ಸುದ್ದಿಗಳು

ಅಪ್ಪು ಟ್ವಿಟರ್ ಖಾತೆಯ ಮೊದಲ ಟ್ವೀಟ್ ಏನು ಗೊತ್ತೇ?

ಅಧಿಕೃತವಾಗಿ ಟ್ವಿಟ್ಟರ್ ಖಾತೆಗೆ ಕಾಲಿಟ್ಟ ಪವರ್ ಸ್ಟಾರ್

ಪುನೀತ್ ಪ್ರಪ್ರಥಮ ಬಾರಿಗೆ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದು, ಅದರಲ್ಲಿ ಮೊದಲನೆಯ ಟ್ವೀಟ್ ಅನ್ನು ಬರೆದಿದ್ದಾರೆ. ನಮ್ಮ ಮೊದಲ ಪಿಆರ್ ಕೆ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಸಿನಿಮಾ , ಅಕ್ಕ ಸಮ್ಮೇಳನದಲ್ಲಿ ಟೀಸರ್ ಬಿಡುಗಡೆಯಾಗಿದೆ. ನೋಡಿ ಆನಂದಿಸಿ, ಪ್ರೋತ್ಸಾಹಿಸಿ ಎಂದು ಹಂಚಿಕೊಂಡಿದ್ದಾರೆ.ಬೆಂಗಳೂರು, ಸೆ.03: ಸದ್ಯ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ಅಧಿಕೃತವಾಗಿ ಟ್ವಿಟ್ಟರ್ ಖಾತೆಗೆ ಕಾಲಿಟ್ಟಿದ್ದಾರೆ. ಈಗಾಗಲೇ ಬಹಳಷ್ಟು ಮಂದಿ ಅಭಿಮಾನಿಯ ಕನಸು ಇದೀಗ ನನಸಾಗಿದೆ‌. ಈ ಖಾತೆ ತೆರೆದಾಗ ಅಪ್ಪು ಮೊದಲ ಟ್ವಿಟ್ ಏನಾಗಿರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

ಅಪ್ಪುವಿನ ಮೊದಲ ಟ್ವೀಟ್

ಹೌದು, ಪುನೀತ್ ತಮ್ಮ ಅಧಿಕೃತ ಖಾತೆಯಲ್ಲಿ ಮೊದಲ ಟ್ವಿಟ್ ಮಾಡಿದ್ದಾರೆ. ಇದು ನನ್ನ #ಫಸ್ಟ್ ಟ್ವೀಟ್ #ಪಿಆರ್ ಕೆ ಪ್ರೋಡಕ್ಷನ್, ಫಸ್ಟ್ ಮೂವಿ, #ಕವಲುದಾರಿ ಟೀಸರ್ ಅಂತಾ ಹ್ಯಾಶ್​​ ಟ್ಯಾಗ್​ ಮಾಡಿ, ಅಕ್ಕ ಸಮ್ಮೇಳನ 2018 ರಲ್ಲಿ ಲಾಂಚ್​ ಮಾಡಿದ್ದೀವಿ. ನೋಡಿ ಎನ್ ಕರೇಜ್ ಮಾಡಿ ಅಂತಾ ಬರೆದುಕೊಂಡಿದ್ದಾರೆ.ಕವಲುದಾರಿ’ ಪುನೀತ್ ನಿರ್ಮಾಣ ಮಾಡುತ್ತಿರುವ ಸಿನಿಮಾ. ಅಂದರೆ ಪಿಆರ್ ಕೆ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಸಿನಿಮಾವಿದು. ಸದ್ಯ ಈ ಸಿನಿಮಾದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಈ ಸಿನಿಮಾದ ಟೀಸರ್ ಅಮೇರಿಕಾದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ. ಮೊದಲ ಪೋಸ್ಟರ್, ಲುಕ್ ನಿಂದಲೇ ಬಾರೀ ಕುತೂಹಲ ಮೂಡಿಸಿದ್ದ ಈ ಸಿನಿಮಾ. ಇದೀಗ ಟೀಸರ್ ಮೂಲಕವೂ ಸೆಳೆಯುತ್ತಿದೆ. ೨೦ ಸೆಕೆಂಡ್ ನಲ್ಲಿ ಸಿನಿಮಾದಲ್ಲಿ ಏನೆಲ್ಲಾ ಕುತೂಹಲವನ್ನು ಈ ಟೀಸರ್ ಜಾಸ್ತಿ ಮಾಡುವಂತಿದೆ‌.

Tags