ಸುದ್ದಿಗಳು

‘ಪ್ರಜಾಕೀಯ’ ಪಕ್ಷಕ್ಕೆ ಕ್ಲಾಸ್ ತೆಗೆದುಕೊಂಡ ಟ್ವಿಟಿಗರು…!

ಒಂದು ಸುಳಿಯಲ್ಲಿ ಸಿಲುಕಿದ 'ಪ್ರಜಾಕೀಯ ಪಕ್ಷ'!?!

 

ಇತ್ತೀಚೆಗಷ್ಟೆ ಪಾಕಿಸ್ತಾನದಲ್ಲಿ ನೂತನ ಪ್ರಧಾನಮಂತ್ರಿಯಾಗಿ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ತಮ್ಮ ಮೊದಲ ಭಾಷಣ ಮಾಡುವಾಗ ಕೆಲವೊಂದಿಷ್ಟು ಪ್ರಜಾಕೀಯದ ರೀತಿಯ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದರು. ಇದನ್ನು ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಇದೀಗ ವ್ಯಕ್ತವಾಗುತ್ತಿದೆ ಸಾಕಷ್ಟು ಆಕ್ಷೇಪ

ಬೆಂಗಳೂರು, ಆ.25: ಸದ್ಯ ಉಪ್ಪಿ ‘ಪ್ರಜಾಕೀಯ ಪಕ್ಷ’ ಕಟ್ಟಿ ಸಾಕಷ್ಟು ಬದಲಾವಣೆ ತರಬೇಕು ಅಂತಾ ಮುಂದಾಗುತ್ತಿದ್ದಾರೆ. ಆದರೆ ಇದೀಗ ಈ ‘ಪ್ರಜಾಕೀಯ’ ಪಕ್ಷ ಒಂದು ಸುಳಿಯಲ್ಲಿ ಸಿಲುಕಿದೆ. ಅಂದರೆ ಯಾವುದೋ ಒಂದು ವಿಚಾರಕ್ಕೆ ಇದೀಗ ಟ್ವಿಟಿಗರು ಫುಲ್ ಗರಂ ಆಗಿದ್ದಾರೆ.

ಹೌದು, ಉಪೇಂದ್ರ ತಮ್ಮದೇ ಆದ ಒಂದು ಪಕ್ಷವನ್ನು ಕಟ್ಟಬೇಕು ಎನ್ನುವುದು ಉಪ್ಪಿಯ ಬಹುಕಾಲದ ಕನಸು. ಈಗಾಗಲೇ ಸಾಕಷ್ಟು ಬಾರಿ ಉಪೇಂದ್ರ ತಮ್ಮ ಪ್ರಜಾಕೀಯ ಹೇಗಿರಬೇಕು ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ. ಪ್ರತಿ ಬಾರಿಯೂ ಕೂಡ ಪ್ರಜಾಕೀಯದ ಬಗ್ಗೆ ಉಪೇಂದ್ರ ಮಾತನಾಡಿದಾಗ ಅಭಿಮಾನಿಗಳು ‘ಎಸ್ ‘ ಎನ್ನುತ್ತಿದ್ದರು. ಆದರೆ ಈಗ ಯಾಕೋ ಸಿಟ್ಟಿಗೆದ್ದಿದ್ದಾರೆ. ಅದಕ್ಕೂ ಕಾರಣವಿದೆ. ಇತ್ತೀಚೆಗಷ್ಟೆ ಪಾಕಿಸ್ತಾನದಲ್ಲಿ ನೂತನ ಪ್ರಧಾನಮಂತ್ರಿಯಾಗಿ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ತಮ್ಮ ಮೊದಲ ಭಾಷಣ ಮಾಡುವಾಗ ಕೆಲವೊಂದಿಷ್ಟು ಪ್ರಜಾಕೀಯದ ರೀತಿಯ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದರು. ಇದನ್ನು ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಇದೀಗ ಸಾಕಷ್ಟು ಆಕ್ಷೇಪ ವ್ಯಕ್ತವಾಗುತ್ತಿದೆ.

ಅಂದು ಪ್ರಜಾಕೀಯ, ಇಂದು ಪ್ರಚಾರಕೀಯ

ಭಾರತೀಯ ಸೈನ್ಯ ಪ್ರತಿನಿತ್ಯ ಪಾಕಿಸ್ತಾನದ ಜೊತೆ ಸಮರ ಸಾರುತ್ತಲೇ ಇದೆ ಅಂಥವರ ಪರವಾಗಿ ಪೋಸ್ಟ್ ಮಾಡುವುದು ಸರಿಯಲ್ಲ ಅಂತಾ ಕಿಡಿಕಾರಿದ್ದಾರೆ. ಪ್ರತಿನಿತ್ಯ ಅದೆಷ್ಟೋ ಸೈನಿಕರು ಪಾಕ್ ವಿರುದ್ಧ ಹೋರಾಡಿ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಪಾಕ್ ಕಾರಣ ಅವರ ಪರ ಮಾತನಾಡುವ ಮುನ್ನ ಸ್ವಲ್ಪ ಎಚ್ಚರವಿರಲಿ ಅಂತಾ ಇನ್ನೊಬ್ಬರು ತಮ್ಮ ಅನಿಸಿಕೆ ಹೇಳಿದ್ದಾರೆ. ಇನ್ನು ಗಣಪತಿ ಭಟ್ ಎನ್ನುವವರು ಅಂದು ಪ್ರಜಾಕೀಯ, ಇಂದು ಪ್ರಚಾರಕೀಯ, ನಾಳೆ ಅದೆ ಹೊಲಸು ರಾಜಕೀಯ ಅಂತಾ ಕಮೆಂಟ್ ಹಾಕಿದ್ದಾರೆ. ಇನ್ನು ಈ ಬಗ್ಗೆ ಉಪೇಂದ್ರ ಯಾವುದೇ ರೀತಿಯ ಕಮೆಂಟ್ ಮಾಡಿಲ್ಲ. ಆದರೆ ಇಂಥಹ ಪರಿಸ್ಥಿತಿಯನ್ನು ಹೇಗೆ ಉಪೇಂದ್ರ ನಿಭಾಯಿಸುತ್ತಾರೋ ಕಾದು ನೋಡಬೇಕು.

Tags