ಸುದ್ದಿಗಳು

ಹಾಡು ಹಳೆಯದಾದರೇನು……ಭಾವ ನವನೀಯ…………

ಹಳೇಯ ಹಾಡು ಹೊಸ ವರ್ಷನ್ ನಲ್ಲಿ

ಸ್ಯಾಂಡಲ್ ವುಡ್ ನಲ್ಲೂ ಶುರುವಾದ ಹಳೇ ಹಾಡುಗಳ ಹೊಸ ರೂಪ

ಬೆಂಗಳೂರು, ಸೆ.09; ಡಿಜೆಗಳ ಪ್ರವೇಶ ಮತ್ತು ಹಳೆ ಹಾಡುಗಳಿಗೆ ರಿಮಿಕ್ಸ್​ನ ಹೊಸ ಬಣ್ಣ. ಇದು ಸಿನಿರಂಗದಲ್ಲಿ ಇತ್ತೀಚೆಗೆ ಶುರುವಾದ ಟ್ರೆಂಡ್. ಯಾವ ಕಾಲಕ್ಕೂ ಸಲ್ಲುವ ಅದೆಷ್ಟೋ ಹಳೆ ಹಾಡುಗಳು ರಿಮಿಕ್ಸ್​ ನೊಂದಿಗೆ ಹೊಸ ರೂಪ ಪಡೆಯುತ್ತಿವೆ. ಹಾಡು ಹಳೇದಾದರೂ ಈಗಿನ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳುವ ಜೊತೆಗೆ ಹೊಸ ಟ್ರೆಂಡ್ ಸೆಟ್ ಮಾಡುತ್ತಿದ್ದಾರೆ.

ಹನಿಯಾಗಿ ಬೀಳೋ ಮಳೆಗೆ ಕಣ್ಮುಚ್ಚಿ ಮುಖ ಕೊಟ್ಟಾಗ ಈ ಹಾಡನ್ನೇ ಗುನುಗೋಣ ಅನ್ನಿಸುತ್ತೆ.ಇನ್ನೂ ಸಮಯಕ್ಕೆ ತಕ್ಕಂತೆ ಭಾವನೆಗಳಿಗೆ ಹಾಡುಗಳು ಇಷ್ಟವಾಗುತ್ತವೆ . ಓಲ್ಡ್ ಈಸ್ ಗೋಲ್ಡ್ ಎನ್ನುವುದು ನಿಜ..ಆದರೆ ಈಗಿನ ಮ್ಯೂಸಿಕಲ್  ಇನ್ಸ್ಟುಮೆಂಟ್ ಗೂ ಆಗಿನದಕ್ಕೋ ಅಜಗಜಾಂತರ ವ್ಯತ್ಯಾಸ…

ಒಳಗೆ ಸೇರಿದರೇ ಗುಂಡು

ಈ ತರಹದ ಮ್ಯೂಸಿಕಲ್ ಪ್ರಯೋಗ ನೆನಪಿಸಿಕೊಂಡಾಗ ನೆನಪಾಗುವುದು  ಕನ್ನಡದಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದ ‘ಒಳಗೆ ಸೇರಿದರೇ ಗುಂಡು’ ಎಂಬ ‘ನಂಜುಂಡಿ ಕಲ್ಯಾಣ’ ಸಿನಿಮಾದ ಹಾಡು. ‘ನಂಜುಂಡಿ ಕಲ್ಯಾಣ’, 1987 ರಲ್ಲಿ ಬಿಡುಗಡೆಯಾದ ಮಾಲಾಶ್ರೀ ಮತ್ತು ರಾಘವೇಂದ್ರ ರಾಜ್ ಕುಮಾರ್ ನಟಿಸಿದ್ದ ಸೂಪರ್ ಹಿಟ್ ಚಿತ್ರ. ಅದೇ ಹಾಡು,ಅದೇ ರಾಗ, ಆದ್ರೆ ತಾಳ ಮಾತ್ರ ಬೇರೆ. ಹೀಗೆ ಅಂದು ಸೂಪರ್ ಹಿಟ್ ಆದ ಅದೇ ಹಾಡಿಗೆ ಮತ್ತದೇ ಧ್ವನಿ ಕೊಟ್ಟು ಸ್ವಲ್ಪ ರಿಮಿಕ್ಸ್  ಮಾಡಿ ‘ಘರ್ಷಣೆ’ ಸಿನಿಮಾದಲ್ಲಿ ಈ ಹಾಡನ್ನು​ ಬಳಸಿದ್ದರು.ಪ್ರೇಮಬರಹ

ಒಂದು ಕಾಲದಲ್ಲಿ ಹಿಟ್ ಆಗಿದ್ದ ‘ಪ್ರತಾಪ್’ ಚಿತ್ರ ನೆನೆದಾಕ್ಷಣ ನೆನಪಾಗೋದುಪ್ರೇಮಬರಹಎನ್ನುವ ಸೂಪರ್ ಹಿಟ್ ಹಾಡು. ಎಸ್, ಅರ್ಜುನ್ ಸರ್ಜಾ ಹಾಗೂ ಸುಧಾರಾಣಿ ನಟಿಸಿದ ಈ ಸಾಂಗ್ ಸಿನಿಮಾ ರಿಲೀಸ್ ಆದ ಟೈಮ್ ನಿಂದ ಹಿಡಿದು ಇಲ್ಲಿಯವರೆಗೂ ಎಲ್ಲರ ಬಾಯಲ್ಲಿ ಗುನುಗೋ  ಈ ಹಾಡು ಎಷ್ಟರ ಮಟ್ಟಿಗೆ ಫೇಮಸ್ ಆಯ್ತು ಅಂದರೆ, ತಂದೆಯ ಸಿನಿಮಾದ ಹಾಡಿನ ಹೆಸರಿನ ಶೀರ್ಷಿಕೆಯ ಮೂಲಕ ಮಗಳು ಐಶ್ವರ್ಯ ರನ್ನು  ಲಾಂಚ್ ಆಗುವ ಮಟ್ಟಿಗೆ. ಹೌದು ಇತ್ತಿಚೆಗಷ್ಟೇ ಸದ್ದು ಮಾಡಿದ್ದ “ಪ್ರೇಮಬರಹ”ಸಿನಿಮಾ ನಿಮಗೆ ಗೊತ್ತಿರಬಹುದು. ಚಿತ್ರದ ಹೆಸರು ಮಾತ್ರವಲ್ಲದೇ “ಪ್ರೇಮಬರಹ”…ಎನ್ನುವ ಶೀರ್ಷಿಕೆಯಲ್ಲಿ  ಟೈಟಲ್ ಹಾಡನ್ನು ರಿಮಿಕ್ಸ್ ವರ್ಷನ್ ಬಳಸಿ ಚಿತ್ರ ಎಲ್ಲೆಡೆ ಸದ್ದು ಮಾಡಿತ್ತು. ಹಾಗೇನೇ … ಹಳೇಯ ಹಾಡಿನ ನೆನಪಿನ ಬುತ್ತಿಯನ್ನು ತೆರೆದಿಟ್ಟಿತು.ಯಾರೇ ನೀನು ರೋಜಾ ಹೂವೇ

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಸಾಕಷ್ಟು ಸಿನಿಮಾದ ಹಾಡುಗಳು ಸಾಮಾನ್ಯವಾಗಿ ಎಲ್ಲರಿಗೂ ಹಾರ್ಟ್ ಫೇವರೀಟ್. ಅದರಲ್ಲೂ ಕೆಲವು ಹಾಡುಗಳಂತೂ ಕೇಳಿದ್ರೆ ಕೇಳ್ತಾನೇ ಇರಬೇಕು ಅನ್ನಿಸುವಷ್ಟು ಇಷ್ಟ ಆಗುತ್ತವೆ.ಅಂಥಹ ಹಾಡುಗಳಲ್ಲಿ “ನಾನು ನನ್  ಹೆಂಡ್ತಿ” ಸಿನಿಮಾದ ಯಾರೇ ನೀನು ರೋಜಾ ಹೂವೇ..ಹಾಡು ಕೂಡ ಒಂದು. ಯಾರೂ ಮರೆಯಲಾಗದ ಅಂಥಹ ಹಾಡನ್ನು ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಅವರ ‘ಸಾಹೇಬ’ ಸಿನಿಮಾದಲ್ಲೂ ಕೂಡ ಬಳಸಲಾಗಿತ್ತು. ಆದರೆ ‘ಸಾಹೇಬ’ ಚಿತ್ರದಲ್ಲಿ ಸ್ಪಲ್ಪ ರಿಮಿಕ್ಸ್ ಗೆ ಬಣ್ಣ ಹಚ್ಚಿ, ಎಫೆಕ್ಟ್ ಮತ್ತೆ ಸೌಂಡ್ ಮೂಲಕ ಬಹಳಷ್ಟು ಈ ಹಾಡು ಎಲ್ಲರ ಗಮನವನ್ನು ಸೆಳೆದಿತ್ತು. ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕು

ಸಿನಿಮಾಗಳಲ್ಲಿ ಪ್ರೀತಿ,ಪ್ರೇಮ ಪ್ರಣಯ,ಸ್ನೇಹ ಗಳ ಸಂದೇಶದ ಜೊತೆಗೆ ದೇಶಪ್ರೇಮವನ್ನು ಬೆಳೆಸುವ ಮತ್ತು ಉಳಿಸುವ ಕೆಲಸಗಳು ಸಹಾ ಆಗುತ್ತಾ ಇವೆ…ಕನ್ನಡ ನಾಡು ನುಡಿ ಅಂತ ಬಂದಾಗ ಮೊದಲಿಗೆ ನೆನಪಿಗೆ ಬರೋದು ವರನಟ ಡಾ.ರಾಜ್ಕುಮಾರ್ ಅಭಿನಯದ “ಆಕಸ್ಮಿಕ” ಚಿತ್ರದ ‘ಹುಟ್ಟಿದರೇ ಕನ್ನಡನಾಡಲ್ಲಿ ಹುಟ್ಟಬೇಕುಎಂಬ ಸೂಪರ್ ಹಿಟ್ ಶೀರ್ಷಿಕೆ ಗೀತೆ. ಕನ್ನಡ ರಾಜ್ಯೋತ್ಸವ ಹಾಗೂ ಯಾವುದೇ ಕನ್ನಡ ಹಬ್ಬ ಬಂತು ಅಂದರೆ ಒಂಥರಾ ರಾಷ್ಟ್ರಗೀತೆಯಾಗಿದ್ದ ಈ ಹಾಡಿನ ನ್ಯೂ ವರ್ಷನ್ ಗೆ ಮಗ ಶಿವರಾಜ್ ಕುಮಾರ್ “ಚೆಲುವೆ ನಿನ್ನ ನೋಡಲು ” ಚಿತ್ರದಲ್ಲಿ   ನಟಿಸಿ ಮತ್ತೊಮ್ಮೆ ಆ ಹಾಡನ್ನು ನೆನಪಿಸುವಂತೆ ಮಾಡಿರುವುದು ಕೂಡ ಖುಷಿಯ ವಿಷಯ.ಸಾರಾಯಿ ಸೀಸೆಯಲಿ ಹಾಡು

ಹಾಗೇನೇ ‘ಮಾಂಗಲ್ಯ ಸಾಕ್ಷಿ’ ಸಿನಿಮಾದ ‘ಸಾರಾಯಿ ಸೀಸೆಯಲಿ ಹಾಡುಯಾರಿಗೆ ಇಷ್ಟ ಇಲ್ಲ ಹೇಳಿ,ತನ್ನವಳಿಗಾಗಿ ಬಾಟಲಿ ಹಿಡಿದು ಊರೆಲ್ಲಾ ಸುತ್ತೋ ದೇವದಾಸನ ಅಭಿಜಿತ್ ಪಾತ್ರಕ್ಕೆ ಫಿದಾ ಆಗದಿದ್ದೋರೆ ಇಲ್ಲಾ ಅನ್ಸುತ್ತೆ…ಸಿನಿಮಾ ರಿಲೀಸ್ ಆದಾಗಿನಿಂದ ಪ್ರೀತಿ ಕಳಕೊಂಡ ಪ್ರತೀ ಪ್ರೇಮಿಗೂ ಕೊಡುಗೆ ಕಾಣ್ತಾ ಇತ್ತು ಈ ಸಾಂಗ್. ಈ ಹಾಡು ಫೇಮಸ್ ಆಗುತ್ತಾ ಇದ್ದಂತೆ, ಹಾಡಿನ ಪಾತ್ರವನ್ನೇ ಸಿನಿಮಾ ಹೆಸರಾಗಿಸಿ ಕೊಂಡಿದ್ದು,ಲೂಸ್ ಮಾದ ಯೋಗಿ ಸಿನಿಮಾ”ದೇವ್ ದಾಸ” ಗೆ. ಹೌದು ಈ ಸಿನಿಮಾದಲ್ಲೂ ಸಹ ನಾಯಕನ ಪ್ರೇಮ ವೈಫಲ್ಯ ಆದಾಕ್ಷಣ ಮತ್ತದೇ ಹಾಡನ್ನು ಮರುಬಳಕೆ ಮಾಡಿ ಹೊಸ ರೀತಿಯಲ್ಲಿ ತೋರಿಸುವ ಪ್ರಯತ್ನ ನಡೀತು.‘ಜೋಕೆ ನಾನು ಬಳ್ಳಿಯ ಮಿಂಚು’

ಸದ್ಯಕ್ಕೆ ಈಗ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಕೆಜಿಎಫ್’ ನಲ್ಲಿ ಅಣ್ಣಾವ್ರ ಎವರ್ ಗ್ರೀನ್ ಹಾಡನ್ನು ಬಳಸಿಕೊಳ್ಳಲಾಗುತ್ತಿದೆ. ನಿಮಗೆಲ್ಲಾ ಗೊತ್ತಿರುವ ಹಾಗೆ ‘ಕೆಜಿಎಫ್’ 80ರ ದಶಕದಲ್ಲಿ ನಡೆಯುವ ಕಥೆಯಾಗಿದ್ದು, ಹೀಗಾಗೆ 70ರ ದಶಕದ ಅಣ್ಣಾವ್ರ ಹಿಟ್ ಸಾಂಗ್ ಅನ್ನು ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗುತ್ತಿದೆ.1970 ರಲ್ಲಿ ತೆರೆ ಕಂಡ ‘ಪರೋಪಕಾರಿ’ ಸಿನಿಮಾದ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡನ್ನು ಬಳಸಿಕೊಳ್ಳಲಾಗ್ತಿದೆ.. ಎಲ್ ಆರ್ ಈಶ್ವರಿ ಅವರ ಕಂಚಿನ ಕಂಠದಿಂದ ಮೂಡಿ ಬಂದಿದ್ದ, ಉಪೇಂದ್ರ ಕುಮಾರ್ ಅವರು ಮ್ಯೂಸಿಕ್ ನೀಡಿದ್ದ ಹಿಟ್ ಸಾಂಗ್ ಇದು..ಹಾಡನ್ನು ರಿಮೀಕ್ಸ್ ಮಾಡಿ ಸಿನಿಮಾದಲ್ಲಿ ಬಳಸಿಕೊಳ್ಳಲಾಗ್ತಿದೆ.. ಈ ಎವರ್ ಗ್ರೀನ್ ಹಾಡಿಗೆ ಸೊಂಟ ಬಳಕಿಸುವ ಅವಕಾಶ ಬಾಹುಬಲಿ ಸಿನಿಮಾದ ಬೆಡಗಿ ತಮನ್ನಾಗೆ ಒದಗಿ ಬಂದಿದೆ.. ಸದ್ಯದಲ್ಲೆ ಈ ಸಿನಿಮಾವನ್ನು ತೆರೆಮೇಲೆ ಕಾಣಬಹುದು.ಹವಾ ಹವಾಯಿ

‘ರೂಪು ತೆರಾ ಮಸ್ತಾನ’ ……ಎಂಬ   ಆರಾಧನಾ   ಮೂವಿಯ ಗೀತೆ..  ತುಂಬ ಹಳೇಯ ಹಾಡು.. ಇಂದಿನ ಹಾಡುಗಳಷ್ಟು ಯಾಂತ್ರಿಕತೆ ಇರದ, ಮನಸ್ಸಿಗೊಂದು ಹಿತವಾದ ಆನಂದ ನೀಡೋ, ಮನಸಲ್ಲಿ ಸದಾ ಹಚ್ಚ ಹಸಿರಾಗಿ ಉಳಿಯೋ ನೂರಾರು ಹಾಡುಗಳಲ್ಲಿ ಇದೂ ಒಂದು.. ಹಾಡು ಹಳೆಯದಾದರೇನು, ಭಾವನೆಗಳು ಹೊಸತೇ ಅಲ್ಲವೇ…  1987ರಲ್ಲಿ ತೆರೆ ಕಂಡ ಇದೇ ಮಿಸ್ಟರ್​ ಇಂಡಿಯಾ ಚಿತ್ರದಲ್ಲಿ ಶ್ರೀದೇವಿ ಹವಾ ಹಾವಾಯಿ ಅಂತ ಕುಣಿದಿದ್ದರು.. ಬಳುಕೋ ಬಳ್ಳಿಯಂತೆ ಕಂಗೊಳಿಸಿದ್ದ ಈ ಚೆಲುವೆಯನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ಹೋದವರೆ ಹೆಚ್ಚು.. ಕವಿತಾ ಕೃಷ್ಣ ಮೂರ್ತಿ ಹಾಡಿದ್ದ ಹವಾ ಹವಾಯಿ ಹಾಡಿನ ಹವಾ ಈಗ ರೀಮಿಕ್ಸ್​ ಆಗಿ ನಿಮ್ಮ ಮುಂದೆ ಬಂದಿದೆ ..ಹೌದು.. ವಿದ್ಯಾಬಾಲನ್​ ಅಭಿನಯದ “ಥುಮಾರಿ ಸುಲು” ಚಿತ್ರದಲ್ಲಿ ಈ ಹಾಡನ್ನು ರೀಮೀಕ್ಸ್​​ ಮಾಡಲಾಗಿದೆ.. ವಿದ್ಯಾ ಬಾಲನ್​​ ಸೀರೆಯುಟ್ಟು ಹವಾ ಹವಾಯಿ ಎಂದಿದ್ದರು.ಅದೇನೇ ಇರಲಿ ಭಾವನೆಗಳ ಗುಚ್ಛದೊಳಗೆ ಸೇರಿ, ಹೊಸ ಹೊಸ ರೂಪ ತಳೆಯೊ ಹತ್ತು ಹಲವು ಹಾಡುಗಳು ಅಚ್ಚಳಿಯದೇ, ನಮ್ಮ ಮನಸ್ಸಲ್ಲಿ ಉಳಿದಿವೆ.. ಒಂದಿರುಳು ಕನಸಲ್ಲಿ ಕೇಳಿದ ಮಾತುಗಳಂತೆ ಮನಸಲ್ಲಿ ಮಸುಕಾದ ಹಾಡುಗಳು ಎಷ್ಟೋ ಇದೆ.. ಅವುಗಳೆಲ್ಲವನ್ನೂ ನೆನಪು ಮಾಡಿಕೊಂಡು ಹೇಳಲು ಸಾಧ್ಯವಿಲ್ಲ.. ಆದರೆ ನೋವಲ್ಲಿ, ನಲಿವಲ್ಲಿ, ಹಗಲು ಇರುಳು , ನೆರಳು  ಎಲ್ಲೆಲ್ಲೂ ನೆನಪಾಗುವ ಹಾಡುಗಳ ಹೊಸ ಅವತಾರಕ್ಕೆ ಬದಲಾಯಿಸುವ ನೆಪದಲ್ಲಿ ಅವುಗಳ  ಬಣ್ಣ, ಗುಣ  ಮಾಸದೇ ಹಾಗೆ ಉಳಿದಿರಲಿ ಎನ್ನುವುದ  ನಮ್ಮ ಆಶಯ.

 

Tags

Related Articles