಣವಾಗಿರುವುದು  ಆ  ಸಿನಿಮಾದ ಚಿತ್ರ  ವಿಚಿತ್ರ  ಪೋಸ್ಟರ್ ಗಳು.  ಒಂದೊಂದು ಪೋಸ್ಟರ್ ಕೂಡ ಕುತೂಹಲ ಕೆರಳಿಸುವುದರ ಮೂಲಕ  ಒಂದೊಂದು ಕಥೆಯನ್ನೇ ಹೇಳುತ್ತಿವೆ.  ಒಂದು ಪೋಸ್ಟರ್ ನಲ್ಲಿ ಕೂಲಿಂಗ್ ಗ್ಲಾಸ್ ಗೆ ಹೂವಿನ ಹಾರ ಹಾಕಿ ಅದಕ್ಕೆ ಪೂಜೆಯನ್ನು ಮಾಡುತ್ತಾ ಅಭಿನಂದನೆಯನ್ನು ಸಲ್ಲಿಸುತ್ತಿರುವುದು. ಇನ್ನೊಂದು ಪೋಸ್ಟರ್ ನಲ್ಲಿ ‘ತಿಥಿ’ ಸಿನಿಮಾ ಖ್ಯಾತಿಯ  ಸೆಂಚುರಿಗೌಡ ಟಿಪ್ ಟಾಪ್ ಆಗಿ ಡ್ರೆಸ್ ಮಾಡ್ಕೊಂಡು ಕೈಯಲ್ಲಿ ಆಸ್ಕರ್ ಪ್ರಶಸ್ತಿಯನ್ನು ಹಿಡಿದುಕೊಂಡು ಸಂತೋಷ  ವ್ಯಕ್ತಪಡಿಸುತ್ತಿರುವುದು,  ಪ್ರತಿವರ್ಷ   ಆಸ್ಕರ್  ಗೆಲ್ಲುತ್ತಿರುವ  ಏಕೈಕ ವ್ಯಕ್ತಿ ಇವರೇ ಅನ್ನುವ   ಒಕ್ಕಣಿಕೆ ಬೇರೆ.

ಪೋಸ್ಟರ್ ನಲ್ಲೇ ಜಾದೂ ಮಾಡುತ್ತಿರುವ ಚಿತ್ರ 

ಚಿತ್ರ ತಂಡ ಬಿಡುಗಡೆ ಮಾಡಿರುವ ಇನ್ನೊಂದು ಪೋಸ್ಟರ್ ಮಾತ್ರ  ವಿಚಿತ್ರವಾಗಿದ್ದು ಹಲವಾರು ವಿಷಯಗಳನ್ನು ಬಿಂಬಿಸುವಂತಿದೆ . ಸತ್ತು ಮಲಗಿರುವ ಸೆಂಚುರಿಗೌಡನ ಹೆಣದ ಮುಂದೆ ಕುಳಿತಿರುವ ರಕ್ತ ಸಂಬಂಧಿಗಳು ದುಖಃದಿಂದ  ಅಳುವುದು ಸಾಮಾನ್ಯವಾಗಿ ಕಂಡು ಬರುವ ದೃಶ್ಯ.   ಆದರೆ ಈ ಪೋಸ್ಟರ್ ನಲ್ಲಿ ಕುಳಿತಿರುವವರೆಲ್ಲರೂ ಸಂತೋಷದಿಂದ ನಗುತ್ತಾ, ಫೋನ್ ನಲ್ಲಿ ಮಾತನಾಡುತ್ತಾ, ಹರಟುತ್ತಾ ಕುಳಿತಿರುವುದು ಬದಲಾಗುತ್ತಿರುವ ಜನರ ಮನೋಭಾವನೆ, ಕುಸಿಯುತ್ತಿರುವ ಸಂಬಂಧಗಳ ಮೌಲ್ಯ, ಭಾವನೆಗಳ ಕೊರತೆ ಯನ್ನು ಎತ್ತಿ ತೋರಿಸುವಂತಿದೆ. 

ಈ ರೀತಿಯ ಹೊಸ ಹೊಸ ಆಲೋಚನೆಗಳಿಂದ ಕೂಡಿದ ಪೋಸ್ಟರ್ ಗಳ ಮೂಲಕ ನಿರ್ದೇಶಕ ಜನರಲ್ಲಿ ಕುತೂಹಲವನ್ನು ಹುಟ್ಟು ಹಾಕಿ ತಮ್ಮ ಚಿತ್ರದಲ್ಲಿ ವಿಶೇಷವಾದುದನ್ನು ಏನೋ ಹೇಳಲು ಹೊರಟಿದ್ದೇವೆ ಅನ್ನೋದನ್ನು ನಿರೂಪಿಸಿದ್ದಾರೆ.

ಚಿತ್ರತಂಡ 

ಈ ಸಿನಿಮಾಕ್ಕೆ ಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡ್ತಿರೋದು ಸಂತೋಷ್ ಬೆಟಗೇರಿ ಎಂಬ ಯುವ ಪ್ರತಿಭೆ. ಛಾಯಾಗ್ರಹಣ ರಾಘವೇಂದ್ರ ಬಿ.ಕೋಲಾರ್, ಸಂಗೀತ ಸುನೀಲ್ , ಸಂಕಲನ ವೆಂಕಿ UDV ಅವರದ್ದು, ನಿರ್ದೇಶಕರೇ ಮೂಲ ಬಂಡವಾಳ ಹಾಕುವುದರ ಜೊತೆಗೆ ಗೋಪಾಲ ಕೃಷ್ಣಗೌಡ, ನಾಗರಾಜ್ . ಆರ್ ಮಾಲೂರು, ಮಂಜಣ್ಣ ಬೆಟ್ಟಹಳ್ಳಿ, ಸಹ ನಿರ್ಮಾಪಕರಾಗಿ ಸೇರಿಕೊಂಡಿದ್ದಾರೆ.8th  ವಂಡರ್ ಸ್ಟಾರ್  ಯಾರು? 

8th  ವಂಡರ್  ಸ್ಟಾರ್ ಯಾರು? ಇದು ಈ ಚಿತ್ರದ ಪೋಸ್ಟರ್ ನಲ್ಲಿರುವ ಇನ್ನೊಂದು ಕುತೂಹಲ ಮೂಡಿಸುತ್ತಿರುವ ಒಕ್ಕಣಿಕೆ.  ತನ್ನ ಶೀರ್ಷಿಕೆ ಮೇಲ್ಭಾಗದಲ್ಲಿ ಈ ವಾಕ್ಯ ಬರುತ್ತದೆ. ಎಲ್ಲರಿಗೂ ಈಗ ಕಾಡುತ್ತಿರುವ ಪ್ರಶ್ನೆ ಯಾರು ಈ 8 ವಂಡರ್ ಸ್ಟಾರ್? . ಉತ್ತರ ನಿರ್ದೇಶಕನ ಹೊರತು ಬೇರೆ ಯಾರಿಗೂ ಗೊತ್ತಿಲ್ಲ. ಯಾಕಂದ್ರೆ ಅದರ ಕತೃ ಅವರೇ ಆಗಿರುವುದರಿಂದ  ಉತ್ತರವೂ ಅವರ ಬಳಿಯೇ ಇರುತ್ತದೆ. ನಿಮಗೆ ಉತ್ತರ ಬೇಕಾದಲ್ಲಿ ಮುಂದಿನ ಪೋಸ್ಟರ್  ಬರುವ ತನಕ, ಇಲ್ಲವಾದಲ್ಲಿ ಖಂಡಿತಾ ಈ ಸಿನಿಮಾ ತೆರೆಗೆ ಬಂದಾಗ ಮಿಸ್ ಮಾಡಿಕೊಳ್ಳದೇ ನೋಡಿ.ಇದೇ ಪ್ರಶ್ನೆಯನ್ನು ನಮ್ಮ ಬಾಲ್ಕನಿ ತಂಡ ಕೂಡ ನಿರ್ದೇಶಕರಲ್ಲಿ ಕೇಳಿದಾಗ  ನಮ್ಮ ಮುಂದಿನ ಪೋಸ್ಟರ್  ಬರುವವರೆಗೆ ಕಾಯಿರಿ ಎಂಬ ಉತ್ತರವನ್ನು ನೀಡಿದ್ದಾರೆ. ಹಾಗಾಗಿ ಇನ್ನು ಯಾವ ಯಾವ ರೀತಿಯ ಪೋಸ್ಟರ್ ಗಳನ್ನು ಚಿತ್ರತಂಡ ಹೊರತರುತ್ತೆ, ಏನ್ ಜಾದೂ ಮಾಡುತ್ತೆ ಅನ್ನೋದನ್ನು ಕಾದು ನೋಡೋಣ.

Tags

Related Articles