ಸುದ್ದಿಗಳು

‘ಪಡ್ಡೆಹುಲಿ’ ಸಿನಿಮಾ ತಂಡದಿಂದ ಸ್ಮಾರಕಕ್ಕೆ ಹಾನಿ

ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ಸಿನಿಮಾ

ಬೆಂಗಳೂರು, ಸೆ.21: ‘ಪಡ್ಡೆಹುಲಿ’ ಸಿನಿಮಾ ತಂಡ ಚಿತ್ರದುರ್ಗದ ಐತಿಹಾಸಿಕ ಕೋಟೆಯಲ್ಲಿ ಚಿತ್ರೀಕರಣ ಮಾಡುವುದರ ಜೊತೆಗೆ ಇಲ್ಲಿನ ವಾತಾವರಣ ಹಾಳು ಮಾಡಿದ್ದಾರೆ ಎನ್ನಲಾಗಿದೆ.

ಐತಿಹಾಸಿಕ ಸ್ಮಾರಕಕ್ಕೆ ದಕ್ಕೆ

ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ‘ಪಡ್ಡೆಹುಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಇತ್ತೀಚೆಗೆ ಈ ಸಿನಿಮಾದ ಚಿತ್ರೀಕರಣ ಚಿತ್ರದುರ್ಗ ಕೋಟೆಯಲ್ಲಿ ನಡೆದಿತ್ತು. ಈ ವೇಳೆ ನಟ ರವಿಚಂದ್ರನ್ ಕೂಡ ಭಾಗಿಯಾಗಿದ್ದು, ಈ ವೇಳೆ ಅಧ್ಬುತವಾಗಿ ಚಿತ್ರೀಕರಣ ಮಾಡಲಾಗಿತ್ತು. ಇನ್ನು ಈ ವೇಳೆ ಬಣ್ಣವನ್ನೆಲ್ಲಾ ಮೆಟ್ಟಿಲುಗಳ ಮೇಲೆ ಚೆಲ್ಲಲಾಗಿದೆ. ಇದರಿಂದ ಐತಿಹಾಸಿಕ ಸ್ಮಾರಕಕ್ಕೆ ಧಕ್ಕೆಯಾಗಿದೆ ಅಂತ ಆರೋಪಿಸಲಾಗಿದೆ.

ದಕ್ಕೆಯಾಗಿದೆ ಅಂತ ಸ್ಥಳೀಯರ ಆರೋಪ

ಹೌದು, ಚಿತ್ರದುರ್ಗದ ಕೋಟೆ ಐತಿಹಾಸಕ ಸ್ಥಳಗಳಲ್ಲಿ ಒಂದು,  ಈ ಕೋಟೆಯನ್ನು ವೀಕ್ಷಣೆ ಮಾಡಲು ಪ್ರತಿ ದಿನ ಸಾವಿರಾರು ಮಂದಿ ಬಂದು, ಕಣ್ತುಂಬಿಕೊಂಡು ತೆರಳುತ್ತಾರೆ. ಅದರಲ್ಲೂ ಚಿತ್ರದುರ್ಗ ಕೋಟಿಯನ್ನು  ನೋಡಲು ಅಂತಾನೆ ದೇಶ ವಿದೇಶಗಳಿಂದ ಫಾರಿನ್ ಮಂದಿ ಬರುತ್ತಾರೆ. ಪುರಾತತ್ವ ಇಲಾಖೆ ಕೂಡ ಇದನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಆದರೆ ಇದೀಗ ಈ ಸ್ಮಾರಕಕ್ಕೆ ಧಕ್ಕೆಯಾಗಿದೆ ಅಂತಾ ಆರೋಪಿಸಲಾಗಿದೆ.ಕಂಡು ಕಾಣದಂತಿದೆ ಪುರಾತತ್ವ ಇಲಾಖೆ

‘ಪಡ್ಡೆಹುಲಿ’ ಚಿತ್ರೀಕರಣ ಮಾಡುವಾಗ ಇಲ್ಲಿನ ಮೆಟ್ಟಿಲುಗಳು ಕೆಲವೊಂದು ಪ್ರದೇಶಗಳ ಮೇಲೆ ಬಣ್ಣ ಚೆಲ್ಲಾಡಲಾಗಿದೆ. ಆದರೆ ಇದನ್ನು ಸ್ವಚ್ಚಗೊಳಿಸದ ಚಿತ್ರತಂಡ ಅಲ್ಲಿಂದ ಹಾಗೆ ಹೋಗಿದೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಇದನ್ನ ಕಂಡು ಪುರಾತತ್ವ ಇಲಾಖೆ ಕೂಡ ಬಣ್ಣವೆಲ್ಲ ಹಾಗೆ ಇದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಬಣ್ಣ ಹಾಗೂ ಇನ್ನಿತರ ವಸ್ತುಗಳು ಹಾಗೇ ಬಿದ್ದಿವೆಯಂತೆ. ಇನ್ನು ಇಲ್ಲಿನ ಚಿತ್ರೀಕರಣ ಪ್ಯಾಕ್ ಅಪ್ ಆಗಿ ೨ ದಿನ ಕಳೆದಿದೆ. ಆದರೂ ಈ ಪ್ರೇಕ್ಷಣೀಯ ಸ್ಥಳ ಸ್ವಚ್ಚವಾಗಿಲ್ಲ ಅನ್ನುವುದು ಸ್ಥಳೀಯರ ಮಾತು.

 

Tags