ಸುದ್ದಿಗಳು

‘ಫೈಲ್ವಾನ್’ ಸಿನಿಮಾ ಸ್ಟಂಟ್ ಮಾಸ್ಟರ್ ಯಾರು ಗೊತ್ತೆ..?

ಬೆಂಗಳೂರು, ಸೆ.12: ‘ಪೈಲ್ವಾನ್’ ಗಿರಿ ಮಾಡುತ್ತಿರುವ ಸುದೀಪ್ ಅವರ ಸ್ಟಂಟ್‌  ಹಿಂದೊಂದು ಶ್ರಮ ಇದೆ. ಅಂತಾರಾಷ್ಟ್ರೀಯ ಫೈಟರ್ ‘ಲರ್ನೆಲ್ ಸ್ಟೋವೆಲ್’ ಈ ಸಿನಿಮಾಕ್ಕೆ ಸ್ಟಂಟ್ ಮಾಸ್ಟರ್ ಆಗಿದ್ದಾರೆ.

ಸದ್ಯ ನಟ ಸುದೀಪ್ ಪೈಲ್ವಾನ್ ಸಿನಿಮಾ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಅವರ ಸಿನಿಮಾಗಳು ಅಂದರೆ ಕೇಳಬೇಕಾ..? ಏನಾದರೂ ವಿಶೇಷ ಇದ್ದೇ ಇರುತ್ತದೆ. ಇದೀಗ ಪೈಲ್ವಾನ್ ಸಿನಿಮಾ ಕೂಡ ಹಾಗೆ. ಈ ಸಿನಿಮಾ ಟೀಸರ್ ಸುದೀಪ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲಾಗಿತ್ತು. ಈ ಟೀಸರ್‌ ನೋಡಿದ ಅಭಿಮಾನಿಗಳು ಇವರು ಸುದೀಪಾ..? ಎನ್ನುವ ಪ್ರಶ್ನೆಯನ್ನು ತಮ್ಮಲ್ಲೇ ತಾವು ಕೇಳಿಕೊಂಡರು.ಅಂತಾರಾಷ್ಟ್ರೀಯ ಮಟ್ಟದ ಸ್ಟಂಟ್ ಮಾಸ್ಟರ್

ಇಡೀ ಸಿನಿಮಾ ಏನು ಅನ್ನುವುದನ್ನು ಕೊಂಚ ಮಟ್ಟಿಗೆ ಈ ಟೀಸರ್ ತಿಳಿಸಿತ್ತು. ಸುದೀಪ್ ಹೀಗೆ ಬದಲಾಗಲೂ ಕಾರಣವೂ ಇದೆ. ಇದಕ್ಕೆ ಮುಖ್ಯ ಕಾರಣ ಇವರ ಹಿಂದೆ ಇರುವ ಸ್ಟಂಟ್ ಮಾಸ್ಟರ್. ನೂರಕ್ಕೂ ಅಧಿಕ ಸಿನಿಮಾಗಳಿಗೆ ಸ್ಟಂಟ್ ಮಾಸ್ಟರ್ ಆಗಿರುವ ಲರ್ನೆಲ್ ಸ್ಟೋವೆಲ್. ಇವರು ಅಂತಾರಾಷ್ಟ್ರೀಯ ಫೈಟರ್ ಕೂಡ ಆಗಿದ್ದಾರೆ. ‘ಬಾಹುಬಲಿ 2’, ‘ಸುಲ್ತಾನ್ ಹೀಗೆ ಹಲವಾರು ಸಿನಿಮಾಗಳಿಗೆ ಸ್ಟಂಟ್ ಮಾಸ್ಟರ್ ಆಗಿರುವ ಇವರು ಇದೀಗ ಪೈಲ್ವಾನ್ ಗೂ ಸ್ಟಂಟ್ ಮಾಸ್ಟರ್ ಆಗಿದ್ದಾರೆ. ಈಗಾಗಲೇ ಅನೇಕ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ತಮ್ಮ ಹವಾ ಎಬ್ಬಿಸಿರುವ ಮಾಸ್ಟರ್ ಇದೀಗ ಪೈಲ್ವಾನ್‌ ನಲ್ಲೂ ತಮ್ಮ ಸಾಹಸ ತೋರುತ್ತಿದ್ದಾರೆ.ಇನ್ನು, ಪೈಲ್ವಾನ್ ಚಿತ್ರವನ್ನು ಈ ಹಿಂದೆ ‘ಹೆಬ್ಬುಲಿ’ ಎಂಬಂತಹ ಬ್ಲಾಕ್ ಬಸ್ಟರ್ ಚಿತ್ರಕ್ಕೆ ನಿರ್ದೇಶನ ಮಾಡಿದಂತಹ ಕೃಷ್ಣ ಈ ಫೈಲ್ವಾನ್‌ಗೆ ಮತ್ತೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಇದೆ. ಇನ್ನು ಈಗಾಗಲೇ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಕೂಡ ಭಾಗಿಯಾಗಿದ್ದಾರೆ. ಇನ್ನು ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ಚಿತ್ರಕ್ಕೆ  ಕೋಟಿ ಕೋಟಿ ಬಂಡವಾಳ ಹೂಡಲಾಗುತ್ತಿದೆ.

Tags