ಸುದ್ದಿಗಳು

ಪೂಜಾಗಾಂಧಿ ‘’ಸಿನಿಮಾ ಫ್ಯಾಕ್ಟರಿ’’ಗೆ ಬೀಗ ಜಡಿದದ್ದು ಯಾಕೆ..!?!

ಬರುಬರುತ್ತಾ ಜೆ.ಡಿ. ಚಕ್ರವರ್ತಿ ಹಾಗೂ ಪೂಜಾ ಗಾಂಧಿ ನಡುವೆ ವೈಮನಸ್ಸು ಉಂಟಾಗಿತ್ತು

ಬೆಂಗಳೂರು, ಸೆ.14: ನಟಿ ಪೂಜಾಗಾಂಧಿಯವರ ಸಿನಿಮಾ ಫ್ಯಾಕ್ಟರಿಗೆ ಬೀಗ ಜಡಿಯಲಾಗಿದೆ ಎನ್ನುವ ಮಾತುಗಳು ಇದೀಗ ಗಾಂಧಿ ನಗರದಲ್ಲಿ ಓಡಾಡುತ್ತಿವೆ.

ನಟಿ ಪೂಜಾ ಗಾಂಧಿ ಮುಂಗಾರು ಮಳೆ ಸಿನಿಮಾ ಮೂಲಕ ಬಹಳಷ್ಟು ಖ‍್ಯಾತಿ ಪಡೆದ ನಟಿ. ಈ ಸಿನಿಮಾ ಪೂಜಾಗಾಂಧಿಗೆ ಸಾಕಷ್ಟು ಯಶಸ್ಸು ತಂದು ಕೊಟ್ಟ ಸಿನಿಮಾ. ಈ ಸಿನಿಮಾದ ನಂತರ ಪೂಜಾಗಾಂಧಿ ಕನ್ನಡ ಸಿನಿಮಾ ರಂಗದಲ್ಲಿ ನೆಲೆಯೂರಿದ ನಟಿ,  ಈಗಾಗಲೇ ಸಿನಿಮಾ ಅಷ್ಟೇ ಅಲ್ಲದೆ ರಾಜಕೀಯ ರಂಗದಲ್ಲೂ ಈ ನಟಿ ಮುನ್ನುಗುತ್ತಿದ್ದಾರೆ. ಇವರ ಸಿನಿಮಾ ಹಿಟ್ ಕೊಡಲು ಪ್ರಾರಂಭಿಸಿದಾಗಲೇ ಇವರು ಸಿನಿಮಾ ಫ್ಯಾಕ್ಟರಿಯನ್ನು ಆರಂಭಿಸಿದ್ದರು..!!ಯುವ ಪ್ರತಿಭೆಗಳಿಗಾಗಿ ಸಿನಿಮಾ ಫ್ಯಾಕ್ಟರಿ

ಪೂಜಾ ಗಾಂಧಿ ನಟನೆಯ ನಂತರ ಸಿನಿಮಾ ನಿರ್ಮಾಣವನ್ನು ಕೈಗೆತ್ತಿಕೊಂಡಿದ್ದರು. “ಅಭಿನೇತ್ರಿ” ಸಿನಿಮಾವನ್ನು ಇವರೇ ನಿರ್ಮಾಣ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲ ‘ರಾವಣಿ’ ಸಿನಿಮಾ ಕೂಡ ಇವರದ್ದೇ. ಅದಾದ ನಂತರ ಪೂಜಾ ಮತ್ತೆ ಮೂರು ಸಿನಿಮಾ ನಿರ್ಮಿಸುವುದಾಗಿ ಹೇಳಿದ್ದರು. ಈ ನಿಟ್ಟಿನಲ್ಲಿ” ಸಿನಿಮಾ ಫ್ಯಾಕ್ಟರಿ”ಯೊಂದನ್ನು ತೆರೆದಿದ್ದರು. ಯುವ ಪ್ರತಿಭೆಗಳಿಗೆ ಒಂದು ವೇದಿಕೆಯಾಗಲೀ ಪ್ರತಿಭಾವಂತರಿಗೆ ಒಂದು ಅವಕಾಶ ಸಿಗಲಿ ಎನ್ನುವುದೆ ಇವರ ಮುಖ್ಯ ಉದ್ದೇಶವಾಗಿತ್ತು.ಜೆ.ಡಿ. ಚಕ್ರವರ್ತಿ ಸಹಯೋಗದಲ್ಲಿ ಫ್ಯಾಕ್ಟರಿ

ಜೆ.ಡಿ. ಚಕ್ರವರ್ತಿ ಸಹಯೋಗದಲ್ಲಿ ಪೂಜಾ ಸಿನಿಮಾ ಫ್ಯಾಕ್ಟರಿ ನಿರ್ಮಿಸಿದ್ದರು. ಪೂಜಾ ಗಾಂಧಿಯ ಎಲ್ಲಾ ಯೋಜನೆಗಳಿಗೆ ಚಕ್ರವರ್ತಿ ಬೆನ್ನೆಲುಬಾಗಿದ್ದರು ಎನ್ನಲಾಗುತ್ತಿದೆ. ಆದರೆ ಬರುಬರುತ್ತಾ ಜೆ.ಡಿ. ಚಕ್ರವರ್ತಿ ಹಾಗೂ ಪೂಜಾ ಗಾಂಧಿ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು. ಇದೀಗ ಇವರ ಎಂಟರ‍್ಟೈನ್ಮೆಂಟ್ ಫ್ಯಾಕ್ಟರಿಗೆ ಬೀಗ ಹಾಕಿದ್ದಾರೆ ಅನ್ನುವ ವಿಚಾರ ಹಾಗೂ  ಇವರ ನಡುವಿನ ಸಂಬಂಧಕ್ಕೆ ಕತ್ತರಿ ಬಿದ್ದಿರುವುದು ನಿಜ ಎನ್ನುವಂತಾಗಿದೆ.ಪೂಜಾ ಗಾಂಧಿಯೇ ಉತ್ತರ ನೀಡಬೇಕು

ನಿಜಕ್ಕೂ ಇವರ ಸಿನಿಮಾ ಕಾರ್ಖಾನೆಗೆ ಬೀಗ ಬಿದ್ದಿದೆಯಾ ಅನ್ನೋದು ಸದ್ಯದ ಪ್ರಶ್ನೆಯಾದರೂ ನಂಬಲರ್ಹ ಮೂಲಗಳ ಪ್ರಕಾರ ಇದು ಸತ್ಯ. ಯಾಕೆ ಈ ಫ್ಯಾಕ್ಟರಿಗೆ ಬೀಗ ಬಿತ್ತು ಅನ್ನುವುದು ಮಾತ್ರ ಕುತೂಹಲ. ಈ ವಿಚಾರವನ್ನು ಸ್ವತಃ ಪೂಜಾ ಗಾಂಧಿಯವರೇ ಹೇಳಬೇಕಾಗಿದೆ.

Tags

Related Articles